ಒತ್ತುವರಿ ಜಮೀನು ತೆರೆವುಗೊಳಿಸಿ ಸಸಿ ನೆಟ್ಟ ಇಲಾಖೆ

KannadaprabhaNewsNetwork |  
Published : Jul 05, 2024, 12:47 AM IST
ತಾಲೂಕಿನ ಜಕನೂರು ಮತ್ತು ಕುಂಚನೂರು ಗ್ರಾಮಗಳಲ್ಲಿ ಒತ್ತುವರಿ ಮಾಡಿದ್ದ 10.20 ಎಕರೆ ಅರಣ್ಯ ಇಲಾಖೆಯ ಜಮೀನು ವಶಕ್ಕೆ ಪಡೆದು,ಅರಣ್ಯ ಇಲಾಖೆಯಿಂದ ಬುಧವಾರ ಸಸಿಗಳನ್ನು ನೆಡಲಾಯಿತು | Kannada Prabha

ಸಾರಾಂಶ

ಜಮಖಂಡಿ ತಾಲೂಕಿನ ಜಕನೂರು ಮತ್ತು ಕುಂಚನೂರು ಗ್ರಾಮಗಳಲ್ಲಿ ಒತ್ತುವರಿ ಮಾಡಿದ್ದ 10.20 ಎಕರೆ ಅರಣ್ಯ ಇಲಾಖೆಯ ಜಮೀನು ವಶಕ್ಕೆ ಪಡೆದು, ಅರಣ್ಯ ಇಲಾಖೆಯಿಂದ ಬುಧವಾರ ಸಸಿಗಳನ್ನು ನೆಡಲಾಯಿತು.

ಕನ್ನಡಪ್ರಭವಾರ್ತೆ ಜಮಖಂಡಿ

ತಾಲೂಕಿನ ಜಕನೂರು ಮತ್ತು ಕುಂಚನೂರು ಗ್ರಾಮಗಳಲ್ಲಿ ಒತ್ತುವರಿ ಮಾಡಿದ್ದ 10.20 ಎಕರೆ ಅರಣ್ಯ ಇಲಾಖೆಯ ಜಮೀನು ವಶಕ್ಕೆ ಪಡೆದು, ಅರಣ್ಯ ಇಲಾಖೆಯಿಂದ ಬುಧವಾರ ಸಸಿಗಳನ್ನು ನೆಡಲಾಯಿತು ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರಿನಿಂಗ ತಿಳಿಸಿದ್ದಾರೆ. ಕುಂಚನೂರು ಗ್ರಾಮದ ಸರ್ವೇ ನಂ.111 ಮತ್ತು ಜಕನೂರು ಸರ್ವೇ ನಂ. 34ರಲ್ಲಿ 10.20 ಎಕರೆ ಜಮೀನು ಒತ್ತುವರಿ ಮಾಡಲಾಗಿತ್ತು. ಈ ಕುರಿತು ನ್ಯಾಯಾಲದಲ್ಲಿ ಪ್ರಕರಣ ದಾಖಲಾಗಿತ್ತು ನ್ಯಾಯಾಲಯದ ಆದೇಶದಂತೆ ಒತ್ತುವರಿ ಮಾಡಿದ್ದ ಜಮೀನು ಮರಳಿ ವಶಕ್ಕೆ ಪಡೆಯಲಾಯಿತು. ಒತ್ತುವರಿ ಮಾಡಿದ್ದ ಜಮೀನಿನಲ್ಲಿ ಅನಧಿಕೃತವಾಗಿ ಬೆಳೆಯಲಾಗಿದ್ದ ಕಬ್ಬು ಮತ್ತು ಜೋಳದ ಬೆಳೆ ತೆರವು ಗೊಳಿಸಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡಲಾಯಿತು ಎಂದು ತಿಳಿಸಿದ್ದಾರೆ.

ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ, ಸಹಾಯಕ ಅರಣ್ಯ ಅಧಿಕಾರಿ ರಾಜೇಶ್ವರಿ ಈರನಟ್ಟಿ, ಉಪ ವಲಯ ಅರಣ್ಯ ಆಧಿಕಾರಿ ಅಶ್ವಿನಿ ಮನ್ನಿ, ಮಲ್ಲಕಾರ್ಜುನ ನಾವಿ, ಮಹೇಶಗುಡಿಮನಿ, ಆರ್.ಎಲ್.ಜಾಧವ, ಪಿ.ಎಸ್.ಪಾಟಿಲ, ಎಚ್,ವೈ,ಉಗಾರ ಅರಣ್ಯ ಗಸ್ತು ಪಾಲಕ ರುದ್ರೇಶ ಮೇತ್ರಿ, ಸಿದ್ದು ಕುಳಲಿ, ವಿಠ್ಠಲ ಕುಬಕಡ್ಡಿ, ಶಶಿಧರ ವಂಟಗೊಡಿ, ರಾಜಕಿರಣ ಬೆಳವಡಿ,ಅಕ್ಷತಾ ಜಂಬಗಿ ಲಕ್ಷ್ಮಣ ಪಾಟೀಲ, ಮಹಾವೀರ ಆಲಗೂರ ಹಾಗೂ ಎ.ಎಸ್.ಐ ಕುಂಬಾರ ಹಾಗೂ ಪೋಲಿಸ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ