ಪಡಿತರ ರಾಗಿಯಲ್ಲಿ ಮಣ್ಣು, ಧೂಳು; ಕರಡಕೆರೆ ಗ್ರಾಮಸ್ಥರ ಆಕ್ರೋಶ

KannadaprabhaNewsNetwork |  
Published : Jul 02, 2025, 12:20 AM IST
1ಕೆಎಂಎನ್ ಡಿ27 | Kannada Prabha

ಸಾರಾಂಶ

ರಾಗಿಯಲ್ಲಿ ಒಂದು ಕೆಜಿಗೆ 400 ಗ್ರಾಂ ಧೂಳು, ಮಣ್ಣು ಇದೆ ಎಂದು ನ್ಯಾಯಬೆಲೆ ಅಂಗಡಿ ಮುಂದೆಯೇ ಧೂಳು, ಮಣ್ಣು ಮಿಶ್ರಿತ ರಾಗಿಯನ್ನು ಪ್ರದರ್ಶನ ಮಾಡಿದ ಗ್ರಾಮಸ್ಥರು ಈ ರಾಗಿಯನ್ನು ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಮನೆಗೆ ಕಳಿಸಿ ಅವರೇ ತಿನ್ನಲಿ...!

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಪಡಿತರದಲ್ಲಿ ಧೂಳು, ಮಣ್ಣು ಮಿಶ್ರಿತ ರಾಗಿ ನೀಡಿರುವುದರಿಂದ ಸಮೀಪ ಕರಡಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಾಗಿಯಲ್ಲಿ ಒಂದು ಕೆಜಿಗೆ 400 ಗ್ರಾಂ ಧೂಳು, ಮಣ್ಣು ಇದೆ ಎಂದು ನ್ಯಾಯಬೆಲೆ ಅಂಗಡಿ ಮುಂದೆಯೇ ಧೂಳು, ಮಣ್ಣು ಮಿಶ್ರಿತ ರಾಗಿಯನ್ನು ಪ್ರದರ್ಶನ ಮಾಡಿದ ಗ್ರಾಮಸ್ಥರು ಈ ರಾಗಿಯನ್ನು ಶಾಸಕರು, ಸಚಿವರು, ಮುಖ್ಯಮಂತ್ರಿಗಳ ಮನೆಗೆ ಕಳಿಸಿ ಅವರೇ ತಿನ್ನಲಿ ಎಂದು ಕಿಡಿಕಾರಿದರು.

ಧೂಳು, ಮಣ್ಣು ಮಿಶ್ರಿತ ರಾಗಿಯ ಸಂಬಂಧ ನ್ಯಾಯಬೆಲೆ ಅಂಗಡಿ ಮಾಲೀಕರು, ಆಹಾರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಪೆ ಉತ್ತರ ನೀಡುತ್ತಾರೆ. ತಕ್ಷಣ ಈ ರಾಗಿಯನ್ನು ವಾಪಸ್ ಪಡೆದು ಉತ್ತಮ ರಾಗಿ ನೀಡಬೇಕು. ಇಲ್ಲದಿದ್ದರೆ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿ ಸಂಜಯ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ರಾಗಿಯಲ್ಲಿ ಮಣ್ಣು, ಧೂಳು ಇದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ಉಡಾಫೆ ಉತ್ತರ ನೀಡುತಿದ್ದಿರಿ ಎಂದು ಗ್ರಾಮದ ಮಾದೇಗೌಡ ಕಿಡಿಕಾರಿದರು.

ಈ ವೇಳೆ ಟಿ.ಸಿ.ವಸಂತ, ನಾಗರತ್ನಮ್ಮ, ಜಯಲಕ್ಷ್ಮಿ, ಲೀಲಮ್ಮ, ಸಾಗರ್ ಕೆ.ಎನ್.ನಾಗರಾಜ್, ಮಾದೇಗೌಡ, ಮಂಗಳಮ್ಮ, ಪಾಪಣ್ಣಿ, ಅನಿಲ್ ಕುಮಾರ್ ಸೇರಿದಂತೆ ಮತ್ತಿತರಿದ್ದರು.

ಡಿಆರ್‌ಎಂ ಆಸ್ಪತ್ರೆಯಲ್ಲಿ ಮಕ್ಕಳಿಗೆ ಉಚಿತ ಚಿಕಿತ್ಸೆ: ಜಿ.ಎಂ.ಸುಹಾಸ್

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಎರಡು ವರ್ಷಗಳಿಂದ ನಗರದಲ್ಲಿ ವೈದ್ಯಕೀಯ ಸೇವೆ ನೀಡುತ್ತಿರುವ ಡಿಆರ್‌ಎಂ ಆಸ್ಪತ್ರೆಯು ನೂತನವಾಗಿ ಮಕ್ಕಳ ಚಿಕಿತ್ಸಾ ವಿಭಾಗ ಆರಂಭಿಸಿ ಜು.೧ರಿಂದ ೧೫ರವರೆಗೆ ಉಚಿತವಾಗಿ ಮಕ್ಕಳ ಹೊರರೋಗಿ ಚಿಕಿತ್ಸಾ ಸೇವೆಯನ್ನು ನೀಡಲಾಗುತ್ತಿದೆ ಎಂದು ಡಿಆರ್‌ಎಂ ಮಂಡ್ಯ ಮತ್ತು ಮೈಸೂರು ನಿರ್ವಾಹಕ ಜಿ.ಎಂ. ಸುಹಾಸ್ ತಿಳಿಸಿದರು.

ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಂದ ೧೮ ವರ್ಷ ವಯಸ್ಸಿನ ಮಕ್ಕಳವರೆಗೆ ಸಮಗ್ರ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಲಾಗುವುದು. ಲ್ಯಾಬ್ ಪರೀಕ್ಷೆಯಲ್ಲಿಯೂ ಶೇ.೨೦ರಷ್ಟು ವಿನಾಯ್ತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾ.ರಾಜಶೇಖರ್.ಬಿ.ಕೆ ಅವರು ಮಕ್ಕಳ ಚಿತ್ಸೆಯಲ್ಲಿ ನುರಿತ ಪದವಿ ಪಡೆದು, ಸೇವೆ ಸಲ್ಲಿಸುತ್ತಿದ್ದು, ಎಲ್ಲ ವಿಧದ ಮಕ್ಕಳ ತುರ್ತು ಚಿಕಿತ್ಸೆ, ಓಪಿಡಿ ಸೇವೆ, ಜ್ವರ, ಶೀತ, ಉಸಿರಾಟದ ಸಮಸ್ಯೆಗಳ ಚಕಿತ್ಸೆ, ಐಎಪಿ ಮತ್ತು ರಾಷ್ಟ್ರೀಕೃತ ಕಾಲಾನುಸಾರ ಲಸಿಕೆ ಕಾರ್ಯಕ್ರಮ, ನವಜಾತ ಶಿಶುಗಳ ತಪಾಸಣೆ, ಬೆಳವಣಿಗೆ, ಮತ್ತು ತೂಕದ ಮೌಲ್ಯಮಾಪನ ಸೇರಿದಂತೆ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್‌ಐಸಿಯು) ಹಾಗೂ ಆಧುನಿಕ ಆರೈಕೆ ಕ್ರಮಗಳನ್ನು ವಹಿಸಿ ಚಿಕಿತ್ಸೆ ನೀಡುವರು ಎಂದರು.

ಗೋಷ್ಠಿಯಲ್ಲಿ ವೈದ್ಯರಾದ ಡಾ.ಗೌತಮ್.ಎಸ್.ಗೌಡ, ಡಾ.ಮಧುಶ್ರೀ, ಮಾರುಕಟ್ಟೆ ಮುಖ್ಯಸ್ಥರಾದ ರಕ್ಷಿತ್, ಯಶ್ವಂತ್, ಶಂಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ