ಡಾ. ಬಾಬೂಜಿ ಹೋರಾಟ ಎಲ್ಲರಿಗೂ ಪ್ರೇರಣೆ

KannadaprabhaNewsNetwork | Published : Apr 6, 2025 1:49 AM

ಸಾರಾಂಶ

ದೇಶ ಬರಗಾಲದ ಸನ್ನಿವೇಶದಲ್ಲಿ ಇದ್ದಾಗ ಬಾಬು ಜಗಜೀವನರಾಂ ರವರು ಕೃಷಿ ಮಂತ್ರಿಯಾಗಿ ದೇಶದಲ್ಲಿ ಹಸಿರು ಕ್ರಾಂತಿಯನ್ನೇ ಸೃಷ್ಟಿ ಮಾಡಿ

ಕನ್ನಡಪ್ರಭ ವಾರ್ತೆ ನಂಜನಗೂಡು

ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರು ಸಮಾನತೆಗಾಗಿ ನಡೆಸಿದ ಹೋರಾಟ, ಶೋಷಿತ ಸಮಾಜಗಳಿಗೆ ನ್ಯಾಯ ಒದಗಿಸಲು ತೆಗೆದುಕೊಂಡ ನಿಲುವುಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಾಜಿ ಉಪ ಪ್ರಧಾನಿ ಡಾ. ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಡಾ. ಬಾಬು ಜಗಜೀವನರಾಂ ಅವರು 50 ವರ್ಷಗಳ ಕಾಲ ಸಂಸದರಾಗಿ ರೇಲ್ವೆ ಖಾತೆ, ಕಾರ್ಮಿಕ ಇಲಾಖೆ, ರಕ್ಷಣಾ ಖಾತೆಯ ಸಚಿವರಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ದೇಶ ಬರಗಾಲದ ಸನ್ನಿವೇಶದಲ್ಲಿ ಇದ್ದಾಗ ಬಾಬು ಜಗಜೀವನರಾಂ ರವರು ಕೃಷಿ ಮಂತ್ರಿಯಾಗಿ ದೇಶದಲ್ಲಿ ಹಸಿರು ಕ್ರಾಂತಿಯನ್ನೇ ಸೃಷ್ಟಿ ಮಾಡಿ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗುವಂತೆ ಮಾಡಿ ದೇಶದ ಚಿತ್ರಣವನ್ನೇ ಬದಲಾಗುವಂತೆ ಮಾಡಿದರು ಎಂದರು.ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಸನ್ಮಾನಿಲಾಯಿತು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ ಕಾಸ್ನೂರು, ದೇವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ಮುಖಂಡರಾದ ರಾಜೇಶ್, ಚಂದ್ರು, ನಾಗರಾಜಯ್ಯ, ದೇವರಾಜು, ಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ದಸಂಸ ಸಂಚಾಲಕರಾದ ಬಸವಣ್ಣ, ನಾರಾಯಣ್, ಸುರೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗ, ತಾಪಂ ಇಓ ಜೆರಾಲ್ಡ್ ರಾಜೇಶ್ ಇದ್ದರು.

Share this article