ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿನ ದ್ಯಾಮವ್ವ ದೇವಿ ದೇಗುಲದ ಬಳಿ ರವಿವಾರ ತಡರಾತ್ರಿ ಹೋಳಿ ಹಬ್ಬದ ಕಾಮದಹನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹಂತಿಪದ ಹಾಡುವ ಮೂಲಕ ಗಮನ ಸೆಳೆದಿದ್ದು, ಹಾಡಿನ ಮೂಲಕ ಎಲ್ಲರನ್ನು ಬೆಳ್ಳುಬ್ಬಿ ರಂಜಿಸಿದರು. ರೈತರು ಹಾಗೂ ತಮ್ಮ ಸಂಗಡಿಗರೊಂದಿಗೆ ಸೇರಿ ಸಾಂಪ್ರದಾಯಿಕ ಜಾನಪದ ಕಲೆಯ ಹಂತಿ ಪದಗಳನ್ನು ಹಾಡುವ ಮೂಲಕ ಮಾಜಿ ಸಚಿವರು ಸಾಂಪ್ರದಾಯಿಕ ಹಬ್ಬದ ಸವಿಯನ್ನು ಸವಿದರು. ಸುಮಾರು ಒಂದು ಗಂಟೆಗೂ ಅಧಿಕ ಸಮಯ ಬೆಳ್ಳುಬ್ಬಿ ಕಾಮದಹನ ಹಾಗೂ ಹಂತಿ ಪದ ಹಾಡುವ ವೇಳೆ ಸ್ಥಳೀಯ ಹಲವಾರು ಜನರು ಭಾಗವಹಿಸಿದ್ದರು.