ಜನಪರ, ಸಮಾಜಪರ ಚಿಂತನೆ ಮಾಡುವ ದೇವಾಂಗ, ನೇಕಾರ ಸಮಾಜದ ಯುವಶಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ವಿಶಾಲ ಹೃದಯ ನಮ್ಮದಾಗಬೇಕು. ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಪ್ರಬಲರಾಗಬೇಕು ಎಂದು ದಯಾನಂದಪುರಿ ಸ್ವಾಮೀಜಿ ತಿಳಿಸಿದರು.
ರಾಣಿಬೆನ್ನೂರು: ಸಮಾಜದ ಜನರು ಎಲ್ಲ ಪಕ್ಷದವರ ಜತೆಗೆ ಪ್ರೀತಿ, ವಿಶ್ವಾಸದಿಂದ ಇರಿ. ನಮಗೆ ಪಕ್ಷಕ್ಕಿಂತ ಸಮಾಜ ಮುಖ್ಯ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಸಮ ಚಿಂತನೆಯೊಂದಿಗೆ ಸಮಾಜ ಸಂಘಟನೆ ಮಾಡಿಕೊಳ್ಳಬೇಕು ಎಂದು ದಯಾನಂದಪುರಿ ಸ್ವಾಮೀಜಿ ನುಡಿದರು. ನಗರದ ದೊಡ್ಡಪೇಟೆಯಲ್ಲಿ ಭಾನುವಾರ ರಾಮಲಿಂಗ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಜನಪರ, ಸಮಾಜಪರ ಚಿಂತನೆ ಮಾಡುವ ದೇವಾಂಗ, ನೇಕಾರ ಸಮಾಜದ ಯುವಶಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ವಿಶಾಲ ಹೃದಯ ನಮ್ಮದಾಗಬೇಕು. ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಪ್ರಬಲರಾಗಬೇಕು ಎಂದರು.ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ವೃತ್ತಿ ಆಧರಿತ ಸಮಾಜಗಳು ಎದುರಿಸುತ್ತಿರುವ ನೋವು, ಸಂಕಟಗಳನ್ನು ಪರಿಹರಿಸಲು ಸಂಘಟನೆ ಅವಶ್ಯವಿದೆ. ಉಪಪಂಗಡಗಳ ಭೇದ ಪರಿಗಣಿಸದೆ ಎಲ್ಲರೂ ಸಹಬಾಳ್ವೆ ಮಾಡಬೇಕು. ನೇಕಾರರೆಲ್ಲ ಒಂದೇ ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕು. ಆ ದಿಶೆಯಲ್ಲಿ ಇಂಥ ಧಾರ್ಮಿಕ ಸಭೆ ಸಮಾರಂಭಗಳು ಸಹಕಾರಿ ಆಗಲಿವೆ ಎಂದರು.ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕ ಎಂ.ಡಿ. ಲಕ್ಷ್ಮಿನಾರಾಯಣ, ಟಿ. ರಾಜೇಶ, ಗಣೇಶ ಹಾವನೂರ, ಸಮಾಜದ ಮುಖಂಡರಾದ ಬಸವರಾಜ ಮೈಲಾರ, ಲಕ್ಷ್ಮಿಕಾಂತ ಹುಲಗೂರ, ವಸಂತ ಕುಂಚೂರ, ಬನಶಂಕರಿ ಪಾದಯಾತ್ರೆ ಸಮಿತಿ ಅಧ್ಯಕ್ಷ ಜಯರಾಜ ರಾಜನಹಳ್ಳಿ, ನಗರಸಭೆ ಸದಸ್ಯೆ ಕವಿತಾ ಹೆದ್ದೇರಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಸಮಾಜದ ಅಧ್ಯಕ್ಷರು ಇದ್ದರು.ರೈತ ಉತ್ಪಾದಕ ಸಂಸ್ಥೆಗಳ ಸಹಕಾರ ಸಂಘಕ್ಕೆ ಆಯ್ಕೆ
ಶಿಗ್ಗಾಂವಿ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಂಸ್ಥೆಗಳ ಸಹಕಾರ ಸಂಘದ ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾಗಿ ಶಿಗ್ಗಾಂವಿಯ ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ರಾಘವೇಂದ್ರ ದೇಶಪಾಂಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಸನ್ಮಾನಿಸಿದರು.ಶಿಗ್ಗಾಂವಿಯ ಮಹಾನಂದಿ ಗ್ರೀನ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಸಂತೋಷ ಕಟಗಿ, ನಿರ್ದೇಶಕರಾದ ಜಗದೀಶ ತೊಂಡಿಹಾಳ, ಬಸವರಾಜ ಅಜ್ಜಂಪೂರ, ಭೀಮಣ್ಣ ನಡುವಿನಮನಿ, ವಿ.ವಿ. ತೊಂಡೂರ, ಸಂತೋಷ ಹುಬ್ಬಳ್ಳಿ, ಸಂತೋಷ ಮೊರಬದ, ಶಂಭಣ್ಣ ಹಿತ್ತಲಮನಿ, ಸಂಗಯ್ಯ ಹಿರೇಮಠ, ರವಿ ಮಡಿವಾಳರ ಹರ್ಷ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.