ಕನ್ನಡಪ್ರಭ ವಾರ್ತೆ ಮಂಡ್ಯ
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ ತಿಳಿಸಿದರು.
ಸಚಿವ ಚಲುವರಾಯಸ್ವಾಮಿ ಅವರ 63ನೇ ವರ್ಷದ ಹುಟ್ಟುಹಬ್ಬ ನಗರದ ವಿವಿಧೆಡೆ ಆಚರಣೆ ಮಾಡಿ ನಂತರ ಮಾತನಾಡಿದರು. ವಿದ್ಯಾನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್ ನೇತೃತ್ವದಲ್ಲಿ ಮಿಮ್ಸ್ ಆವರಣದ ಮಮತೆಯ ಮಡಿಲುನಲ್ಲಿ ರೋಗಿಗಳಿಗೆ ಮತ್ತು ಅವಲಂಭಿತರಿಗೆ ಉಪಾಹಾರ ಹಾಗೂ ಊಟದ ವ್ಯವಸ್ಥೆ, ಮಿಮ್ಸ್ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ನಂತರ ಸೇವಾಕಿರಣ ವೃದ್ಧಾಶ್ರಮದ ವೃದ್ಧರಿಗೆ ಮಡಿವಾಳ ಸಮಾಜದ ಕಾಂಗ್ರೆಸ್ ಮುಖಂಡ ಹಳುವಾಡಿ ವೆಂಕಟೇಶ್ ನೇತೃತ್ವದಲ್ಲಿ ಬೆಡ್ ಶೀಟ್ ವಿತರಣೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಸಚಿವ ಚಲುವರಾಯಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಜಿ.ಮಾದೇಗೌಡ, ಎಸ್.ಎಂ.ಕೃಷ್ಣರವರ ನಂತರ ನಾಯಕತ್ವದಲ್ಲಿ ಅದೇ ಹಾದಿಯಲ್ಲಿ ಬೆಳೆದು ಬಂದು ಎಸ್.ಡಿ.ಜಯರಾಮ್ ಗರಡಿಯಲ್ಲಿ ಹೆಚ್ಚಿನ ನಾಯಕತ್ವ ರೂಪಿಸಿಕೊಂಡು ಜಿಪಂ ಉಪಾಧ್ಯಕ್ಷರಾಗುವ ಮೂಲಕ ಗ್ರಾಮೀಣ ಪ್ರದೇಶದ ಕೆಳಹಂತದ ಜನರಿಗೆ ನಾಯಕತ್ವ ಕೊಟ್ಟವರು ಎಂದರು.
ನೆನಗುದಿಗೆ ಬಿದ್ದಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಮೂಲಕ ಸಕ್ಕರೆ ಕಾರ್ಖಾನೆ ನೆಡೆಯುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಜಿಲ್ಲೆ ಸಮಗ್ರವಾದ ಅಭಿವೃದ್ಧಿಯತ್ತ ಸಾಗುವ ನಿಟ್ಟಿನಲ್ಲಿ ಅವರ ನಾಯಕತ್ವ ನಿಲ್ಲಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ನೀಲಾಮೂರ್ತಿ, ವಿಜಯಲಕ್ಷ್ಮಿ ರಘುನಂದನ್, ಬೇಲೂರು ಸೋಮಶೇಖರ್, ಕೆರಗೋಡು ಸೋಮಶೇಖರ್, ಅಭಿಲಾಶ್, ಅಪ್ಪಾಜಿಗೌಡ, ಶ್ರೀಧರ್, ನವೀನ್, ಶಂಕರಲಿಂಗೇಗೌಡ, ದೀಪಕ್, ಶಿವನಂಜು, ಸುಂಡಹಳ್ಳಿ ಮಂಜುನಾಥ್, ಎಂ.ಎಸ್. ಚಿದಂಬರ್, ಸಿ.ಎಂ.ದ್ಯಾವಪ್ಪ, ಕೃಷ್ಣ, ನಾಗೇಶ್, ಸೋಮಶೇಖರ್ ಸೇರಿದಂತೆ ಇನ್ನಿತರರಿದ್ದರು.