12ನೇ ವರ್ಷದ ಕಾರ್ಯಕ್ರಮ
ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಎನ್‌ಸಿ ರಾಮಕೃಷ್ಣ (ಹೋಟೆಲ್ ರಾಜಣ್ಣ ) ಮಾತನಾಡಿ, ಕಳೆದ 12 ವರ್ಷಗಳಿಂದ ಸೇವಾ ಸಮಿತಿ ವತಿಯಿಂದ ಪಾದಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು ಈ ಬಾರಿಯ ಪಾದಯಾತ್ರೆಗೆ ಸುಮಾರು 150ಕ್ಕೂ ಹೆಚ್ಚು ಜನರು ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು ಆರು ದಿನಗಳ ಕಾಲ ಪಾದಯಾತ್ರೆಯನ್ನು ಕೈಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಮಹಾಶಿವರಾತ್ರಿ ದಿನ ಮಹಾಪೂಜೆಯಲ್ಲಿ ದರ್ಶನ ಮಾಡಲಾಗುತ್ತದೆ. ಸೇವಾ ಸಮಿತಿ ವತಿಯಿಂದ ಪಾದಯಾತ್ರಿಗಳ ಸುರಕ್ಷತೆಗಾಗಿ ಹೆಚ್ಚು ಗಮನಹರಿಸಲಾಗುತ್ತದೆ ಎಂದರು.ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಹೆಚ್ಚಿನ ಸಹಕಾರ ಸೇವೆ ನೀಡುತ್ತಿರುವ ಶಾಂತಿಗ್ರಾಮ ಸಮೀಪದ ಕಾರೇಕೆರೆ ಗೇಟ್‌ನ ಶೇಖರ್ ದಂಪತಿಯನ್ನು ಸನ್ಮಾನಿಸಲಾಯಿತು. ಪಾದಯಾತ್ರೆಯ ಅನ್ನ ದಾಸೋಹ ಕಾರ್ಯಕ್ಕೆ ಅನುಕೂಲವಾಗಲೆಂದು ವಾಹನದ ವ್ಯವಸ್ಥೆಯನ್ನು ನುಗ್ಗೇಹಳ್ಳಿ ಗ್ರಾಮದ ವಿನಯ್ ಮಾಡಿದರು. ಭಕ್ತರಿಗೆ ಆರೋಗ್ಯದ ಸುರಕ್ಷತೆಗಾಗಿ ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ರವಿ ಔಷಧಿಗಳ ವ್ಯವಸ್ಥೆಯನ್ನು ಮಾಡಿದ್ದರು.
ನುಗ್ಗೇಹಳ್ಳಿಯ ಶ್ರೀ ಪಂಚಲಿಂಗೇಶ್ವರ ಧರ್ಮಸ್ಥಳ ಪಾದಯಾತ್ರಿಗಳ ಸೇವಾ ಸಮಿತಿಯಿಂದ ಮಹಾಶಿವರಾತ್ರಿ ಅಂಗವಾಗಿ 12ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿತು.