ತುರುವೇಕೆರೆ: ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಮರೆತರೆ ನಮಗೆ ಜನ್ಮ ನೀಡಿದ ತಂದೆ ತಾಯಿಯನ್ನೇ ಮರೆತಂತೆ ಎಂದು ಸ್ವಾಮಿ ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕಿ ಹಂಸ ದಿಲೀಪ್ ಕುಮಾರ್ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಕಣತೂರು ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಕಡೆಗಣಿಸಿ ಬೇರೆ ಭಾಷೆಯನ್ನು ಪ್ರೀತಿಸುವ ಕೆಟ್ಟ ವ್ಯಾಮೋಹ ಬೇಡ. ನಾವು ನಮ್ಮ ನುಡಿ, ನಾಡನ್ನು ಉಳಿಸಿಕೊಳ್ಳಲು ಸ್ವಾಭಿಮಾನಿಗಳಾಗಬೇಕೆಂದು ಹೇಳಿದರು.ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎನ್. ಎ,ಕುಂಇ ಅಹಮದ್ ಮಾತನಾಡಿ, ನಮ್ಮೆಲ್ಲರಲ್ಲಿ ಕನ್ನಡ ಉಸಿರಾಗಬೇಕು. ಕನ್ನಡ ನಾಡಿಗೆ ಸೇವೆ ಸಲ್ಲಿಸಿರುವ ಗಣ್ಯರ ಹೆಸರನ್ನು ತಮ್ಮ ಗ್ರಾಮ ನಗರಗಳ ರಾಜಬೀದಿಗಳಿಗೆ ಅಳವಡಿಸಬೇಕು. ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಬೇಕು. ಕನ್ನಡ ನಮ್ಮ ಹೃದಯ ಭಾಷೆಯಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ರಂಗಭೂಮಿ ಕಲಾವಿದರಾದ ಪಿ.ವೆಂಕಟೇಶಾಚಾರ್, ಕಲ್ಕೆರೆ ಶಂಕರಣ್ಣ, ಹ್ಯಾಂಡ್ ಬಾಲ್ ಕ್ರೀಡಾಪಟು ನಿಶ್ಚಯ ಗೌಡ, ಅಥ್ಲೆಟಿಕ್ ಪಟು ಹೊನ್ನಮ್ಮ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿರುವ ಶಿಕ್ಷಕರಾದ ಎ.ಬಿ.ಮಂಜುನಾಥ್, ಬಿ.ಎಸ್.ಲೋಕೇಶ್, ಎಸ್.ಎನ್.ದಿನೇಶ್, ಜ್ಯೋತಿ, ಬಸವರಾಜು ವೆಂಕಾರೆಡ್ಡಿ, ಬಿ.ಬಿ ಫಾತಿಮಾ, ಹೊರಗುತ್ತಿಗೆ ನೌಕರರಾದ ಧನಂಜಯ, ವಿಜಯಲಕ್ಷ್ಮಿ, ಚಿಕ್ಕಣ್ಣ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದೊಡ್ಡೇಗೌಡ, ಪೌರಕಾರ್ಮಿಕರಾದ ಡಿ.ಆರ್.ತಿಮ್ಮಪ್ಪ, ಗಿರೀಶ್, ಸಾಹಿತ್ಯ ಕ್ಷೇತ್ರದಲ್ಲಿ ಜ್ಯೋತಿ. ಸಮಾಜ ಸೇವೆಯಲ್ಲಿ ಗಂಗಣ್ಣ, ಮಾಧ್ಯಮ ಕ್ಷೇತ್ರದಿಂದ ಮಾಯಸಂದ್ರ ಸಚಿನ್ ಮತ್ತು ಸ್ವರ್ಣಕುಮಾರ್ ರವರನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪನವರು ನಾಡ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಬಿಇಓ ಸೋಮಶೇಖರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ, ಸದಸ್ಯರಾದ ಟಿ.ಆರ್.ಸುರೇಶ್, ಮಧು, ಚಿದಾನಂದ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ನೂತನ ಇಓ ಅನಂತರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಣ್ಮುಖಸ್ವಾಮಿ, ಎಸೈ ಮೂರ್ತಿ, ಕನ್ನಡದ ಕಂದ ವೆಂಕಟೇಶ್ ಇದ್ದರು. ಬಿಇಓ ಸೋಮಶೇಖರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಲೋಕೇಶ್ ವಂದಿಸಿದರು. 1 ಟಿವಿಕೆ 1 – ತುರುವೇಕೆರೆ ತಾಲೂಕು ಆಡಳಿತದ ವತಿಯಿಂದ ನಡೆದ 70 ನೇ ಕನ್ನಡ ರಾಜ್ಯೋತ್ಸವದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು.