ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸುವ ರಬ್ಬರ್ ದೋಣಿ, ಎಂಜಿನ ಲೈಫ್ ಜಾಕೆಟ್ ಅಸ್ಕಲೆಟ್, ಮರ ಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಡಾ. ಮುರಳಿ ಮೋಹನ್ ಚೂಂತಾರು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಧಿಕಾರಿ ಸೂಚನೆಯಂತೆ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಳಿ ಮೋಹನ್ ಚೂಂತಾರು ಉಪಸ್ಥಿತಿಯಲ್ಲಿ ಮೂಲ್ಕಿ ಘಟಕದ ಪ್ರವಾಹ ರಕ್ಷಣಾ ತಂಡ ರಚಿಸಲಾಯಿತು.ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸುವ ರಬ್ಬರ್ ದೋಣಿ, ಎಂಜಿನ ಲೈಫ್ ಜಾಕೆಟ್ ಅಸ್ಕಲೆಟ್, ಮರ ಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಡಾ. ಮುರಳಿ ಮೋಹನ್ ಚೂಂತಾರು ಪರಿಶೀಲನೆ ನಡೆಸಿದರು.
ಮೂಲ್ಕಿ ಗೃಹರಕ್ಷಕ ದಳದ ಘಟಕ ಅಧಿಕಾರಿ ಲೋಕೇಶ್ ಚಿತ್ರಪು ನೇತೃತ್ವದಲ್ಲಿ ಪ್ರವಾಹ ರಕ್ಷಣಾ ತಂಡ ದಲ್ಲಿ ನುರಿತ ಈಜುಪಟುಗಳು ಮತ್ತು ವಿಪತ್ತು ನಿರ್ವಹಣಾ ತರಬೇತಿ ಪಡೆದ ಸಯ್ಯದ್, ಅಜೀದ್, ನಾಸಿರು ಹುಸೇನ್, ಪುಂಡಲಿಕ, ಶ್ರೀಧರ್ ಈ ತಂಡದಲ್ಲಿದ್ದು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನ ಅಂತ್ಯದವರೆಗೂ ಸಮುದ್ರದ ನೆರೆಭಾಗ, ನೆರೆಪೀಡಿತ ಪ್ರದೇಶ ಮತ್ತಿತರ ಅಪಾಯಕಾರಿ ಸ್ಥಳಗಳಲ್ಲಿ ದೋಣಿ ಸಹಿತ ರಕ್ಷಣಾ ಸಲಕರಣೆಯೊಂದಿಗೆ ಬೀಡು ಬಿಟ್ಟಿರಲಿದೆ.
ರಕ್ಷಣಾ ಕಾರ್ಯಕ್ಕೆ ಗೃಹರಕ್ಷಕ ದಳವು ಸನ್ನದ್ಧವಾಗಿದ್ದು, ಈ ವರ್ಷದ ಮಳೆಗಾಲವನ್ನು ಯಶಸ್ವಿಯಾಗಿ ಯಾವುದೇ ಅವಘಡವಾಗದಂತೆ ಮಾನಸಿಕವಾಗಿ ತರಬೇತಿ ನೀಡಲಾಗಿದೆ ಎಂದು ಡಾ. ಮುರಳಿ ಮೋಹನ್ ಚೂಂತಾರು ಈ ಸಂದರ್ಭ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.