ಕನ್ನಡಪ್ರಭ ವಾರ್ತೆ ದೇವನಹಳ್ಳಿ
ದೇವನಹಳ್ಳಿ ಪಟ್ಟಣದ ಲಯನ್ಸ್ ಭವನದಲ್ಲಿ ಸಂಚಾರ ಈಶಾನ್ಯ ಉಪವಿಭಾಗ ಹಾಗೂ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಪಟ್ಟಣದಲ್ಲಿನ ಸಂಚಾರಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಸಾರ್ವಜನಿಕರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ. ನಮ್ಮ ಇಲಾಖೆ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು ಇತರೆ ಸಮಸ್ಯೆಗಳ ಬಗ್ಗೆ ಆಯಾ ಇಲಾಖೆಗೆ ಪತ್ರ ಬರೆಯಲಾಗುವುದು ಎಂದರು.
ದೇವನಹಳ್ಳಿ ಅತಿವೇಗವಾಗಿ ಬೆಳೆಯುತ್ತಿದೆ ಅದಕ್ಕೆ ತಕ್ಕಂತೆ ವಾಹನ ದಟ್ಟಣೆಯೂ ಸಹ ಹೆಚ್ಚಾಗುತ್ತಿದೆ. ಅದಾಗ್ಯೂ ಕೂಡ ಸಿಬ್ಬಂದಿ ಕಡಿಮೆ ಇದ್ದರು ಸಹ ಇರುವ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಹೊಸ ಬಸ್ ನಿಲ್ದಾಣದಲ್ಲಿ ಹಾಗೂ ಚಿಕ್ಕಸಣ್ಣೆ ಬಳಿ ಸಿಗ್ನಲ್ ಅಳವಡಿಕೆ ಮಾಡಲಾಗುವುದು ಅಗತ್ಯವಿರುವ ಕಡೆ ಸಂಚಾರಿ ನಾಮಫಲಕಗಳ ಅಳವಡಿಕೆ ಮಾಡಲಾಗುವುದು ಲಯನ್ಸ್ ಸಂಸ್ಥೆ ಅವರು ಸಹ ನಾಮಫಲಗಳ ಅಳವಡಿಕೆ ಮಾಡಲು ಅನುಮತಿ ಕೇಳಿದ್ದಾರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ನಾಮಫಲಕಗಳನ್ನು ಅಳವಡಿಸಲಾಗುವುದು. ದೇವನಹಳ್ಳಿ ಪಟ್ಟಣದಲ್ಲಿ ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಶಾಲಾ ಕಾಲೇಜು ಹಂತದಲ್ಲಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು. ಸಾರ್ವಜನಿಕರಿಂದ ಬಂದ ಪ್ರಮುಖ ದೂರುಗಳು:ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಿಗ್ನಲ್ ಅಳವಡಿಕೆ, ಚಿಕ್ಕಸಜ್ಜೆ ಬಳಿ ಸಿಗ್ನಲ್ ಅಳವಡಿಕೆ ರಸ್ತೆ ಹಂಪ್‌ಗಳ ಅಳವಡಿಕೆ, ಫುಟ್‌ಪಾತ್‌ಗಳಲ್ಲಿನ ಅಂಗಡಿಗಳ ತೆರವು, ಹಾಗೂ ವಾಹನ ದಟ್ಟನೆ ಹೆಚ್ಚಾಗಿರುವ ಕಡೆ ಸಿಬ್ಬಂದಿ ನಿಯೋಜನೆ, ವಾಹನ ಪರವಾನಗಿ ಇಲ್ಲದೆ ೧೮ ವರ್ಷದೊಳಗಿನ ಮಕ್ಕಳ ವಾಹನ ಚಾಲನೆಗೆ ಕಡಿವಾಣ, ಶನಿವಾರ ಹಾಗೂ ಬಾನುವಾರ ನಂದಿಬೆಟ್ಟಕ್ಕೆ ತೆರಳುವ ವಾಹನಗಳ ಅತಿವೇಗಕ್ಕೆ ಕಡಿವಾಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಸಭೆಯಲ್ಲಿ ವ್ಯಕ್ತಪಡಿಸಿದರು. ದೇವನಹಳ್ಳಿ ಸಂಚಾರಿ ಇನ್ಸ್‌ಪೆಕ್ಟರ್ ಮುರಳಿಧರ್ ಮಾತನಾಡಿ ಸಿಬ್ಬಂದಿಯ ಕೊರತೆ ಇದ್ದರು ಸಹ ಇರುವ ಸಿಬ್ಬಂದಿಯಿಂದಲೇ ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡಲಾಗುತ್ತಿದೆ. ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ಸಹಕರಿಸಿ ಕುಡಿದು ವಾಹನ ಚಾಲನೆ ಮಾಡಿದರೆ ದಂಡ ವಿಧಿಸಲಾಗುವುದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಸಂಚಾರ ಸಂಪರ್ಕ ಸಭೆಗಳನ್ನು ಆಯೋಜನೆ ಮಾಡಲಾಗುವುದು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೆಲ್ಲೆ ಒಂದೆಡೆ ಸೇರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಶಂಕರ್ ಮಾತನಾಡಿ ಸಂಚಾರಿ ಪೊಲೀಸರಿಗೆ ನಮ್ಮ ಸಹಕಾರ ಸದಾ ಇರಲಿದೆ. ಲಯನ್ಸ್ ಸಂಸ್ಥೆ ಹಾಗೂ ಸಂಚಾರಿ ಠಾಣೆಯಿಂದ ಈಗಾಗಲೇ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು. ಇದೆ ವೇಳೆ ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಸತೀಶ್‌ಕುಮಾರ್, ಕೃಪಾಕರ್, ಭಾಸ್ಕರ್ ಶ್ರೀರಾಮಯ್ಯ, ಸಂಚಾರಿ ಸಬ್ ಇನ್ಸ್‌ಪೆಕ್ಟಾರ್ ಮಂಜುನಾಥ್, ಎ.ಎಸ್.ಐಗಳಾದ ನಾರಾಯಣಸ್ವಾಮಿ,ಸುರೇಶ್, ಗಿರೀಶ್‌ಜಾದವ್, ಮುಖ್ಯ ಪೇದೆ ಲೋಕೇಶ್, ರವಿಕುಮಾರ್, ಮುಖ್ಯಪೆದೆ ನರಸಿಂಹಮೂರ್ತಿ ಪೆದೆಗಳಾದ ಮಂಜುನಾಥ್ ಸಿಬ್ಬಂದಿವರ್ಗದವರು ಇದ್ದರು.