ಸೋಪ್‌ಗೆ ಪರಭಾಷೆ ನಟಿ ರಾಯಭಾರಿ: ದನಕರುಗಳಿಗೆ ಸೋಪ್ ಬಳಸಿ ಆಕ್ರೋಶ

KannadaprabhaNewsNetwork |  
Published : May 30, 2025, 12:15 AM IST
29ಕೆಎಂಎನ್ ಡಿ25 | Kannada Prabha

ಸಾರಾಂಶ

ಮೈಸೂರ್ ಸ್ಯಾಂಡಲ್ ಸೋಪ್‌ಗೆ ತನ್ನದೇ ಆದ ಇತಿಹಾಸವಿದೆ. ಸೋಪ್‌ನ ರಾಯಭಾರಿಗೆ ಕನ್ನಡದ ನಟ, ನಟಿ ಹಾಗೂ ಕ್ರೀಡಾಪಟುಗಳನ್ನು ಬಳಸಿಕೊಳ್ಳಬಹುದು. ಅದು ಬಿಟ್ಡು ರಾಜ್ಯ ಸರ್ಕಾರ ಪರಭಾಷಾ ನಟಿಗೆ 6.20 ಕೋಟಿ ರು. ವ್ಯಯಿಸುವ ಅಗತ್ಯವಾದರೂ ಏನಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮೈಸೂರ್ ಸ್ಯಾಂಡಲ್ ಸೋಪ್‌ಗೆ ಪರಭಾಷೆ ನಟಿ ತಮ್ಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಧನಕರುಗಳಿಗೆ ಸೋಪ್ ಅನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಬೊಮ್ಮೂರು ಅಗ್ರಹಾರದ ಬಯಲು ಪ್ರದೇಶದಲ್ಲಿ ದನ-ಕರು, ಆಡು, ಕುರಿಗಳಿಗೆ ಮೈಸೂರ್ ಸ್ಯಾಂಡಲ್ ಸೋಪ್ ನಿಂದ ಸ್ನಾನ ಮಾಡಿಸಿದ ಕಾರ್ಯಕರ್ತರು, ಮೈಸೂರ್ ಸ್ಯಾಂಡಲ್ ಸೋಪ್‌ಗೆ ತನ್ನದೇ ಆದ ಇತಿಹಾಸವಿದೆ. ಸೋಪ್‌ನ ರಾಯಭಾರಿಗೆ ಕನ್ನಡದ ನಟ, ನಟಿ ಹಾಗೂ ಕ್ರೀಡಾಪಟುಗಳನ್ನು ಬಳಸಿಕೊಳ್ಳಬಹುದು. ಅದು ಬಿಟ್ಡು ರಾಜ್ಯ ಸರ್ಕಾರ ಪರಭಾಷಾ ನಟಿಗೆ 6.20 ಕೋಟಿ ರು. ವ್ಯಯಿಸುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಸರ್ಕಾರ ಈ ತೀರ್ಮಾನವನ್ನು ಕೂಡಲೇ ಕೈ ಬಿಟ್ಟು ಮೈಸೂರಿನ ಪ್ರತಿಭೆಗಳು ಅಥವಾ ರಾಜ್ಯದ ನಟ- ನಟಿಯರಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಆ ಸೋಪ್ ಅನ್ನು ನಾವೇ ಬಹಿಷ್ಕರಿಸಿ ಧನ ಕರುಗಳ ಸ್ನಾನಕ್ಕೆ ಬಳಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು, ಜಗಧೀಶ್, ರಂಗಶೆಟ್ಡಿ, ಮನೋಜ್, ಛಾಯಾ, ಜಯಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.ಜೂ.1ರಂದು ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಸೇವಾ ಟ್ರಸ್ಟ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಜೂ.1ರಂದು ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಸೇವಾ ಚಾರಿಟಬಲ್ ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಎಸ್.ಚೌಡೇಶ್ ತಿಳಿಸಿದ್ದಾರೆ.ಟ್ರಸ್ಟ್ ಉದ್ಘಾಟನೆ ಅಂಗವಾಗಿ ಶಾಂತಿ ಕಾಲೇಜು ಆವರಣದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆವರೆಗೆ ಬೃಹತ್ ಉಚಿತ ಮಹಿಳಾ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯದಿಂದ ತಪಾಸಣೆ, ಔಷಧಿ ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಲಾಗಿದೆ.

ಮಧ್ಯಾಹ್ನ 3ಗಂಟೆಗೆ ಶಾಂತಿ ಸಮುದಾಯ ಭವನದಲ್ಲಿ ರಂಗಗೀತೆ ನಂತರ ಹಿರಿಯ ನಟಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಟ್ರಸ್ಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಳವಳ್ಳಿ ಸುಂದ್ರಮ್ಮನವರ ಕುರಿತು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಹಾಗೂ ಕನ್ನಡ ಪ್ರಾಧ್ಯಪಕ ಡಾ.ಎನ್.ಎಸ್.ಶಂಕರೇಗೌಡ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅತಿಥಿಗಳಾಗಿ ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ, ಮಾಜಿ ಶಾಸಕಿ ಎಂ.ಕೆ.ನಾಗಮಣಿ ನಾಗೇಗೌಡ, ಹಿರಿಯ ರಂಗಭೂಮಿ ಕಲಾವಿದ, ಉದ್ಯಮಿ ಪಟೇಲ್ ಗಂಗರಾಜು, ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಪುಟ್ಟರಾಜು, ಹರಿಕಥೆ ವಿದ್ವಾಂಸ ಬದನವಾಳು ಶಿವಕುಮಾರ ಶಾಸ್ತ್ರಿ, ಅಂತಾರಾಷ್ಟ್ರೀಯ ಕಂಸಾಳೆ ಕಲಾವಿದ ಕಂಸಾಳೆ ಮಹದೇವಯ್ಯ, ಹರಿಕಥಾ ವಿದ್ವಾಂಸ ಶಿವಾರ ಉಮೇಶ್, ಗುತ್ತಿಗೆದಾರ ಗೋವಿಂದರಾಜು, ಜನವಾದಿ ಮಹಿಳಾ ಸಂಘಟನೆಯ ಸುಶೀಲಾ, ಪ್ರಮುಖರಾದ ರೇಣುಕಾ ಆರಾಧ್ಯ, ಗುರುಮಲ್ಲಯ್ಯ, ವಿಜಯಕುಮಾರ್, ಚಿಂದಗಿರಿಗೌಡ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ