ದೇಶ ಕಟ್ಟುವ ಶಿಕ್ಷಕರು ಮಕ್ಕಳಿಗೆ ಕೆಲವು ಸೂಕ್ಷ್ಮ ವಿಚಾರಗಳನ್ನೂ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಾಗ ಮಕ್ಕಳು ಉತ್ತಮ ರೀತಿಯ ಜ್ಞಾನ ಪಡೆಯಲು ಸಾಧ್ಯ. ಈ ಮೂಲಕ ದೇಶಭಕ್ತ ಹಾಗೂ ರಾಷ್ಟ್ರ ನಿರ್ಮಾಣ ಮಾಡುವ ಬಲಿಷ್ಠ ಯುವ ಜನತೆಯನ್ನು ನಿರ್ಮಿಸಲು ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.
ಕನ್ನಡಪ್ರಭವಾರ್ತೆ ಪುತ್ತೂರು

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಿಬಿಎಸ್‌ಇಯಿಂದ ನಿಯೋಜನೆಗೊಂಡ ತರಬೇತುದಾರರಾದ ವಂದನಾ ಎಸ್. ನಾಯಕ್ ಹಾಗೂ ಪ್ರಾಚಿ ಸಿಂಗ್ ತರಬೇತಿ ನೀಡಿದರು. ಸ್ಥಳೀಯ ಸಿಬಿಎಸ್‌ಇ ಶಾಲೆಗಳ ಶಿಕ್ಷಕರು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.
ಅಂಬಿಕಾ ಸಿಬಿಎಎಸ್‌ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಇದ್ದರು. ಶಿಕ್ಷಕಿಯರಾದ ಶರಣ್ಯ ಹಾಗೂ ರಕ್ಷಾ ಪ್ರಾರ್ಥಿಸಿದರು. ಶಿಕ್ಷಕಿ ಸಹನಾ ಸ್ವಾಗತಿಸಿ, ಶಿಕ್ಷಕಿ ಗೌರಿ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.