ಶಿಗ್ಗಾಂವಿ: ತಾಲೂಕಿನ ಅನುದಾನರಹಿತ ಶಾಲೆಗಳ ಶೈಕ್ಷಣಿಕ ಹಿತರಕ್ಷಣೆ ಹಾಗೂ ಶೈಕ್ಷಣಿಕ ಪ್ರಗತಿಯ ಉದ್ದೇಶದಿಂದ ಶಿಗ್ಗಾಂವಿ ತಾಲೂಕು ಅನುದಾನರಹಿತ ಶಾಲೆಗಳ ಒಕ್ಕೂಟವನ್ನು ನೂತನವಾಗಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸರೆಡ್ಡಿ ಬಿ.ಎನ್. ಮಾತನಾಡಿ, ತಾಲೂಕಿನ ಎಲ್ಲಾ ಅನುದಾನರಹಿತ ಶಾಲೆಗಳ ನಡುವೆ ಪರಸ್ಪರ ಸಹಕಾರ ಹಾಗೂ ಒಗ್ಗಟ್ಟು ಮೂಡಿಸುವುದು ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಶಾಲೆಗಳು ಎದುರಿಸುತ್ತಿರುವ ಮೂಲಭೂತ ಹಾಗೂ ಆಡಳಿತಾತ್ಮಕ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಒಕ್ಕೂಟ ಶ್ರಮಿಸಲಿದೆ. ಶೈಕ್ಷಣಿಕ ಸುಧಾರಣೆ ಹಾಗೂ ಶಿಕ್ಷಣ ಸಂಸ್ಥೆಗಳ ಹಿತರಕ್ಷಣೆಗೆ ನಮ್ಮ ಪದಾಧಿಕಾರಿಗಳ ತಂಡ ಬದ್ಧವಾಗಿ ಕೆಲಸ ಮಾಡಲಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷರನ್ನಾಗಿ ಈರನಗೌಡ ದೊಡ್ಡಗೌಡರ ಕಾರ್ಯದರ್ಶಿಯಾಗಿ ಡಾ. ಶಿವು ಹಾವೇರಿ, ಸಹ ಕಾರ್ಯದರ್ಶಿಯಾಗಿ ವಿಶ್ವೇಶ್ವರಯ್ಯ ಹಿರೇಮಠ, ಖಜಾಂಚಿಯಾಗಿ ರಾಘವೇಂದ್ರ ಬೇವಿನಮರದ ಅವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಡಾ. ಆರ್.ಎಸ್. ಅರಳಲೆಮಠ, ಬಸವರಾಜ ಬೆಟಗೇರಿ, ವಿರೇಶ ಸೊಬರದ, ಅರುಣಾ ದೇಶಪಾಂಡೆ, ವಿ.ಎಸ್. ಪಾಟೀಲ, ಶಿವಬಸವಸ್ವಮಿಗಳು, ಜಿ.ಎಸ್. ದೇಸಾಯಿ, ಸುರೇಶ ಎಂ.ಕೆ, ಬಾಗೂರ ಸರ್, ಆರ್.ಎಸ್. ಪಲ್ಹಾದವರ, ದೇವರಾಜ ಸುಣಗಾರ, ರಮೇಶ ಗುಡಿಮನಿ ಇತರರಿದ್ದರು.