ದಲಿತರ ದಮನಕ್ಕೆ ಅರಣ್ಯ ಇಲಾಖೆ ಯತ್ನ: ಡಿ.ಎಚ್.ಎಸ್ ಖಂಡನೆ

KannadaprabhaNewsNetwork |  
Published : Nov 03, 2026, 03:00 AM IST
ಪೋಟೋ: 31ಪಿಟಿಆರ್- ಮನವಿ | Kannada Prabha

ಸಾರಾಂಶ

ಸಾಗುವಳಿ ಚೀಟಿ ಪಡೆದು ಕೃಷಿ ಕಾರ್ಯ ನಡೆಸುತ್ತಿರುವ ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದ ದಲಿತರಿಗೆ ನೋಟೀಸ್ ನೀಡುವ ಮೂಲಕ ಅರಣ್ಯ ಇಲಾಖೆಯು ತೊಂದರೆ ನೀಡುತ್ತಿದೆ ಎಂದು ಸಿಪಿಐಎಂ ಪುತ್ತೂರು ತಾಲೂಕು ಕಾರ್ಯದರ್ಶಿಯಾದ ವಕೀಲ ಪಿ.ಕೆ.ಸತೀಶನ್ ಆರೋಪಿಸಿದ್ದಾರೆ.

ಪುತ್ತೂರು: ಸಾಗುವಳಿ ಚೀಟಿ ಪಡೆದು ಕೃಷಿ ಕಾರ್ಯ ನಡೆಸುತ್ತಿರುವ ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದ ದಲಿತರಿಗೆ ನೋಟೀಸ್ ನೀಡುವ ಮೂಲಕ ಅರಣ್ಯ ಇಲಾಖೆಯು ತೊಂದರೆ ನೀಡುತ್ತಿದೆ ಎಂದು ಸಿಪಿಐಎಂ ಪುತ್ತೂರು ತಾಲೂಕು ಕಾರ್ಯದರ್ಶಿಯಾದ ವಕೀಲ ಪಿ.ಕೆ.ಸತೀಶನ್ ಆರೋಪಿಸಿದ್ದಾರೆ.

ಅವರು ಶನಿವಾರ ದಲಿತ ಸಮುದಾಯದ ಭೂಮಿ ರಕ್ಷಣೆಗೆ ಆಗ್ರಹಿಸಿ ಪುತ್ತೂರು ಸಹಾಯಕ ಕಮೀಶನರ್ ಮತ್ತು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.

1981-82 ಮತ್ತು 1982-83 ನೇ ಸಾಲುಗಳಲ್ಲಿ ಪುತ್ತೂರು ತಾಲೂಕು ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮದಲ್ಲಿ ದಲಿತ ಸಮುದಾಯದ ಕೆಲವು ಕುಟುಂಬಗಳಿಗೆ ರ‍್ಕಾಸ್ ಮೂಲಕ ಜಮೀನು ನೀಡಿ ಸಾಗುವಳೀ ಚೀಟಿ ನೀಡಲಾಗಿತ್ತು. ಅದರಲ್ಲಿ ಅವರು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಭೂಮಿ ಮಂಜೂರಾಗಿ 40 ವರ್ಷಗಳ ತರುವಾಯ ಅರಣ್ಯ ಇಲಾಖೆಯವರು ಅದನ್ನು ತಮ್ಮ ಭೂಮಿ ಎಂದು ಗುಲ್ಲೆಬ್ಬಿಸುತ್ತಾ, ನೋಟೀಸ್ ಜಾರಿ ಮಾಡುತ್ತಾ ದಲಿತ ಸಮುದಾಯದ ಬಡ ಕುಟುಂಬಗಳನ್ನು ಭಯ ಬೀತಿ ಗೊಳಿಸಿರುವುದು ಅವರ ಬದುಕಿನಲ್ಲಿ ಅಭದ್ರತೆ ಸೃಷ್ಟಿ ಮಾಡಿರುವುದು ಖಂಡನೀಯ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಸುಮಾರು 25 ಮಂದಿಯ ನಿಯೋಗ ದಲಿತ ಹಕ್ಕು ಸಮಿತಿ ಡಿ.ಎಚ್.ಎಸ್.) ನೇತೃತ್ವದಲ್ಲಿ ಶನಿವಾರ ಪುತ್ತೂರು ಸಹಾಯಕ ಕಮೀಶನರಿಗೆ ಮನವಿ ನೀಡಿ ಅರಣ್ಯ ಇಲಾಖೆಯ ಕಿರುಕುಳದಿಂದ ತಪ್ಪಿಸಲು ಮತ್ತು ಭೂಮಿ ಪ್ಲಾಟಿಂಗ್ ಮಾಡಿಸಿಕೊಡಲು ವಿನಂತಿಸಲಾಯಿತು. ಜೊತೆಗೆ ಸದ್ರಿ ಡಿ.ಎಚ್.ಸ್. ನಿಯೋಗವು ಅರಣ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಅರಣ್ಯಾಧಿಕಾರಿವರಿಗೂ ಮನವಿಯ ಪ್ರತಿ ನೀಡಿ ಚರ್ಚಿಸಿ ಜಂಟಿ ಸರ್ವೆ ಮಾಡಿಸಿದಲಿತರ ಭೂಮಿಯ ಸುದ್ದಿಗೆ ಅರಣ್ಯ ಇಲಾಖೆ ಬಾರದಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭ ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್, ದಲಿತ ಹಕ್ಕು ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷರಾದ ಚಿದಾನಂದ, ತಾಲೂಕು ಸಮಿತಿಯ ಖಜಾಂಜಿ ಸುಂದರ, ನಿಡ್ಪಳ್ಳಿ ಗ್ರಾಮ ಘಟಕದ ಅಧ್ಯಕ್ಷರಾದ ಕೃಷ್ಣ ನಿಡ್ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ