ನಾವು ಕೆಲಸವನ್ನು ಕಠಿಣ ಶ್ರಮದಿಂದ ಮಾಡಿದಾಗ ಪರಮಾತ್ಮನನ್ನು ಕಾಣಲು ಸಾಧ್ಯವಾಗುತ್ತದೆ. ಆಗ ಮಾತ್ರ ಶ್ರೇಯಸ್ಸು ಲಭಿಸುತ್ತದೆ ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುನಾವು ಕೆಲಸವನ್ನು ಕಠಿಣ ಶ್ರಮದಿಂದ ಮಾಡಿದಾಗ ಪರಮಾತ್ಮನನ್ನು ಕಾಣಲು ಸಾಧ್ಯವಾಗುತ್ತದೆ. ಆಗ ಮಾತ್ರ ಶ್ರೇಯಸ್ಸು ಲಭಿಸುತ್ತದೆ ಎಂದು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಗುರುವಾರ ಆಯೋಜಿಸಿದ್ದ 3ನೇ ವರ್ಷದ ಸಂಸ್ಕಾರ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಆದರೆ ನಮ್ಮ ಗುರುಗಳು ನಮ್ಮನ್ನು ರಕ್ಷಣೆ ಮಾಡುತ್ತಾರೆ. ಇದು ನನ್ನ ಬದುಕಿನಲ್ಲಿ ಅನುಭವಾಗಿದೆ. ನಾವು ಉತ್ತಮರ ಸಂಘದಲ್ಲಿದ್ದರೆ ಉತ್ತುಂಗಕ್ಕೇರುತ್ತೇವೆ. ನಮ್ಮ ಸಂಘ ಮತ್ತು ಸಹವಾಸಗಳು ಬದುಕನ್ನು ರೂಪಿಸುತ್ತವೆ. ಬದುಕಿನಲ್ಲಿ ಬರುವಂತಹ ಕಷ್ಟಗಳಿಗೆ ಎದೆಗುಂದಬಾರದು. ಶಕ್ತಿಗನುಸಾರವಾಗಿ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ನಮಗೆ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದವರನ್ನು ಯಾವತ್ತೂ ಮರೆಯಬೇಡಿ. ಬದುಕನ್ನು ಕಟ್ಟಿಕೊಳ್ಳಲು ಮಕ್ಕಳಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕುಎಂದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಆಗಬೇಕು. ಇದಕ್ಕಾಗಿಯೇ ಮಠದಲ್ಲಿ ಸಂಸ್ಕಾರ ಶಿಬಿರವನ್ನು ಆಯೋಜಿಸುತ್ತಿದ್ದು, ನನ್ನ ಪ್ರಾಣ ಇರುವವರೆಗೆ ಪ್ರತಿ ವರ್ಷ ಸಂಸ್ಕಾರ ಶಿಬಿರ ನಡೆಸುತ್ತಿರುತ್ತೇನೆ ಎಂದು ಹೇಳಿದರು.ಇಂದು ಮಕ್ಕಳಿಗೆ ಶಿಕ್ಷಣಕ್ಕಿಂತ ಸಂಸ್ಕಾರದ ಅತ್ಯಾವಶ್ಯಕವಾಗಿ ಬೇಕಿದೆ. ಪೋಷಕರನ್ನು ವೃದ್ದಾಶ್ರಮಕ್ಕೆ ಕಳುಹಿಸುವಂತಹ ಮನಸ್ಥಿತಿಯಿಂದ ಮಕ್ಕಳನ್ನು ಹೊರತರಬೇಕಿದೆ. ಪೋಷಕರು ಮಕ್ಕಳಿಗಾಗಿ ಕೇವಲ ಹಣ ಮಾಡಲು ಹೆಚ್ಚಿನ ಕಾಲವನ್ನು ವ್ಯಯಮಾಡುತ್ತಾರೆ. ಆದರೆ ಬಹುಮುಖ್ಯವಾಗಿ ಹಣ ಮಾಡುವುದರ ಬದಲು ಉತ್ತಮ ರೀತಿಯಲ್ಲಿ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.ನಮ್ಮ ಸಂಸ್ಕಾರ ಶಿಬಿರಕ್ಕೆ ಯಾವುದೇ ಸರ್ಕಾರದ ಹಣ ಬಳಕೆ ಮಾಡುತ್ತಿಲ್ಲ. ಭಕ್ತರ ಸಹಕಾರವೇ ಇದಕ್ಕೆ ಪ್ರೇರಣೆಯಾಗಿದ್ದು, ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ಯಾವುದೇ ಜಾತಿ ಬೇದ ಮತ್ತು ಅಂತಸ್ಥಿನ ಮೇಲು ಕೀಳು ಎನ್ನುವ ಭಾವನೆಯಿಲ್ಲ ಎಂದರು.ಆದಿಚುಂಚನಗಿರಿ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರ ಡಾ.ಸಿ ನಂಜುಂಡಯ್ಯ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ರವಿಚಂದ್ರ, ಶಿಕ್ಷಣ ತಜ್ಞ ಡಾ. ಬೋಗಣ್ಣ, ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಸಚಿವ ಗಿರೀಶ್ ಚಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಮುಖಂಡರಾದ ಕೆ. ಪ್ರಶಾಂತ್, ವಿ. ಡಾ. ರಾಮೇಗೌಡ, ಡಾ.ಕುಮಾರ್, ಶಶಿರೆಡ್ಡಿ, ಹಿರೇಮಠ್, ಗೋವಿಂದರಾಜು, ರಾಜಣ್ಣ, ಶಿವಣ್ಣ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.