.ಕಾಮನ್‌ ಪುಟಕ್ಕೆನಿತ್ಯಸಚಿವ ಕೆ.ವಿ. ಶಂಕರಗೌಡ ಸಮಾಜಸೇವಾ ಪ್ರಶಸ್ತಿಗೆ ಆಯ್ಕೆ ಮೇ. 6 ರಂದು ಕಿರು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : May 04, 2025, 01:32 AM IST
27 | Kannada Prabha

ಸಾರಾಂಶ

ವಿವಿಧ ಕ್ಷೇತ್ರದ ಏಳು ಮಂದಿ ಸಾಧಕ ಗಣ್ಯರು ಆಯ್ಕೆಯಾಗಿದ್ದಾರೆ

ಫೋಟೋ- 3ಎಂವೈಎಸ್‌ 27ಕನ್ನಡಪ್ರಭ ವಾರ್ತೆ ಮೈಸೂರುಮಾಜಿ ಶಿಕ್ಷಣ ಸಚಿವ, ಸಾಹಿತಿ, ಸಹಕಾರಿ ಧುರೀಣ ಹಾಗೂ ಕುವೆಂಪು ಅವರಿಂದ ''''''''ನಿತ್ಯಸಚಿವ'''''''' ಎಂಬ ಗೌರವಕ್ಕೆ ಪಾತ್ರರಾಗಿ ಬಿರುದಾಂಕಿತರಾಗಿದ್ದ ಕೆ.ವಿ. ಶಂಕರಗೌಡ ಸ್ಮರಣಾರ್ಥ ಅದಮ್ಯ ರಂಗಶಾಲೆ ವತಿಯಿಂದ ನೀಡಲಾಗುವ ಕೆ.ವಿ. ಶಂಕರಗೌಡ ಸಮಾಜಸೇವಾ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಏಳು ಮಂದಿ ಸಾಧಕ ಗಣ್ಯರು ಆಯ್ಕೆಯಾಗಿದ್ದಾರೆ ಎಂದು ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರ ಮಂಡ್ಯ ತಿಳಿಸಿದ್ದಾರೆ.ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸಿ.ಕೆ. ಮಹೇಂದ್ರ, ಶ್ರೀರಂಗಪಟ್ಟಣದ ಡಿವೈ.ಎಸ್. ಪಿ. ಶಾಂತಮಲ್ಲಪ್ಪ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಬೆಂಗಳೂರಿನ ರಾಜ್ಯ ಖಜಾನೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ವಿ. ಭಾಗ್ಯಲಕ್ಷ್ಮಿ, ಮೈಸೂರು ಕೆ.ಐ.ಡಿ.ಬಿ. ಅಧ್ಯಕ್ಷ ಕೆ.ಬಿ. ಲಿಂಗರಾಜು, ಸಿನಿಮಾ ಬರಹಗಾರ ಮಂಡ್ಯದ ಲೋಕೇಶ್ ಗೌಡ, ಮೈಸೂರಿನ ಯುವ ಉದ್ಯಮಿ ಸಂಜಯ್ ಹೆಬ್ಬಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ನಗರದ ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಮೇ. 6 ರಂದು ಸಂಜೆ 5.30 ಗಂಟೆಗೆ ನಡೆಯಲಿರುವ ಬಾಲಂಗೋಚಿ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಪ್ರಶಸ್ತಿ'''''''' ಪ್ರದಾನ ಮಾಡುವರು. ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಉದ್ಘಾಟಿಸಲಿದ್ದು, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಅಧ್ಯಕ್ಷತೆ ವಹಿಸುವರು.ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಕುರಿತು ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದು, ಮಂಗಳೂರು ವಲಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್ ಗೌಡ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ್, ಪಡುವಾರಳ್ಳಿ ಗ್ರಾಮಭ್ಯುದಯ ಟ್ರಸ್ಟಿನ ಅಧ್ಯಕ್ಷ ಮೆಲ್ಲಹಳ್ಳಿ ಮಹಾದೇವಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.ಸಮಾರಂಭದ ಬಳಿಕ ಬೇಸಿಗೆ ಶಿಬಿರದ ಮಕ್ಕಳಿಂದ ನಾಟಕ ಮತ್ತು ನೃತ್ಯ ಪ್ರದರ್ಶನ ನಡೆಯಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು