ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ಆಹಾರ ಸುರಕ್ಷತೆ ತರಬೇತಿ, ಪ್ರಮಾಣ ಪತ್ರ ವಿತರಣೆ

KannadaprabhaNewsNetwork |  
Published : Feb 02, 2025, 01:02 AM IST
63 | Kannada Prabha

ಸಾರಾಂಶ

2006ರಲ್ಲಿ ಆಹಾರ, ಸುರಕ್ಷಿತ ಕಾಯ್ದೆ ಮತ್ತು 2017 ತರಬೇತಿ ಕಾಯ್ದೆ 2020 ರಲ್ಲಿ ತರಬೇತಿ ಕಡ್ಡಾಯ ಕಾಯ್ದೆ ಜಾರಿಗೆ ಬಂದಿತು. ಮಾರಾಟಗಾರರು ಜನರಿಗೆ ಉತ್ತಮವಾದ ಆಹಾರವನ್ನು ಕೊಡಬೇಕು. ಜನರು ಬೇಕರಿ, ಹೋಟೆಲ್, ಪ್ರಾವಿಷನ್ ಸ್ಟೋರ್, ಟೀ ಸ್ಟಾಲ್ ಹಾಗೂ ಜನರು ತಿನ್ನುವ ಯಾವುದೇ ಪದಾರ್ಥಗಳನ್ನು ಮಾರಾಟ ಮಾಡಬೇಕಾದರೆ ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಲೈಸನ್ಸ್ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಹ್ಯಾಂಡ್‌ ಪೋಸ್ಟ್‌

ಸುರಕ್ಷತಾ ಗುಣಮಟ್ಟ ಪ್ರಾಧಿಕಾರ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ವತಿಯಿಂದ ಎಚ್‌.ಡಿ. ಕೋಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು.

ತಹಸೀಲ್ದಾರ್‌ ಶ್ರೀನಿವಾಸ್, ಮೈಸೂರು ಜಿಲ್ಲೆ ಹಾಲು ಒಕ್ಕೂಟ ಸಂಘದ ನಿರ್ದೇಶಕ ಕೆ. ಈರೇಗೌಡ ಮತ್ತು ದ್ರಾಕ್ಷಾಯಿಣಿ ಬಸವರಾಜಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ,

2006ರಲ್ಲಿ ಆಹಾರ, ಸುರಕ್ಷಿತ ಕಾಯ್ದೆ ಮತ್ತು 2017 ತರಬೇತಿ ಕಾಯ್ದೆ 2020 ರಲ್ಲಿ ತರಬೇತಿ ಕಡ್ಡಾಯ ಕಾಯ್ದೆ ಜಾರಿಗೆ ಬಂದಿತು. ಮಾರಾಟಗಾರರು ಜನರಿಗೆ ಉತ್ತಮವಾದ ಆಹಾರವನ್ನು ಕೊಡಬೇಕು. ಜನರು ಬೇಕರಿ, ಹೋಟೆಲ್, ಪ್ರಾವಿಷನ್ ಸ್ಟೋರ್, ಟೀ ಸ್ಟಾಲ್ ಹಾಗೂ ಜನರು ತಿನ್ನುವ ಯಾವುದೇ ಪದಾರ್ಥಗಳನ್ನು ಮಾರಾಟ ಮಾಡಬೇಕಾದರೆ ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಲೈಸನ್ಸ್ ಪಡೆಯಬೇಕು. ಮಾರಾಟ ಮಾಡುವುದಕ್ಕೂ ಮುನ್ನಾ ಆಹಾರದ ಬಗ್ಗೆ ತಿಳಿದುಕೊಳ್ಳಬೇಕು, ಲೈಸೆನ್ಸ್ ಪಡೆಯದೆ ಮಾರಾಟ ಮಾಡಿ ಹೆಚ್ಚು ಕಡಿಮೆ ಆದರೆ ನಿಮ್ಮ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಈರೇಗೌಡ, ತಹಸೀಲ್ದಾರ್‌ ಶ್ರೀನಿವಾಸ್, ರಾಘವೇಂದ್ರ ಶೆಟ್ಟಿ ಮಾತನಾಡಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಕರಿ ಬಸವರಾಜು, ವಿಸ್ತರಣಾಧಿಕಾರಿ ಆರೀಫ್ ಇಕ್ಬಾಲ್, ಜಯಂತ್ ಕುಮಾರ್, ರಾಮಪ್ಪ ಬಾರ್ಕಿ, ಯೋಗೀಶ್, ತಾಹೇರ ಗರಗ, ಜಗದಾಂಬ, ತರಬೇತಿದಾರರಾದ ಸವಿತಾ, ರಶ್ಮಿ, ಹಾಲು ಉತ್ಪಾದಕರ ಸಂಘದ ಸಂಘಗಳ ಸಿಬ್ಬಂದಿ ವರ್ಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ