ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರತಿಷ್ಠಿತ ಸಂಸ್ಥೆ. ಅದನ್ನು ಉಳಿಸಿ ಬೆಳೆಸುವುದು ಕನ್ನಡಿಗರ ಕರ್ತವ್ಯವಾಗಿದೆ. ಆದರೆ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜೋಷಿ ಸಂಘದಲ್ಲಿ ಎಳೆಂಟು ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಮೇಲಿನ 17 ಆರೋಪಗಳ ಪೈಕಿ 16 ಆರೋಪಗಳು ದೃಢಪಟ್ಟಿವೆ. ಸರ್ಕಾರ ಆತನನ್ನು ವಜಾ ಮಾಡಿ ಆಡಳಿತಾಧಿಕಾರಿಗಳ ನೇಮಕ ಮಾಡಿದ್ದಾರೆ. ಅವರಿಂದ ಗುಳುಂ ಮಾಡಿದ್ಧ ಅಷ್ಟೂ ಹಣ ರಿಕವರಿ ಮಾಡಬೇಕು. ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದು ಸಂಘದ ಬೆಳವಣಿಗೆಗೆ ಶ್ರಮಿಸಿ ಅಬಿವೃದ್ಧಿಪಡಿಸುವ ಬದಲು ನುಂಗಿ ನೀರು ಕುಡಿದ ಆತನನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಗೌರಿಬಿದನೂರಿನ ದಸ್ತಗಿರಿ ಸಾಬ್, ಬಂಡ್ಲಹಳ್ಳಿ ವಿಜಯ್ ಕುಮಾರ್, ಆರ್.ಜಿ.ಹಳ್ಳಿ ನಾಗರಾಜ್, ಸಿ.ಕೆ.ರಾಮೇಗೌಡ, ಪಾವೆಂ ಚಲಪತಿ ಗೌಡ, ಮತ್ತಿತರರು ಇದ್ದರು.