ಆಹಾರ ಸುರಕ್ಷತಾಧಿಕಾರಿಗಳ ಭೇಟಿ ಪರಿಶೀಲನೆ

KannadaprabhaNewsNetwork |  
Published : Apr 05, 2025, 12:46 AM IST
4ಎಚ್ಎಸ್ಎನ್9 :  | Kannada Prabha

ಸಾರಾಂಶ

ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಆಹಾರ ಸುರಕ್ಷತೆ, ಶುಚಿತ್ವ ಮತ್ತು ಗುಣಮಟ್ಟ ಕುರಿತು ಪಟ್ಟಣದ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷಿತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಾಲೀಕರು ಮತ್ತು ವ್ಯಾಪಾರಸ್ಥರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಒಳ್ಳೆ ಗುಣಮಟ್ಟದ ತಿಂಡಿ ಪದಾರ್ಥ ಮತ್ತು ಆಹಾರವನ್ನು ನೀಡಬೇಕು, ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಆಹಾರ ಸುರಕ್ಷತೆ, ಶುಚಿತ್ವ ಮತ್ತು ಗುಣಮಟ್ಟ ಕುರಿತು ಪಟ್ಟಣದ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷಿತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಅಂಕಿತಾಧಿಕಾರಿ ಡಾ.ಅನಿಲ್ ಧವನ್ ಅವರ ಆದೇಶದಂತೆ ಪಟ್ಟಣದ ರಸ್ತೆ ಬದಿಯಲ್ಲಿರುವ ಕ್ಯಾಂಟೀನ್ ಸೇರಿದಂತೆ ೨೦ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷಿತ ಅಧಿಕಾರಿಗಳಾದ ಕೆ. ವಿನಯ್, ಎಂ.ಶರತ್ ಅವರು ದಿಢೀರ್‌ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳನ್ನು ಪರಿಶೀಲಿಸಿದರು.

ಕಳಪೆ ಗುಣಮಟ್ಟದ ಆಹಾರ ಸೇವನೆ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಾಲೀಕರು ಮತ್ತು ವ್ಯಾಪಾರಸ್ಥರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಒಳ್ಳೆ ಗುಣಮಟ್ಟದ ತಿಂಡಿ ಪದಾರ್ಥ ಮತ್ತು ಆಹಾರವನ್ನು ನೀಡಬೇಕು, ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ತಿಳಿಸಿದರು. ಯಾವುದೇ ಕಾರಣಕ್ಕೂ ನಿನ್ನೆ, ಮೊನ್ನೆ ತಯಾರಿಸಿರುವ ತಿಂಡಿ ಪದಾರ್ಥಗಳು, ಆಹಾರವನ್ನು ನೀಡಬಾರದು, ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಮಾಡಿದ ನಂತರ ಅವುಗಳನ್ನು ಮುಚ್ಚಿಡಬೇಕು. ಮತ್ತು ಹೋಟೆಲ್ ಆವರಣಗಳನ್ನು ಫಿನಾಯಿಲ್‌ನಿಂದ ಸ್ವಚ್ಛಗೊಳಿಸಬೇಕು ಎಂದರು.

ನೀರಿನ ಗುಣಮಟ್ಟದ ವಿಶ್ಲೇಷಣೆ, ಕೀಟ ನಿಯಂತ್ರಣ ಮತ್ತು ಆಹಾರ ನಿರ್ವಹಿಸುವವರ ವೈದ್ಯಕೀಯ ಫಿಟೈಸ್ ಪ್ರಮಾಣ ಪತ್ರಗಳು, ಬಳಸಿದ ಎಣ್ಣೆ, ತರಕಾರಿಗಳು, ಎಣ್ಣೆಗಳು ಮತ್ತು ಧಾನ್ಯಗಳು ಸೇರಿದಂತೆ ವಿನೆಗರ್ ಮತ್ತು ಆಹಾರ ಬಣ್ಣ ಏಜೆಂಟ್‌ಗಳಂತಹ ಮಸಾಲೆಗಳ ಸುರಕ್ಷತಾ ನಿಯತಾಂಕಗಳನ್ನು ಪರಿಶೀಲಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆ ಸಮಯ ಆಗಿರುವುದರಿಂದ ಸ್ವಚ್ಛತೆಗೆ ಒತ್ತು ನೀಡಬೇಕು. ಸಾರ್ವಜನಿಕರು ಆಹಾರ ಸೇವನೆಯನ್ನು ಎಚ್ಚೆತ್ತುಕೊಂಡು ಸೇವಿಸಬೇಕಾಗಿದೆ ಎಂದರು. ಸೂಚನೆ ಪಾಲನೆ ಮಾಡದೇ ಇರುವ ಹೋಟೆಲ್ ಮಾಲೀಕರಿಗೆ ಸ್ಥಳದಲ್ಲೇ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ