ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಅಂಗವಾಗಿ ಮತದಾನ ಪ್ರಮಾಣ ಹೆಚ್ಚಿಸಲು ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ನಗರಸಭೆ ಅರಣ್ಯ ಮಾದರಿ ವಿಶೇಷ ಮತಗಟ್ಟೆ ಸ್ಥಾಪಿಸಿ ಮತದಾರರ ಗಮನ ಸೆಳೆಯುತ್ತಿದೆ.
ಕನಕಪುರದ ಹಲಸಿನ ಮರದ ದೊಡ್ಡಿ ಸಂಗಮ ರಸ್ತೆಯಲ್ಲಿರುವ ಜಿಟಿಟಿಸಿ ಕಾಲೇಜಿನ ಮತಗಟ್ಟೆ ಸಂಖ್ಯೆ-79ರಲ್ಲಿ ಅರಣ್ಯ ಮಾದರಿಯ ಮತಗಟ್ಟೆ ಸ್ಥಾಪಿಸಿದ್ದು ಈ ಮತಗಟ್ಟೆಯೊಳಗೆ ಮತದಾರರಿಗೆ ಕಾಡಿನ ಅನುಭವ ನೀಡಲಿದೆ. ಮತಗಟ್ಟೆ ಮುಂಭಾಗ ಚಪ್ಪರ, ಕಾಡಿನ ವಿಶೇಷ ಹೂಗಳು, ತಳಿರು-ತೋರಣ, ಗಿಡಗಳನ್ನಿಟ್ಟು ಅಲಂಕರಿಸುವ ಮೂಲಕ ಮತದಾರರನ್ನ ಸೆಳೆದು ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.ಕೆ ಕೆ ಪಿ ಸುದ್ದಿ1 (1):ಕನಕಪುರದ ಮತಗಟ್ಟೆ ಸಂಖ್ಯೆ 79ರಲ್ಲಿ ನಗರಸಭೆಯಿಂದ ಮತದಾರರನ್ನ ಆಕರ್ಷಿಸಲು ಅರಣ್ಯ ಮಾದರಿಯ ಮತಗಟ್ಟೆ ಸ್ಥಾಪಿಸಿರುವುದು.