ಮೋದಿ ಗೆಲ್ಲಿಸಿ - ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂಗೆ ಆಹ್ವಾನ

KannadaprabhaNewsNetwork |  
Published : Dec 28, 2023, 01:45 AM ISTUpdated : Dec 28, 2023, 01:46 AM IST
27ಕೆಆರ್ ಎಂಎನ್ 3.ಜೆಪಿಜಿಶ್ರೀರಾಮ ಸೇನಾ ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದರು. | Kannada Prabha

ಸಾರಾಂಶ

ರಾಮನಗರ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಎಂ.ಕೆ.ಕವಟಗಿಮಠ ಕನ್ವೆನ್ಷನ್ ಹಾಲ್ ನಲ್ಲಿ ಡಿ.31ರಂದು ಆಯೋಜಿಸಿರುವ "ಮೋದಿ ಗೆಲ್ಲಿಸಿ - ಭಾರತ ಉಳಿಸಿ " ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ಶ್ರೀ ರಾಮ ಸೇನಾ ಪದಾಧಿಕಾರಿಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಹ್ವಾನ ನೀಡಿದರು.

ರಾಮನಗರ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಎಂ.ಕೆ.ಕವಟಗಿಮಠ ಕನ್ವೆನ್ಷನ್ ಹಾಲ್ ನಲ್ಲಿ ಡಿ.31ರಂದು ಆಯೋಜಿಸಿರುವ "ಮೋದಿ ಗೆಲ್ಲಿಸಿ - ಭಾರತ ಉಳಿಸಿ " ಅಭಿಯಾನದ ಉದ್ಘಾಟನಾ ಸಮಾರಂಭಕ್ಕೆ ಶ್ರೀ ರಾಮ ಸೇನಾ ಪದಾಧಿಕಾರಿಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಹ್ವಾನ ನೀಡಿದರು.

ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾದ ಶ್ರೀರಾಮ ಸೇನಾ ರಾಮನಗರ ಜಿಲ್ಲಾಧ್ಯಕ್ಷ ನಾಗಾರ್ಜುನ ಗೌಡ ಸಮಾರಂಭದ ಆಹ್ವಾನ ಪತ್ರಿಕೆ ನೀಡುವ ಮೂಲಕ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ ಮಂಜು, ಮಾಜಿ ಸಚಿವ ಬಂಡಪ್ಪ ಕಾಶಪ್ಪನವರ್ , ಶ್ರೀರಾಮ ಸೇನಾ ವಿಭಾಗಿಯ ಅಧ್ಯಕ್ಷರಾದ ಅಮರನಾಥ್ ವೈ ಡಿ, ಬೆಂಗಳೂರು ಮಹಾನಗರದ ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ನರ್ಗಲ್, ಸಂಘಟನೆ ಕಾರ್ಯಕರ್ತರಾದ ಕೋಟ ಪ್ರಸನ್ನ, ಪ್ರಸನ್ನ ಕುಮಾರ್, ವಕೀಲ ವಿನೋದ್ ಕುಮಾರ್ ಹಾಜರಿದ್ದರು.

ಶ್ರೀರಾಮ ಸೇನಾ ಕರ್ನಾಟಕ ವತಿಯಿಂದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಆಂದೋಲ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ .ಈಶ್ವರಪ್ಪ, ಮಾಜಿ ಸಚಿವ ಸಿ.ಟಿ.ರವಿ, ಮಾಜಿ ಸಂಸದ ರಮೇಶ್ ಕತ್ತಿ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ , ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಹೆಸರನ್ನು ಮುದ್ರಿಸಲಾಗಿದೆ.

ಈಗ ಸಂಘಟನೆಯ ಪ್ರಮುಖರು ಕುಮಾರಸ್ವಾಮಿ ಅವರನ್ನು ಖುದ್ಧಾಗಿ ಭೇಟಿಯಾಗಿ ಆಹ್ವಾನ ಪತ್ರಿಕೆಯನ್ನು ನೀಡಿ ಆಹ್ವಾನಿಸಿದ್ದಾರೆ.27ಕೆಆರ್ ಎಂಎನ್ 3.ಜೆಪಿಜಿ

ಶ್ರೀರಾಮ ಸೇನಾ ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ