ಅರಣ್ಯ ಜೀವ ಜಲದ ಮೂಲವೇ ಹೊರತು ಆದಾಯದ ಮೂಲವಲ್ಲ

KannadaprabhaNewsNetwork |  
Published : Jul 26, 2024, 01:38 AM IST
ತಾಲೂಕಿನ ಹೊಸಜೋಗ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹೊನ್ನಾಳಿ ಪ್ರಾದೇಸಿಕ ಅರಣ್ಯ ವಲಯದ ವತಿಯಿಂದ ದರೋಜಿ ಪ್ರಕೃತಿ ಶಿಬಿರ, ಅಟಲ್‌ ಬಿಹಾರಿ ವಾಜಪೇಯಿ ಕಿರು ಮೃಗಾಲಯದಲ್ಲಿ ಚಿಣ್ಣರ 2ದಿನದ ವನ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಅರಣ್ಯಗಳು ನಮ್ಮ ಅಸ್ತಿತ್ವ ಮತ್ತು ಜೀವ ಜಲದ ಮೂಲಗಳೇ ಹೊರತು ಆದಾಯದ ಮೂಲವಲ್ಲ ಮತ್ತು ಮಾಲಿನ್ಯ ಮುಕ್ತ ಪರಿಸರದ ಭವಿಷ್ಯಕ್ಕೆ ಅರಣ್ಯಗಳ ಉಳಿವು ಇಂದಿನ ದಿನಮಾನಗಳಿಗೆ ಅತ್ಯವಶ್ಯಕವಾಗಿದೆ

ಕನ್ನಡಪ್ರಭ ವಾರ್ತೆ ನ್ಯಾಮತಿ

ನೈಸರ್ಗಿಕ ಸಂಪನ್ಮೂಲಗಳಲ್ಲಿ ಸಂಪತ್ತಾದ ಅರಣ್ಯಗಳ ಮಹತ್ವವನ್ನು ಪ್ರತಿಯೊಬ್ಬ ನಾಗರಿಕರು ಸಂರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರೆ ಅರಣ್ಯ ಇಲಾಖೆ ಕೈ ಬಲ ಪಡಿಸಿದಂತಾಗುತ್ತದೆ ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕಿಶೋರನಾಯ್ಕ ತಿಳಿಸಿದರು.

ತಾಲೂಕಿನ ಹೊಸಜೋಗ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹೊನ್ನಾಳಿ ಪ್ರಾದೇಸಿಕ ಅರಣ್ಯ ವಲಯದ ವತಿಯಿಂದ ದರೋಜಿ ಪ್ರಕೃತಿ ಶಿಬಿರ, ಅಟಲ್‌ ಬಿಹಾರಿ ವಾಜಪೇಯಿ ಕಿರು ಮೃಗಾಲಯದಲ್ಲಿ ಚಿಣ್ಣರ 2ದಿನದ ವನ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,

ಅರಣ್ಯಗಳು ನಮ್ಮ ಅಸ್ತಿತ್ವ ಮತ್ತು ಜೀವ ಜಲದ ಮೂಲಗಳೇ ಹೊರತು ಆದಾಯದ ಮೂಲವಲ್ಲ ಮತ್ತು ಮಾಲಿನ್ಯ ಮುಕ್ತ ಪರಿಸರದ ಭವಿಷ್ಯಕ್ಕೆ ಅರಣ್ಯಗಳ ಉಳಿವು ಇಂದಿನ ದಿನಮಾನಗಳಿಗೆ ಅತ್ಯವಶ್ಯಕವಾಗಿದೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮೂಡಿಸಿ ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವುದಾಗಿದೆ ಎಂದರು.

ಶಾಲಾ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತುವ ಮುನ್ನವೇ ವಿದ್ಯಾರ್ಥಿ ಜೀವನದಲ್ಲಿ ಕನಿಷ್ಟ ಒಮ್ಮೆಯಾದರೂ ಅರಣ್ಯಕ್ಕೆ ಭೇಟಿ ನೀಡದರೆ ಅರಣ್ಯ ಮತ್ತು ವನ್ಯ ಜೀವಿಗಳ ಮಹತ್ವದ ಬಗ್ಗೆ ಅರಿವು ಮೂಡಿ ಬರಲಿದೆ ಎಂದು ಹೇಳಿದ ಅವರು, ನೈಸರ್ಗಿಕ ಸಂಪತ್ತಾದ ಅರಣ್ಯವನ್ನು ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ಕಾರ್ಯವೈಖರಿ ಹಾಗೂ ಕೈಗೊಳ್ಳಲಾಗುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಅರಣ್ಯ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸಿ ಸಂರಕ್ಷಣೆ ಕಾರ್ಯದಲ್ಲಿ ಪಾಲಿದಾರರನ್ನಾಗಿಸುವುದೇ ಇಲಾಖೆ ಉದ್ದೇಶವಾಗಿದೆ ಎಂದು ಹೇಳಿದರು.

ಉಪವಲಯ ಅರಣ್ಯಾಧಿಕಾರಿ ಬರ್ಕತ್‌ ಆಲಿ, ಗಸ್ತು ಅರಣ್ಯ ಪಾಲಕರಾದ ನಾಗಲಿಂಗಪ್ಪ, ಮುಖ್ಯ ಶಿಕ್ಷಕಿ ಆಶಾ, ಸಹಶಿಕ್ಷಕರುಗಳಾದ ಅನುಪಮ, ಪಂಕಜ, ಹನುಮಂತಪ್ಪ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!