ಮರದ ಕೊಂಬೆ ತೆರವಿಗೆ ಅರಣ್ಯ ಇಲಾಖೆ ಅಸಹಕಾರ: ಶೈಲೇಶ

KannadaprabhaNewsNetwork |  
Published : Jun 02, 2025, 12:02 AM IST
ಎಚ್‌27.ಡಿಎನ್‌ಡಿ:2:  ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕುರಿತು ಸಭೆ | Kannada Prabha

ಸಾರಾಂಶ

ಯುಜಿಡಿ ಕಾಮಗಾರಿಯಿಂದ ಸಾರ್ವಜನಿಕ ಆಗುತ್ತಿರುವ ತೊಂದರೆ ಈ ಕುರಿತು ಸದಸ್ಯ ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದರು.

ದಾಂಡೇಲಿ: ಮಳೆಗಾಲ ಪೂರ್ವ ಸಿದ್ಧತೆ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತ ನಗರಸಭೆಯ ಸಭಾಂಗಣದಲ್ಲಿ ಪೌರಾಯುಕ್ತ ವಿವೇಕ ಬನ್ನೆ ಅಧ್ಯಕ್ಷಯಲ್ಲಿ ವಿಶೇಷ ಸಭೆ ನಡೆಯಿತು.

ನಗರದ ಪ್ರಮುಖ ಬೀಡಾಡಿ ದನಗಳು, ಬೀದಿ ನಾಯಿಗಳ ನಿಯಂತ್ರಣ ಹಾಗೂ ಅಪಾಯಕಾರಿ ಮರದ ಟೊಂಗೆ ತೆರವು, ಪ್ರಮುಖ ಚರಂಡಿ ಸ್ವಚ್ಛತೆ ಕುರಿತಂತೆ ನಗರಸಭೆ ಸದಸ್ಯರಿಂದ ಅನೇಕ ದೂರು ಕೇಳಿ ಬಂದವು. ಪೌರಾಯುಕ್ತರು ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯುಜಿಡಿ ಕಾಮಗಾರಿಯಿಂದ ಸಾರ್ವಜನಿಕ ಆಗುತ್ತಿರುವ ತೊಂದರೆ ಈ ಕುರಿತು ಸದಸ್ಯ ನಗರಸಭೆ ಅಧ್ಯಕ್ಷರ ಗಮನಕ್ಕೆ ತಂದರು.

ಸಭೆಯಲ್ಲಿ ತಹಶಿಲ್ದಾರ್ ಶೈಲೇಶ ಪರಮಾನಂದ ಮಾತನಾಡಿ, 147 ಅಪಾಯಕಾರಿ ಮರಗಳಲ್ಲಿ 47 ಮರಗಳ ಕೊಂಬೆಗಳನ್ನು ತೆಗೆಯಲಾಗಿದೆ. ಅರಣ್ಯ ಇಲಾಖೆ ಈ ಕಾರ್ಯಕ್ಕೆ ಸಹಕರಿಸುತ್ತಿಲ್ಲ ಎಂದರು.

ಸಭೆಯಲ್ಲಿ ಇದ್ದ ಸಿಆರ್‌ಪಿಗಳಿಗೆ ಅಂಗನವಾಡಿ, ಶಾಲಾ ಆವರಣದಲ್ಲಿ ಇರುವ ಅಪಾಯಕಾರಿ ಮರಗಳ ಮಾಹಿತಿ ನೀಡುವಂತೆ ಸೂಚಿಸಿದರು. ಕೋವಿಡ್ ಮುನ್ನೆಚ್ಚರಿಕೆಯ ಭಾಗವಾಗಿ ರಾಫ್ಟಿಂಗ್, ಬೋಟಿಂಗ್ ಮುಂದಿನ ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಆಶ್ಫಾಕ್ ಶೇಖ ಮಾತನಾಡಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲಾ ಇಲಾಖೆಗಳ ಸಹಕಾರ ಇದ್ದರೆ ಮಾತ್ರ ಸಾಧ್ಯ. ಹಳಿಯಾಳ, ಹಳೇ ದಾಂಡೇಲಿ ರಸ್ತೆಯ ಪಕ್ಕದಲ್ಲಿರುವ ಗುಜರಿ ಸಾಮಾನುಗಳನ್ನು ತೆರವು ಮಾಡುವಂತೆ ಪೋಲೀಸ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರತಿ ದಿನ ಮಾರ್ಕೆಟ್, ವಿನಾಯಕ ನಗರ, ಅಲೈಡ್ ಏರಿಯಾದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಗಟಾರುಗಳು ಮಳೆ ನೀರು ಸರಾಗವಾಗಿ ಹರಿದು ಹೋಗದಿರಲು ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ ಕಸ ಕಾರಣವಾಗುತ್ತಿದ್ದು ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಸಭೆ ಸದಸ್ಯ ದಶರಥ ಬಂಡಿವಡ್ಡರ ಗಾಂಧಿನಗರ ಎರಡು ನಾಲಾ ಗಳನ್ನು ಸ್ವಚ್ಛ ಮಾಡಬೇಕು ಎಂದು ಬೇಡಿಕೆ ಇಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮೋಹನ್ ಹಲವಾಯಿ ಪಶುವೈದ್ಯಾಧಿಕಾರಿ ಅರ್ಚನಾ ಸಿನ್ಹಾ, ಹೆಸ್ಕಾಂ ಅಭಿಯಂತರ ದೀಪಕ ನಾಯಕ, ಬಸ್ ಡಿಪೋ ವ್ಯವಸ್ಥಾಪಕ ಎಲ್.ಎಚ್. ರಾಥೋಡ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಾಲೂಕು ಮಟ್ಟದಲ್ಲಿ ನೂಡಲ್ ಅಧಿಕಾರಿಗಳನ್ನಾಗಿ ಪರಶುರಾಮ ಸಿಂಧೆ , ನಾಗೇಂದ್ರ ಬಾಬು ದೊಡ್ಮನಿ, ಬಸವರಾಜ ಹಳ್ಳ, ಬಿ. ಎಫ್. ಗವಾಸ, ಮೈಕಲ್ ಫರ್ನಾಂಡಿಸ್, ಸುನಿತಾ ನಾಯ್ಕ , ಸಿದ್ದಮ್ಮ ಹಿರೇಮೇಟಿ ಇವರುಗಳನ್ನು ನೇಮಕ ಮಾಡಲಾಗಿದೆ. ವಿಶೇಷ ತಂಡದಲ್ಲಿ ನಗರಸಭೆ ಅಧಿಕಾರಿಗಳಾದ ಶುಭಂ ರಾಯ್ಕರ, ವಿಲಾಸ ದೇವಕರ, ಸಲೀಂ ನದಾಫ, ಆದಿನಾರಾಯಣ ಹರಿಜನ ಇವರುಗಳು 31 ವಾರ್ಡಿನಲ್ಲಿ ಯಾವುದೇ ಅನಾಹುತ ಸಂಭವಿಸಿದ್ದಲ್ಲಿ ಈ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸಬೇಕು. ಜೊತೆ ತಕ್ಷಣ ಸ್ಥಳಕ್ಕೆ ಹಾಜರಿದ್ದು ಸಮಸ್ಯೆಯನ್ನು ಪರಿಹರಿಸಲು ಜವಾಬ್ದಾರಿಯನ್ನು ಈ ತಂಡದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ