ಗಡಿ ಗ್ರಾಮಗಳಿಗೆ ವಿದ್ಯುತ್‌, ನೀರು ಸಂಪರ್ಕಕ್ಕೆ ಅರಣ್ಯ ಇಲಾಖೆ ಅಡ್ಡಿ

KannadaprabhaNewsNetwork |  
Published : Jul 23, 2026, 01:45 AM IST
ಕಾಮಗಾರಿ | Kannada Prabha

ಸಾರಾಂಶ

ಹನೂರು ತಾಲೂಕಿನ ಗಡಿಗ್ರಾಮಗಳಲ್ಲಿ ಒಂದಾದ ಆಲಂಬಾಡಿಯಲ್ಲಿ ಜಲ ಜೀವನ್ ಮಿಷನ್ ಮತ್ತು ವಿದ್ಯುತ್ ಸಂಪರ್ಕ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡದ ಹಿನ್ನೆಲೆ ಕಾಮಗಾರಿ ಸ್ಧಗಿತವಾಗಿದೆ.

ಜಲಜೀವನ ಮಿಷನ್‌, ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ಕೊಡದ ಅರಣ್ಯ ಇಲಾಖೆ

ಪರಿಣಾಮ ವಿದ್ಯುತ್‌ ಕೇಬಲ್‌ಗಳನ್ನು ವಾಪಾಸು ಪಡೆಯುತ್ತಿರುವ ಸೆಸ್ಕಾಂ ನಿಗಮ

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನ ಗಡಿಗ್ರಾಮಗಳಲ್ಲಿ ಒಂದಾದ ಆಲಂಬಾಡಿಯಲ್ಲಿ ಜಲ ಜೀವನ್ ಮಿಷನ್ ಮತ್ತು ವಿದ್ಯುತ್ ಸಂಪರ್ಕ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡದ ಹಿನ್ನೆಲೆ ಕಾಮಗಾರಿ ಸ್ಧಗಿತವಾಗಿದೆ.ಇದರಿಂದಾಗಿ ಈ ಭಾಗದ ಜನರು ಕುಡಿಯುವ ನೀರಿಗೆ ಪರಿತಪ್ಪಿಸುವಂತಾಗಿದೆ. ಜೆಜೆಎಂ ಯೋಜನೆಯ ಸಾಧನ-ಸಲಕರಣೆಗಳು ಬಂದಿದ್ದರೂ ಕೂಡ ಅರಣ್ಯ ಇಲಾಖೆ ಅನುಮತಿ ನೀಡದ ಪರಿಣಾಮ ಯೋಜನೆ ಪ್ರಾರಂಭಗೊಂಡಿಲ್ಲ. ವಿದ್ಯುತ್‌ ಸಂಪರ್ಕದ್ದೂ ಇದೇ ಕಥೆಯಾಗಿದ್ದು, ಜಿಲ್ಲಾಡಳಿತ ಆಲಂಬಾಡಿ ಗ್ರಾಮದ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮದ ರತ್ನವೇಲು ಮನವಿ ಮಾಡಿದ್ದಾರೆ.

ವಿದ್ಯುತ್‌ ಕೇಬಲ್‌ ವಾಪಸ್‌:

ಗಡಿ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ದಾಸ್ತಾನು ಮಾಡಿದ್ದ ವಿದ್ಯುತ್‌ ತಂತಿ, ಕೇಬಲ್‌ಗಳು ಅರಣ್ಯ ಇಲಾಖೆಯ ಅನುಮತಿಯಿಲ್ಲದ ಕಾರಣ ವಾಪಾಸಿ ಕಳುಹಿಸಲಾಗಿದೆ.ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ಸೆಸ್ಕಾಂನಿಂದ ದಾಸ್ತಾನು ಮಾಡಲಾಗಿತ್ತು. ಅರಣ್ಯ ಇಲಾಖೆ ಅನುಮತಿ ನೀಡದೇ ಇರುವುದರಿಂದ ಕೇಬಲ್ ವಾಪಸ್ ತುಂಬಿಕೊಂಡು ಹೋಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಕತ್ತಲೆಯಲ್ಲಿ ಮುಳುಗಿರುವ ಗಡಿ ಗ್ರಾಮಗಳಿಗೆ ಬೆಳಕು ನೀಡಲು ಮುಂದಾಗಬೇಕು. ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಕಾಮಗಾರಿಗೂ ಅನುಮತಿ ಸಿಕ್ಕಿಲ್ಲ. ಗಡಿ ಗ್ರಾಮಗಳಲ್ಲಿ ನದಿ ಪಕ್ಕದಲ್ಲಿ ಹರಿಯುತ್ತಿದ್ದರು ಕುಡಿಯಲು ನೀರಿಲ್ಲದೆ ಗ್ರಾಮಗಳಲ್ಲಿ ಜನತೆ ಪರದಾಡುವಂತೆ ಪರಿಸ್ಥಿತಿ ಇದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಜಿಲ್ಲಾಡಳಿತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಆಲಂಬಾಡಿ ಗ್ರಾಮದ ನಿವಾಸಿ ರತ್ನವೇಲು ಅಳವತ್ತುಕೊಂಡಿದ್ದಾರೆ.

--

ಗಡಿ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕಕ್ಕಾಗಿ ಕೇಬಲ್‌ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿತ್ತು. ಅರಣ್ಯ ಇಲಾಖೆಯಿಂದ ಅನುಮತಿ ಸಿಗದ ಕಾರಣ ಕೇಬಲ್ ವಾಪಸ್‌ ಪಡೆಯಲಾಗಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.

ರಂಗಸ್ವಾಮಿ, ಎಇಇ ಉಪ ವಿಭಾಗ ಸೆಸ್ಕಾಂ ಹನೂರು.

---22ಸಿಎಚ್ಎನ್‌14 ಹನೂರು ಆಲಂಬಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಕಾಮಗಾರಿಗೆ ಅನುಮತಿ ನೀಡದೆ ಇರುವುದರಿಂದ ದಾಸ್ತಾನು ಮಾಡಲಾಗಿದ್ದ ವಿದ್ಯುತ್ ಇಲಾಖೆ ಕೇಬಲ್ ಅನ್ನು ವಾಪಸ್ ಪಡೆದಿರುವುದಕ್ಕೆ ಗ್ರಾಮಸ್ಥರ ಅಕ್ರೋಶ ..

22ಸಿಎಚ್ಎನ್‌15 ಹನೂರು ಆಲಂಬಾಡಿ ಗ್ರಾಮದಲ್ಲಿ ದಾಸ್ತಾನು ಮಾಡಲಾಗಿದ್ದ ವಿದ್ಯುತ್ ಕೇಬಲ್ ಅನ್ನು ಅರಣ್ಯ ಇಲಾಖೆ ಅನುಮತಿ ನೀಡದೇ ಇರುವುದರಿಂದ ಕಾಮಗಾರಿಗೆ ಚೆಸ್ಕಾಂ ಇಲಾಖೆ ವಾಹನದ ಮೂಲಕ ವಾಪಸ್ ಪಡೆದ ಕೇಬಲ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಕಚೇರಿಗೆ ಬಿಜೆಪಿಗರ ಮುತ್ತಿಗೆ ಯತ್ನ: ಹೈಡ್ರಾಮಾ!
ಮಳೆಯ ಕಣ್ಣಾಮುಚ್ಚಾಲೆ: ರೈತರಿಗೆ ತಪ್ಪದ ಆತಂಕ