ಮೂರು ತಿಂಗಳಿಗೊಮ್ಮೆ ಸಭೆ ಕರೆಯಲು ಒತ್ತಾಯ

KannadaprabhaNewsNetwork |  
Published : Jun 30, 2024, 12:51 AM IST
ರೈತರ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಮೂರು ತಿಂಗಳಿಗೊಮ್ಮೆ ಅರಣ್ಯ ಅಧಿಕಾರಿ | Kannada Prabha

ಸಾರಾಂಶ

ಕಾಡಂಚಿನ ಸಮೀಪದ ರೈತರ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಮೂರು ತಿಂಗಳಿಗೊಮ್ಮೆ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಕಾಡಂಚಿನ ಸಮೀಪದ ರೈತರ ಸಮಸ್ಯೆಗಳನ್ನು ಬಗೆಹರಿಸುವ ದಿಸೆಯಲ್ಲಿ ಮೂರು ತಿಂಗಳಿಗೊಮ್ಮೆ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿದ್ದ ಹನೂರು ತಾಲೂಕಿನಲ್ಲಿರುವ ರೈತ ಮುಖಂಡರ ಕುಂದು ಕೊರತೆ ಸಭೆಯಲ್ಲಿ ಈ ಕೂಗು ಕೇಳಿ ಬಂದಿದೆ. ಲೊಕ್ಕನಹಳ್ಳಿ,ಗುಂಡಿಮಾಳ, ಅಂಡಿಪಾಳ್ಯ ಸೇರಿ ವಿವಿಧ ಗ್ರಾಮಗಳ ಕಾಡಂಚಿನ ಸಮೀಪದಲ್ಲಿರುವಂತಹ ಜಮೀನುಗಳಿಗೆ ನಿತ್ಯವು ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದು, ಅರಣ್ಯಾಧಿಕಾರಿಗಳು ತಡೆಗಟ್ಟುವ ಮೂಲಕ ಶಾಶ್ವತ ಪರಿಹಾರ ಸೂಚಿಸುವಂತೆ ರೈತರು ಒತ್ತಾಯಿಸಿದರು .ಮೂರು ತಿಂಗಳಗೊಮ್ಮೆಯಾದರೂ ಕೂಡ ಅರಣ್ಯ ಸಮೀಪ ಇರುವಂತಹ ಜಮೀನುಗಳ ರೈತರ ಕುಂದು ಕೊರತೆಗಳನ್ನು ನಿವಾರಿಸಲು ಸಭೆ ಕರೆಯಿರಿ. ಕಾಡಂಚಿನ ಗ್ರಾಮಗಳ ರೈತರು ಸಾಕಷ್ಟು ಸಮಸ್ಯೆಗಳನ್ನು ನಿತ್ಯವು ಸಹ ಎದುರಿಸುತ್ತಿದ್ದು ಒಂದು ವಾರದಲ್ಲಿ ಕಾಡಾನೆಗಳ ದಾಳಿಯಿಂದ ನಾಲ್ವರು ಆಸ್ಪತ್ರೆಗೆ ಸೇರಿದ್ದಾರೆ. ಹೀಗಾಗಿ ಅರಣ್ಯ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ ಮೂರು ವನ್ಯಧಾಮಗಳ ಡಿಸಿಎಫ್ ಗಳ‌ ಸಮ್ಮುಖದಲ್ಲಿ ರೈತರ ಸಭೆಯನ್ನು ಕರೆಯರಿ ಎಂದು ಸಲಹೆಯನ್ನು ರೈತರು ಅಧಿಕಾರಿಗಳನ್ನು ಒತ್ತಾಯಿಸಿದರು. ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು‌ ಮಹದೇಶ್ವರ ವನ್ಯಧಾಮದ ಪಿಜಿ ಪಾಳ್ಯ ಅರಣ್ಯ ಪ್ರದೇಶದೊಳಗೆ ಸಫಾರಿಗೆ ತೆರಳುವಾಗ ಸಫಾರಿ ಕೇಂದ್ರದ ಸಿಬ್ಬಂದಿಗಳು ರಸೀಸಿ ಕೊಡುತ್ತಿಲ್ಲ ಸಫಾರಿಗೆ ತೆರಳುವವರಿಗೆ ರಸೀದಿ ನಿಡದೇ ಹಣ ದೋಚುವ ಕೆಲಸಕ್ಕೆ ಅರಣ್ಯ ಸಿಬ್ಬಂದಿ ವರ್ಗ ನಿರತರಾಗಿದ್ದಾರೆ ಎಂದು ರೈತ ಮುಖಂಡರುಗಳು ಗಂಭೀರವಾಗಿ ದೂರಿದರು.

ರೈತರ ತರಾಟೆ: ರಾಮಾಪುರ ಗರಿಕೆಕಂಡಿ‌ ರಸ್ತೆಗೆ ಗುದ್ದಲಿಪೂಜೆ ನೇರವೇರಿಸಿದ್ದರೂ ಸಹ ಏಕೆ ಕಾಮಗಾರಿ ಪ್ರಾರಂಭಿಸಿಲ್ಲ. ಕಳೆದ ಸಭೆಯಲ್ಲಿ ಕೂಡ ಅಧಿಕ ಭಾರ ಹೊತ್ತ ಲಾರಿಗಳ ನಿರ್ಬಂಧಕ್ಕೂ ಕೂಡ ಮನವಿಯನ್ನ ಮಾಡಲಾಗಿತ್ತು. ಯಾಕೆ ಕ್ರಮ ಕೈಗೊಂಡಿಲ್ಲ ನಿಮಗೂ ಲಾರಿಯವರೆಗೆ ಏನೂ ಸಂಬಂಧ ಇದೆ ಉತ್ತರ ಕೂಡಿ, ತಮಿಳುನಾಡಿಗೆ ಲಾರಿಗಳ ಸಂಚಾರ ಮಾಡುವುದಾದರೆ ರಾಷ್ಟ್ರೀಯ ಹೆದ್ದಾರಿಯಾದ ಮಹದೇಶ್ವರಬೆಟ್ಡ ಮುಖ್ಯ ರಸ್ತೆ ಮುಖೇನಾ ಸಂಚರಿಸಲಿ ಎಮ್ ಡಿ ಆರ್ ರಸ್ತೆಯಾದ ರಾಮಾಪುರ ರಸ್ತೆಯಲ್ಲಿ ಅಧಿಕ ಭಾರ ಹೊತ್ತ ಲಾರಿಗಳು ಬರುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಇಒ ಉಮೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಾಶ್, ವಲಯ ಅರಣ್ಯ ಅಧಿಕಾರಿ ಪ್ರವೀಣ್. ನಿರಂಜನ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ