ಕನ್ನಡಪ್ರಭ ವಾರ್ತೆ ಗೋಕಾಕ
ಬೆಲೆ ಏರಿಕೆ ಆಧಾರದಲ್ಲಿ ಮತ್ತು ಸೇವಾ ಜ್ಯೇಷ್ಠತೆ ಆಧಾರದಲ್ಲಿ ವೇತನ ಹೆಚ್ಚಳ, ನಿವೃತ್ತಿ ಅಥವಾ ನಿಧನರಾದರೆ 10 ಲಕ್ಷ ಇಡಗಂಟು, ಈಗಾಗಗಲೇ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಇಓಗಳಿಗೆ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಎಂದು ಅನುಮೊದನೆ, ತರಬೇತಿ ಪಡೆದಿರುವ ಎಲ್ಲ ಸ್ವಚ್ಛ ವಾಹಿನಿ ನೌಕರರಿಗೆ ಉದ್ಯೋಗ ನೀಡಿ 15ನೇ ಹಣಕಾಸು ಯೋಜನೆಯಲ್ಲಿ ವೇತನ ಪಾವತಿ, ಆದಾಯಕ್ಕೆ ಅನುಗುಣವಾಗಿ ಕರವಸೂಲಿ ಹುದ್ದೆಗಳ ನಿಗದಿ, 2017ರೊಳಗೆ ಇರುವ ಹೆಚ್ಚುವರಿ ಕರ ವಸೂಲಿಗಾರರಿಗೆ ಅನುಮೋದನೆ ನೀಡಬೇಕು. ಎಲ್ಲ ಗ್ರಾಮ ಪಂಚಾಯತಗಳಲ್ಲಿ ಲೆಕ್ಕ ಸಹಾಯಕರ ಹುದ್ದೆ ಸೃಷ್ಟಿಸಬೇಕು. ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ, ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ, ಬಿಸಿಯೂಟ ನೌಕರರ ಸಂಘದ ಪಾರ್ವತಿ ಕೌಜಲಗಿ, ಮಾಶಾಬಿ ಡಾಲಾಯತ, ಗ್ರಾಪಂ ನೌಕರರ ಸಂಘದ ರಮೇಶ ಹೊಳಿ, ಬಸವರಾಜ ಮಿರ್ಜಿ, ಬಾಲೇಶ ದುಂಡಾನಟ್ಟಿ ಸೇರಿದಂತೆ ನೂರಾರು ಗ್ರಾಪಂ ನೌಕರರು ಇದ್ದರು.