ಚನ್ನಪಟ್ಟಣ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನನ್ನನ್ನು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದೀರಾ. ನೀವೇ ನಿಂತು ಚುನಾವಣೆ ನಡೆಸಿ ಗೆಲುವು ಸಾಧಿಸುವಂತೆ ಮಾಡಿದ್ದು, ನಿಮ್ಮ ಪ್ರೀತಿಗೆ ಚಿರಋಣಿಯಾಗಿದ್ದೇನೆ ಎಂದು ಸಂಸದ ಡಾ. ಮಂಜುನಾಥ್ ತಿಳಿಸಿದರು.
ದೇಶಾದ್ಯಂತ ವಿಸ್ತರಣೆ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಎಲ್ಲ ವಯೋಮಾನದವರಲ್ಲೂ ಸಾಮಾನ್ಯವೆನಿಸಿದೆ. ಹೃದಯಾಘಾತ ಆದ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಜಿಲ್ಲೆಯ ಎಲ್ಲ ತಾಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜಾರಿಯಾಗಿದೆ. ಇಡೀ ದೇಶದಲ್ಲಿ ಈ ಯೋಜನೆ ಜಾರಿಯಾಗಬೇಕು ಎಂಬ ಕನಸಿದೆ. ರಾಮನಗರಸ ಜಿಲ್ಲಾ ಆಸ್ಪತ್ರೆಯಲ್ಲಿ ಎಕೋ ಕಾರ್ಡಿಯೋಗ್ರಾಂ ಯಂತ್ರ ಇಲ್ಲದಿದ್ದು, ರೋಟರಿ ಅವರೊಂದಿಗೆ ಮಾತನಾಡಿದ್ದು, ಒಂದು ತಿಂಗಳ ಒಳಗೆ ಯಂತ್ರ ಅಳವಡಿಸಲಾಗುವುದು. ಚನ್ನಪಟ್ಟಣದಲ್ಲಿ ಅಲ್ಟ್ರಾ ಸೌಂಡ್ ಅಬ್‌ಡಾಮಿನಲ್ ಯಂತ್ರ ಇಲ್ಲ ಎಂದು ಮನವಿ ಮಾಡಿದ್ದು, ಇನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕುಮಾರಸ್ವಾಮಿ ಮೇಲೆ ಜನ ಸಾಕಷ್ಡು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಮಾಧಾನದಿಂದ ಇದ್ದರೆ ಅವರು ಎಲ್ಲ ಭರವಸೆ ಈಡೇರಿಸಲಿದ್ದಾರೆ ಎಂದರು.
ಬೆಂಬಲಿಸಿದ ಜನ:ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ. ನಿಮ್ಮ ಬೆಂಬಲದಿಂದ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದರು.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿಯವರಿಗೆ ನಂದಿ ವಿಗ್ರಹ ನೀಡಿ ಸನ್ಮಾನಿಸಿದರು.
ಚನ್ನಪಟ್ಟಣದ ಕೆಎಚ್‌ಬಿ ಕಾಲೋನಿ ಮೈದಾನದಲ್ಲಿ ನಡೆದ ೩೨೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಪೊಟೋ೧೫ಸಿಪಿಟಿ೨:
ಚನ್ನಪಟ್ಟಣದಲ್ಲಿ ಕೆಎಚ್‌ಬಿ ಕಾಲೋನಿ ಮೈದಾನದಲ್ಲಿ ನಡೆದ ೩೨೦ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಾ.ಮಂಜುನಾಥ್, ಎಂಎಲ್‌ಸಿ ಯೋಗೇಶ್ವರ್ ಅವರಿಗೆ ಬೃಹತ್ ಹೂವಿನಹಾರ ಹಾಕಿ ಸನ್ಮಾನಿಸಲಾಯಿತು.