ಪಾರ್ವತಮ್ಮ ಬೆಟ್ಟದ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

KannadaprabhaNewsNetwork | Published : May 4, 2025 1:34 AM

ಸಾರಾಂಶ

ಶುಕ್ರವಾರದಿಂದ ಪ್ರಾರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಎರಡನೇ ದಿನವು ಯಶಸ್ವಿಯಾಗಿದ್ದು, ಶನಿವಾರವೂ ಒಂದು ಪುಂಡಾನೆ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದು ಸ್ಥಳಾಂತರಿಸಿದ್ದಾರೆ. ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶುಕ್ರವಾರ ಹಾಗೂ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಮೇಲೆ ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ದಾಳಿ ಮಾಡುತ್ತಾ ಬೆಳೆ ನಾಶ, ಪ್ರಾಣಹಾನಿ ಮತ್ತು ಆಸ್ತಿ ನಷ್ಟ ಉಂಟು ಮಾಡುತ್ತಿದ್ದ ಎರಡು ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಿದ್ದು ಇದನ್ನು ಇಲ್ಲಿಗೆ ನಿಲ್ಲಿಸದೆ ಈ ಭಾಗದಲ್ಲಿ ಪ್ರಾಣಹಾನಿಗೆ ಕಾರಣವಾಗಿರುವ ಎಲ್ಲಾ ಪುಂಡಾನೆಗಳನ್ನು ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ಶುಕ್ರವಾರದಿಂದ ಪ್ರಾರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಎರಡನೇ ದಿನವು ಯಶಸ್ವಿಯಾಗಿದ್ದು, ಶನಿವಾರವೂ ಒಂದು ಪುಂಡಾನೆ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದು ಸ್ಥಳಾಂತರಿಸಿದ್ದಾರೆ.

ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಉಪಟಳ ನೀಡುತ್ತಿದ್ದ ಹಾಗೂ ಇತ್ತೀಚೆಗಷ್ಟೇ ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಷಣ್ಮುಖ ಎಂಬ ರೈತ ಕಾಡಾನೆ ದಾಳಿಯಿಂದ ಮೃತಪಟ್ಟ ಪರಿಣಾಮ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಆನೆ ಸೆರೆ ಕಾರ್ಯಾಚರಣೆ ಆರಂಭವಾಗಿತ್ತು. ಶುಕ್ರವಾರ ಅರಣ್ಯ ಇಲಾಖೆಯವರು ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ 20 ವರ್ಷದ ಗಂಡಾನೆ ಒಂದನ್ನು ಹಿಡಿದು ಸ್ಥಳಾಂತರಿಸಿದ್ದರು. ಶನಿವಾರ ಸಹ ಆಲೂರು ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿ ವಾಟೆಪುರ ಗ್ರಾಮದ ಪಾರ್ವತಮ್ಮ ಬೆಟ್ಟದ ಬಳಿ ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಕುಂಕಿ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ಸುಮಾರು 30 ವರ್ಷ ಗಂಡಾನೆ ಒಂದನ್ನು ಹಿಡಿದು ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶುಕ್ರವಾರ ಹಾಗೂ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಮೇಲೆ ಮತ್ತು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ದಾಳಿ ಮಾಡುತ್ತಾ ಬೆಳೆ ನಾಶ, ಪ್ರಾಣಹಾನಿ ಮತ್ತು ಆಸ್ತಿ ನಷ್ಟ ಉಂಟು ಮಾಡುತ್ತಿದ್ದ ಎರಡು ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಿದ್ದು ಇದನ್ನು ಇಲ್ಲಿಗೆ ನಿಲ್ಲಿಸದೆ ಈ ಭಾಗದಲ್ಲಿ ಪ್ರಾಣಹಾನಿಗೆ ಕಾರಣವಾಗಿರುವ ಎಲ್ಲಾ ಪುಂಡಾನೆಗಳನ್ನು ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯನ್ನು ಸುಭಾಷ್‌ ಕೆ ಮಾಲ್ಕಡೆ, ಭಾ.ಅ.ಸೇ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ವನ್ಯಜೀವಿ) ಬೆಂಗಳೂರು, ಡಾ. ಮನೋಜ್. ಆರ್. ಭಾ.ಅ.ಸೇ., ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು(ಆನೆ ಯೋಜನೆ) ಬೆಂಗಳೂರು ಮತ್ತು ಏಡುಕುಂಡಲ ಭಾ.ಅ.ಸೇ ಅರಣ್ಯಸಂರಕ್ಷಣಾಧಿಕಾರಿಗಳು ಹಾಸನ ವೃತ್ತ, ಹಾಸನ ಅವರ ಮಾರ್ಗದರ್ಶನದಲ್ಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಸನ ಪ್ರಾದೇಶಿಕ ವಿಭಾಗ ಹಾಗು ಜಿಲ್ಲಾ ಆನೆ ಕಾರ್ಯಪಡೆ ಸಕಲೇಶಪುರ, ವಿಭಾಗದ ಎಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಮಡಿಕೇರಿ ವೃತ್ತ ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರದ ಇಲಾಖಾ ಪಶು ಪಶುವೈದ್ಯಾಧಿಕಾರಿಗಳಾದ ಚಿಟ್ಟಿಯಪ್ಪ, ಬಂಡೀಪುರ ವಿಭಾಗದ ಇಲಾಖಾ ಪಶು ವೈದ್ಯಾಧಿಕಾರಿಗಳಾದ ಶ್ರೀ ವಾಸಿಮ್ ಮತ್ತು ಮೈಸೂರು ವನ್ಯಜೀವಿ ವಿಭಾಗದ ಇಲಾಖಾ ಪಶು ವೈದ್ಯಾಧಿಕಾರಿಗಳಾದ ಮುಜೀಬ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಧನಂಜಯ, ಸುಗ್ರೀವ, ಭೀಮ ,ಕಂಜನ್‌, ಏಕಲವ್ಯ, ಮತ್ತು ಮಹೇಂದ್ರ ಎಂಬ ಕುಮ್ಕಿ ಸಾಕಾನೆಗಳು ಭಾಗವಹಿಸಿದ್ದವು.

Share this article