ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಹೋರೋತ್ಸವ

KannadaprabhaNewsNetwork |  
Published : Dec 02, 2024, 01:19 AM IST
11 | Kannada Prabha

ಸಾರಾಂಶ

ಮುಖ್ಯ ತೀರ್ಪುಗಾರರಾದ ಬಿಗ್‌ಮಿಶ್ರಾ ಪೇಡದ ಮಾಲಕ ಪೃಥ್ವಿ ಜೈನ್ ಮಾತನಾಡಿ, ಪ್ಲಾಸ್ಟಿಕ್ ರಹಿತ ಆಹಾರ ತಯಾರಿ, ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅವರಿಗೆ ನೆರವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಅಡುಗೆ ಮಾಡುವುದು ಒಂದು ಕಲೆ. ಇದು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ನಾಯಕತ್ವ ಗುಣ, ಸಹಬಾಳ್ವೆ, ಆರ್ಥಿಕ ಕೌಶಲ್ಯ, ಸಮಯ ಪರಿಪಾಲನೆಯ ಗುಣ ವೃದ್ಧಿಗೊಳ್ಳುತ್ತದೆ ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕಾಮರ್ಸ್ ಎಸೋಷಿಯೇಷನ್ ಸಹಭಾಗಿತ್ವದಲ್ಲಿ ನಡೆದ ಆಹಾರೋತ್ಸವ ಉದ್ಘಾಟಿಸಿ ಮಾತಾಡಿದರು.

ಮುಖ್ಯ ತೀರ್ಪುಗಾರರಾದ ಬಿಗ್‌ಮಿಶ್ರಾ ಪೇಡದ ಮಾಲಕ ಪೃಥ್ವಿ ಜೈನ್ ಮಾತನಾಡಿ, ಪ್ಲಾಸ್ಟಿಕ್ ರಹಿತ ಆಹಾರ ತಯಾರಿ, ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅವರಿಗೆ ನೆರವಾಗುತ್ತದೆ ಎಂದರು.

ತೀರ್ಪುಗಾರರಾದ ಶೈಲಶ್ರೀ, ಅಮೃತ್ ಪ್ರಭು, ಪ್ರಣಮ್ ಜೈನ್ಹಾ ಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಲಿಖಿತಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ಪ್ರತಿಜ್ಞಾ ಜೈನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ