ಹೊಸಪೇಟೆ: ಕಮಲಾಪುರದಲ್ಲಿ ನಡೆದ ಅಂಗನವಾಡಿ ನಿವೃತ್ತ ನೌಕರರ ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ಸುಪ್ರೀಂ ಕೋಟ್ ಆದೇಶ ಜಾರಿಗೊಳಿಸಿ, ನಿವೃತ್ತ ಅಂಗನವಾಡಿ ನೌಕರರಿಗೆ ಉಪಧನ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಕನಿಷ್ಠ ಉಪಧನ ಪರಿಹಾರ ಒಂದು ಲಕ್ಷ ರು. ಮಾಡಬೇಕು. ಈಗಾಗಲೇ ಆದೇಶವಾಗಿರುವಂತೆ ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ನಿವೃತ್ತ ನೌಕರರ ಮುಖ್ಯಬೇಡಿಕೆಗಳನ್ನು ಒತ್ತಾಯಿಸಿ ಹೊಸಪೇಟೆ, ಬಳ್ಳಾರಿ ಭೇಟಿ ಮಾಡಲಿರುವ ಸಚಿವರಿಗೆ ಮನವಿ ಸಲ್ಲಿಸಲು ನಿರ್ಧಾರ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡಂತೆ ಜಂಟಿ ಹೋರಾಟ ಸಮಿತಿ ರಚಿಸಿ ಮುಂದಿನ ಹೋರಾಟ ಮಾಡಲಾಗುವುದು.
ಸಭೆಯಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯ ಕಾರ್ಯಕರ್ತೆಯರು ಭಾಗವಹಿಸಿದ್ದರು. ಸಭೆಯಲ್ಲಿ ಸಂಗಯ್ಯ ಹಿರೇಮಠ, ಮುಮ್ತಾಜ್ ಬೇಗಂ, ಈ.ಮಂಗಮ್ಮ, ನಾಗರತ್ನ, ಕವಿತಾ, ಧರ್ಮದೇವತೆ, ಜ್ಯೋತಿ ಮಾಳಗಿ, ಜಿ.ವೀರಣ್ಣ, ಅಬ್ದುಲ್, ಮೀನಾಕುಮಾರಿ, ತಿಪ್ಪಕ್ಕ ಮತ್ತಿತರರು ಮಾತನಾಡಿದರು.ಮುಖ್ಯ ಸಂಚಾಲಕ ಎ.ಆರ್.ಎಂ. ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಪುರಾತತ್ವ ಇಲಾಖೆ ಕಾರ್ಮಿಕ ಸಂಘದ ಕಾರ್ಯಕರ್ತರು ಸಭೆ ನಡೆಸಿಕೊಡಲು ಅಗತ್ಯ ಸಹಾಯ ಒದಗಿಸಿದರು.