ಕಾವ್ಯ ಶ್ರೀಮಂತಿಕೆ ಕವಿ ಎಚ್.ಎಸ್.ವಿಯನ್ನು ಚಿರ ನೆನಪಿನಲ್ಲಿ ಉಳಿಸಿದೆ

KannadaprabhaNewsNetwork |  
Published : Jun 01, 2025, 11:59 PM ISTUpdated : Jun 02, 2025, 12:00 AM IST
ಕವಿ ಹೆಚ್.ಎಸ್.ವಿ. ಕಾವ್ಯಾತ್ಮಕವಾಗಿ ನೀಡಿರುವ ಶ್ರೀಮಂತಿಕೆ ಅವರನ್ನು ಚಿರ ನೆನಪಿನಲ್ಲಿ ಉಳಿಸಿದೆಃ ಹಿರೇಮಗಳೂರು ಕಣ್ಣನ್ | Kannada Prabha

ಸಾರಾಂಶ

ತರೀಕೆರೆ, ಕವಿ ಎಚ್.ಎಸ್. ವೆಂಕಟೇಶಮೂರ್ತಿ ಕಾವ್ಯಾತ್ಮಕವಾಗಿ ನೀಡಿರುವ ಶ್ರೀಮಂತಿಕೆ ಅವರನ್ನು ಚಿರ ನೆನಪಿನಲ್ಲಿ ಉಳಿಸಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.

ಪಟ್ಟಣದ ಸಂತಾಪ ಸೂಚನಾ ಸಭೆಯಲ್ಲಿ ಹಿರೇಮಗಳೂರು ಕಣ್ಣನ್

ಕನ್ನಡಪ್ರಭ ವಾರ್ತೆ, ತರೀಕೆರೆ

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಕಾವ್ಯಾತ್ಮಕವಾಗಿ ನೀಡಿರುವ ಶ್ರೀಮಂತಿಕೆ ಅವರನ್ನು ಚಿರ ನೆನಪಿನಲ್ಲಿ ಉಳಿಸಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.

ಪಟ್ಟಣದಲ್ಲಿ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು. ದೈಹಿಕ ರೂಪದಲ್ಲಿ ಅವರ ದರ್ಶನ ಇಲ್ಲದಿದ್ದರೂ ಅವರ ಜೀವನದ ಕಾಣ್ಕೆಯ ದರ್ಶನ ಅವರಿಂದ ಮೂಡಿರುವ ಸಾಹಿತ್ಯದಲ್ಲಿ ನಾವು ಎಂದೆಂದಿಗೂ ಕಾಣಲಿದ್ದೇವೆ. ಅವರು ಬರೆದ ಸಾಹಿತ್ಯವನ್ನು ನಿತ್ಯ ಮೆಲುಕು ಹಾಕುವುದರ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ನಮ್ಮ ಜೀವನವನ್ನುಸಾರ್ಥಕಪಡಿಸಿಕೊಳ್ಳೋಣ ಎಂದು ಅಭಿಪ್ರಾಯ ಪಟ್ಟರು.

ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಸರಳ ಸಜ್ಜನಿಕೆ ಭಾವಜೀವಿ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಕನ್ನಡ ಸಾರಸ್ವತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರು ಭಾವಗೀತೆಗಳ ಮೂಲಕವೇ ಕೋಟಿ ಕೋಟಿ ಕನ್ನಡಿಗರ ಮನೆ ಮಾತಾಗಿದ್ದಾರೆ ಎಂದು ಹೇಳಿದರು.

1ಕೆಟಿಆರ್.ಕೆ.06ಃ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರು ಕವಿ ಎಚ್‌.ಎಸ್.ವೆಂಕಟೇಶಮೂರ್ತಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌