ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚನೆ

KannadaprabhaNewsNetwork | Published : Jul 28, 2024 2:03 AM

ಸಾರಾಂಶ

ಕೊಲ್ಹಾರ ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್‌ಗೆ ಶುಕ್ರವಾರ ಚುನಾವಣೆ ಜರುಗಿತು. ಗುರುವಾರ ನಾಮಪತ್ರ ಸಲ್ಲಿಕೆ, ಹಿಂಪಡೆಯುವುದು ಸೇರಿದಂತೆ ಅನೇಕ ಪ್ರಕ್ರಿಯೆಗಳು ಜರುಗಿದವು. ಶುಕ್ರವಾರ ಬೆಳಗ್ಗೆ ಶಾಲೆಯ ತರಗತಿಯ ಕೊಠಡಿಯಲ್ಲಿ ಪಿಂಕ್ ಮತಗಟ್ಟೆಯನ್ನು ನಿರ್ಮಿಸಲಾಯಿತು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್‌ಗೆ ಶುಕ್ರವಾರ ಚುನಾವಣೆ ಜರುಗಿತು. ಗುರುವಾರ ನಾಮಪತ್ರ ಸಲ್ಲಿಕೆ, ಹಿಂಪಡೆಯುವುದು ಸೇರಿದಂತೆ ಅನೇಕ ಪ್ರಕ್ರಿಯೆಗಳು ಜರುಗಿದವು. ಶುಕ್ರವಾರ ಬೆಳಗ್ಗೆ ಶಾಲೆಯ ತರಗತಿಯ ಕೊಠಡಿಯಲ್ಲಿ ಪಿಂಕ್ ಮತಗಟ್ಟೆಯನ್ನು ನಿರ್ಮಿಸಲಾಯಿತು.

ತರಗತಿಯ ಶಿಕಕ್ಷಕರು ತಮ್ಮ ಮೊಬೈಲ್‌ನಲ್ಲಿ ಇ.ವಿ.ಎಂ ವೊಟಿಂಗ್ ಮಶಿನ್ ಆಪ್ ಡೌನಲೋಡ್ ಮಾಡಿ ಅದರಲ್ಲಿ ಸ್ಪರ್ಧೆ ಮಾಡಿದ ಮಕ್ಕಳ ಹೆಸರು ಮತ್ತು ಫೋಟೋಗಳನ್ನು ಸೇರಿಸಿದರು. ನಂತರ ಶಾಲೆಯ 8,9 ಹಾಗೂ 10ನೇ ತರಗತಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಆಧಾರ್‌ ಕಾರ್ಡ್ ತೋರಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ವಿದ್ಯಾರ್ಥಿಗಳೇ ಚುನಾವಣೆಯ ಅಧಿಕಾರಿಗಳಾಗಿ, ಸಿಬ್ಬಂದಿಯಾಗಿ, ಪೊಲೀಸ್‌, ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸಿದರು. ನಂತರ ನಡೆದ ಮತ ಏಣಿಕೆಯಲ್ಲಿ 8 ಹಾಗೂ 9ನೇ ತರಗತಿಯಿಂದ 3 ಜನ ವಿದ್ಯಾರ್ಥಿಗಳು, 10ನೇ ತರಗತಿಯಿಂದ 4 ಜನ ವಿದ್ಯಾರ್ಥಿಗಳು ಹೆಚ್ಚು ಮತಗಳನ್ನು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್‌ಗೆ ಚುನಾಯಿತರಾದರು. ಈ ವೇಳೆ ಚುನಾವಣೆಯನ್ನು ಬಹಳ ವ್ಯವಸ್ಥಿತವಾಗಿ ಸಮಾಜ ಶಿಕ್ಷಕಿ ಸಿ.ಎಚ್.ಗೌಡರ, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ, ಕರಣಿಕ ಅರುಣ ಬೆನ್ನೂರ, ಕಂಪೂಟರ್ ಶಿಕ್ಷಕ ವಿರೇಶ ಗಣಿ ನಡೆಸಿಕೊಟ್ಟರು. ಶಾಲಾ ಸಂಸತ್‌ಗೆ ಆಯ್ಕೆಯಾದಂತಹ ವಿದ್ಯಾರ್ಥಿಗಳನ್ನು ಮುಖ್ಯ ಚುನಾವಣಾಧಿಕಾರಿ ಹಾಗೂ ಶಾಲೆಯ ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ, ಶಿಕ್ಷಕ ಸುರೇಶ ಉತ್ನಾಳ, ಶಿಕ್ಷಕಿ ಸಿ.ಎಚ್.ಗೌಡರ, ಧನಶ್ರೀ ಬಾರಸ್ಕಳ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.ಶಾಲಾ ಸಂಸತ್‌ಗೆ ಆಯ್ಕೆಯಾದಂತಹ ವಿದ್ಯಾರ್ಥಿಗಳನ್ನು ಮುಖ್ಯ ಚುನಾವಣಾಧಿಕಾರಿ ಹಾಗೂ ಶಾಲೆಯ ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ, ಶಿಕ್ಷಕ ಸುರೇಶ ಉತ್ನಾಳ, ಶಿಕ್ಷಕಿ ಸಿ.ಎಚ್.ಗೌಡರ, ಧನಶ್ರೀ ಬಾರಸ್ಕಳ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.ಶಾಲಾ ಸಂಸತ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು

ಶಾಲೆಯ ಪ್ರಧಾನ ಕಾರ್ಯದರ್ಶಿ (ಜಿ.ಎಸ್)-ತ್ರಿವೇಣಿ ಈರಯ್ಯ ಮಠಪತಿ

ಸಾಂಸ್ಕೃತಿಕ ಮಂತ್ರಿ-ಕಾಶೀಬಾಯಿ ಜಗದಾಳೆ

ಕ್ರೀಡಾ ಮಂತ್ರಿ-ರೋಹನ ಕುದರಿ

ಆರೋಗ್ಯ ಮಂತ್ರಿ- ಸಾಕ್ಷಿ ಪರಗೊಂಡ

ಸ್ವಚ್ಛತೆ ಮಂತ್ರಿ-ಸುನೀಲ ನಾಗರಾಳ

ಹಣಕಾಸು ಮಂತ್ರಿ- ನೀಲಾ ಕುದರಿ

ಪ್ರವಾಸ ಮಂತ್ರಿ- ಸ್ಫೂರ್ತಿ ಕರಣೆ

ತೋಟಗಾರಿಕೆ ಮಂತ್ರಿ-ಮಹ್ಮದ್ ಇನೂಸ್ ಇಂಡಿಕರ

ನೀರಾವರಿ ಮಂತ್ರಿ-ಸುರೇಶ ಜಾಧವ

ವಾಚನಾಲಯ ಮಂತ್ರಿ-ಉದಿತ್ ಬಾರಸ್ಕಳ

Share this article