ಸಮಸ್ಯೆಗಳ ಪರಿಹಾರಕ್ಕೆ ವಾರ್ಡುವಾರು ಕಮಿಟಿ ರಚಿಸಿ: ಡಿಸಿ ರಾಹುಲ್‌ ಸೂಚನೆ

KannadaprabhaNewsNetwork |  
Published : Nov 17, 2026, 01:15 AM IST
ಸೋಮವಾರ ಬೆಳಗ್ಗೆ ನಗರದ ಗಾಂಧಿನಗರ ಸಾರ್ವಜನಿಕ ಉದ್ಯಾನವನ ಸೇರಿದಂತೆ, ಬಸವೇಶ್ವರ ನಗರ, ಲಕ್ಷ್ಮೀನಗರ ವಿವಿಧ ವಾರ್ಡಗಳ ಉದ್ಯಾನವನಗಳಿಗೆ ಎಸ್‌ಪಿ ಪೃಥ್ವಿಕ್ ಶಂಕರ್, ಪೌರಾಯುಕ್ತ ಉಮೇಶ ಚವ್ಹಾಣ ಅವರೊಂದಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. | Kannada Prabha

ಸಾರಾಂಶ

ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ವಾರ್ಡನಲ್ಲೂ ಒಂದು ಕಮಿಟಿ ರಚಿಸಬೇಕು. ಅದರಲ್ಲಿ ಹಿರಿಯ ನಾಗರಿಕರು, ವಕೀಲರು, ಯುವಕರು, ಮಹಿಳೆಯರು, ಬುದ್ಧಿಜೀವಿಗಳು ಇರಬೇಕು. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತರಾಗಬೇಕೆಂದು ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ವಾರ್ಡನಲ್ಲೂ ಒಂದು ಕಮಿಟಿ ರಚಿಸಬೇಕು. ಅದರಲ್ಲಿ ಹಿರಿಯ ನಾಗರಿಕರು, ವಕೀಲರು, ಯುವಕರು, ಮಹಿಳೆಯರು, ಬುದ್ಧಿಜೀವಿಗಳು ಇರಬೇಕು. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತರಾಗಬೇಕೆಂದು ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚಿಸಿದರು.

ಸೋಮವಾರ ಬೆಳಗ್ಗೆ ನಗರದ ಗಾಂಧಿನಗರ ಸಾರ್ವಜನಿಕ ಉದ್ಯಾನವನ, ಬಸವೇಶ್ವರ ನಗರ, ಲಕ್ಷ್ಮೀನಗರ ವಿವಿಧ ವಾರ್ಡಗಳ ಉದ್ಯಾನವನಗಳಿಗೆ ಎಸ್‌ಪಿ ಪೃಥ್ವಿಕ್ ಶಂಕರ್, ಪೌರಾಯುಕ್ತ ಉಮೇಶ ಚವ್ಹಾಣ ಅವರೊಂದಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.

ನಗರದ ನೂರಾರು ಸಾರ್ವಜನಿಕ ಉದ್ಯಾನವನಗಳಿಗೆ ಸುತ್ತುಗೋಡೆ ಇಲ್ಲದೆ ಸರ್ಕಾರದ ಜಾಗ ಅನ್ಯರ ಪಾಲಾಗುತ್ತಿದೆ. ಅನೇಕ ಕಡೆ ಜಾಗ ಕಬಳಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ‌ ಮತ್ತು ಅವುಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳಿಗಾಗಿ ಭೇಟಿ ನೀಡುತ್ತಿರುವುದಾಗಿ ಡಿಸಿ ರಾಹುಲ್‌ ಹೇಳಿದರು.

ನಗರದ ಸೌಂದರ್ಯಕ್ಕೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಗಾರ್ಡನಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗುವುದೆಂದರು. ವಾರ್ಡ ನಂ.25, 26 ರ ಏರಿಯಾಗಳಲ್ಲಿ ಇರುವ ಗಾರ್ಡನ್ ಗಳಿಗೆ ಭೇಟಿ ನೀಡಲಾಗಿದೆ. ಗಾಂಧಿ ನಗರಕ್ಕೆ ತೆರಳುವ ಮಾರ್ಗದಲ್ಲಿ ಇರುವ ಗಾರ್ಡನ್ ಗೆ ಸುತ್ತುಗೋಡೆ, ಸಸಿ ನೆಡುವಿಕೆ ಮತ್ತು ನಾಮಫಲಕ ಹಾಕುವ ಕೂಡಲೇ ಮಾಡಬೇಕೆಂದು ಡಿಸಿ ಅವರು ಪೌರಾಯುಕ್ತರಿಗೆ ಸೂಚಿಸಿದರು.

ವಾರ್ಡಗಳ ಜನರು ಅಲ್ಲಿನ‌ ಸಮಸ್ಯೆಗಳ ಬಗ್ಗೆ ಡಿಸಿ, ಎಸ್ಪಿ ಮತ್ತು ಪೌರಾಯುಕ್ತರ ಗಮನಕ್ಕೆ ತಂದರು. ನಗರಸಭೆ ಇಂಜಿನನೀಯರ ರಾಕೇಶರೆಡ್ಡಿ, ಪರಿಸರ ಇಂಜಿನೀಯರ್ ಪ್ರಶಾಂತ, ಸಿಬ್ಬಂದಿ ಅರುಣ ಮುಂತಾದವರಿದ್ದರು.

----ಫೋಟೊ----

16ವೈಡಿಆರ್6 : ಗಾಂಧಿನಗರ ಸಾರ್ವಜನಿಕ ಉದ್ಯಾನವನ, ಬಸವೇಶ್ವರ ನಗರ, ಲಕ್ಷ್ಮೀನಗರ ವಿವಿಧ ವಾರ್ಡಗಳ ಉದ್ಯಾನವನಗಳಿಗೆ ಎಸ್‌ಪಿ ಪೃಥ್ವಿಕ್ ಶಂಕರ್, ಪೌರಾಯುಕ್ತ ಉಮೇಶ ಚವ್ಹಾಣ ಅವರೊಂದಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ