ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ ಎರಡು ದಶಕಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ನಮ್ಮೆಲ್ಲರ ನೆಚ್ಚಿನ ನಾಯಕನಾಗಿರುವ, ಸದಾ ಜಾತ್ಯಾತೀತ ಮತ್ತು ಪಕ್ಷಾತೀತಾ ರಾಜಕಾರಣ ಮಾಡಿಕೊಂಡು ಬರುತ್ತಿದ್ದು ಇಂತಹಾ ನಾಯಕರ ಸಂತಾನ ಹೆಚ್ಚಬೇಕೆಂದು ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲವು ರಾಜಕೀಯ ನಾಯಕರು ಮತ್ತು ಹಣ ಉಳ್ಳವರು ತಮ್ಮ ಜನ್ಮ ದಿನಾಚರಣೆಯನ್ನು ಆಡಂಬರದಿಂದ ಮಾಡಿಕೊಳ್ಳುತ್ತಾರೆ. ಆದರೆ ಎಚ್.ಎನ್. ವಿಜಯ್ ತಮ್ಮ ಜನ್ಮ ದಿನವನ್ನು ಹಲವು ಸೇವಾ ಕಾರ್ಯಗಳ ಜತೆಗೆ ಸಮಾಜದಲ್ಲಿ ನೊಂದವರು ಮತ್ತು ಪ್ರತಿಭಾವಂತವರಿಗೆ ಪುರಸ್ಕರಿಸಿ ಗೌರವಿಸುವುದರ ಮೂಲಕ ಆಚರಿಸಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.50 ವರ್ಷಗಳ ಸಾರ್ಥಕ ಜೀವನ ನಡೆಸಿರುವ ಎಚ್.ಎನ್. ವಿಜಯ್ ತಮ್ಮ ಜೀವನದುದ್ದಕ್ಕೂ ಸಮಾಜ ಮುಖಿ ಕಾರ್ಯಗಳ ಜತೆಗೆ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ದೀಪವಾಗಿದ್ದು ನಮ್ಮ ನಡುವೆ ಇಂತಹವರು ಇರುವುದು ನಮ್ಮ ಸುಕೃತ ಎಂದು ಕೊಂಡಾಡಿದರು.
ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ಎಲ್ಲಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುವುದರೊಂದಿಗೆ ಹಳೆ ಮೈಸೂರು ಪ್ರಾಂತ್ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆಯಿಸಿ ಅವರನ್ನು ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಮಾತನಾಡಿ, 50 ವಸಂತಗಳನ್ನು ಪೋರೈಸಿರುವ ನನ್ನ ಜನ್ಮ ದಿನಾಚರಣೆಯನ್ನು ಹುಟ್ಟೂರಿನ ಜನರು ಮತ್ತು ಅಭಿಮಾನಿಗಳು ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದು ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ನನ್ನ ನಲ್ಮೆಯ ಒಡನಾಡಿಗಳು ಭಾಗವಿಸುತ್ತಿದ್ದು ಪಕ್ಷಾತೀತವಾಗಿ ಆಗಮಿಸಿ ಆಶೀರ್ವದಿಸಬೇಕು ಎಂದು ಅವರು ಮನವಿ ಮಾಡಿದರು.