ಧಾರವಾಡ: ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸರ್ಕಾರದ ನಿಯಮಗಳಂತೆ ನಿಗದಿತ ಸಮಯದಲ್ಲಿ, ನಿಗದಿಪಡಿಸಿದ ಬೆಲೆಯಲ್ಲಿ ರೈತರಿಗೆ ವಿತರಿಸುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಜಾರಿದಳ ತಂಡಗಳನ್ನು ರಚಿಸಲಾಗಿದೆ.
ಧಾರವಾಡ ತಾಲೂಕು ಜಾರಿದಳದ ಅಧ್ಯಕ್ಷರಾಗಿ ತಹಸೀಲ್ದಾರ್ ಡಾ. ದೊಡ್ಡಪ್ಪ ಹೂಗಾರ ಹಾಗೂ ಸದಸ್ಯರಾಗಿ ಸುಮೀತಾ ಚಿಮ್ಮನಕಟ್ಟಿ, ಶಿದ್ರಾಮ ಉಣ್ಣದ, ಇಮ್ತಿಯಾಜ ಚಂಗಾಪುರಿ, ಡಾ. ಪ್ರಕಾಶ ಬೆನ್ನೂರ, ಎಸ್.ಡಿ. ಪಾಟೀಲ್ ಇದ್ದಾರೆ. ಸದಸ್ಯ ಕಾರ್ಯದರ್ಶಿಗಳಾಗಿ ರಾಜಶೇಖರ ಅಣಗೌಡರ ಇರಲಿದ್ದಾರೆ.
ಅಳ್ನಾವರ ತಾಲೂಕು ಜಾರಿದಳದ ಅಧ್ಯಕ್ಷರಾಗಿ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಸದಸ್ಯರಾಗಿ ಅನಿತಾ ಬಾಗೋಜಿ, ಬಸವರಾಜ ಏದ್ದಲಗುಡ್ಡ, ಇಮ್ತಿಯಾಜ ಚಂಗಾಪುರಿ, ಡಾ. ಸುನೀಲ ಬನ್ನಿಗೋಳ, ವಿನಾಯಕ ದಿಕ್ಷೀತ ಇದ್ದಾರೆ. ಸದಸ್ಯ ಕಾರ್ಯದರ್ಶಿಗಳಾಗಿ ರಾಜಶೇಖರ ಅಣಗೌಡರ ಇದ್ದಾರೆ.ಹುಬ್ಬಳ್ಳಿ ಜಾರಿದಳದ ಅಧ್ಯಕ್ಷರಾಗಿ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಶ್ರೀಶೈಲ ದೊಡಮನಿ, ಸಚಿನ ಅಲ್ಮೇಕರ್, ಅಜೀತಕುಮಾರ ಮಶಾಲ್ದಿ, ಆರ್.ವೈ. ಹೊಸಮನಿ, ಎನ್.ಎಸ್. ಪಟ್ಟೇದ ಇದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಮಂಜುಳಾ ತೆಂಬದ ಇದ್ದಾರೆ.
ಕುಂದಗೋಳ ತಾಲೂಕು ಜಾರಿದಳದ ಅಧ್ಯಕ್ಷರಾಗಿ ತಹಸೀಲ್ದಾರ್ ರಾಜು ಮಾವರಕರ್ ಹಾಗೂ ಸದಸ್ಯರಾಗಿ ಶಿವಲೀಲಾ ಮಿರ್ಜಿ, ಇಮ್ರಾನ್ ಪಠಾಣ, ಉಮೇಶ ಉಳ್ಳಾಗಡ್ಡಿ, ಡಾ. ಎಚ್.ಸಿ. ಪಾಟೀಲ್, ಶಂಕರ ಜೋಶಿ ಇದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಭಾರತಿ ಮೆಣಸಿನಕಾಯಿ ಇದ್ದಾರೆ.
ಅಣ್ಣಿಗೇರಿ ಜಾರಿದಳದ ಅಧ್ಯಕ್ಷರಾಗಿ ತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಹಾಗೂ ಸದಸ್ಯರಾಗಿ ಮಂಜುನಾಥ ನಾಯ್ಕ, ಬಸವರಾಜ ಏದ್ದಲಗುಡ್ಡ, ಯೋಗೇಶ ಕಿಲಾರಿ, ಡಾ. ಶ್ರೀಕಾಂತ ಕಲಬುರಗಿ, ರಾಜು ದೊಡ್ಡಮನಿ ಇದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ತಿಪ್ಪೆಸ್ವಾಮಿ ಟಿ. ಕಾರ್ಯ ನಿರ್ವಹಿಸಲಿದ್ದಾರೆ.
ಜಾರಿದಳದ ಅಧಿಕಾರಿಗಳು, ಆದೇಶದಲ್ಲಿ ಸೂಚಿಸಿರುವ ಕಾರ್ಯದಲ್ಲಿ ಲೋಪಗಳು ಕಂಡುಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮಗಳನ್ನು ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.