ಮಾಜಿ ಸಚಿವ ಸಿ.ಎಸ್.ಪುಟ್ಟರಾಜು 63ನೇ ವರ್ಷದ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : Oct 11, 2026, 02:45 AM IST
10ಕೆಎಂಎನ್ ಡಿ15,16,17 | Kannada Prabha

ಸಾರಾಂಶ

ಅಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸಿ.ಎಸ್.ಪುಟ್ಟರಾಜು ಅವರು ಮಾಡದ ಅಭಿವೃದ್ಧಿ ಕೆಲಸಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ರಾಜ್ಯದಲ್ಲಿ ಹೆಸರು ಗಳಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಿಲಿ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ 63ನೇ ವರ್ಷದ ಹುಟ್ಟಹಬ್ಬವನ್ನು ರೋಗಿಗಳಿಗೆ, ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಹಾಗೂ ವಿಶೇಷಚೇತನ ಮಕ್ಕಳಿಗೆ ಊಟದ ವ್ಯವಸ್ಥೆ ಮತ್ತು ಹಲವು ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಅರ್ಥಪೂರ್ಣವಾಗಿ ಶನಿವಾರ ಆಚರಣೆ ಮಾಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಸೇರಿದ ನೂರಾರು ಕಾರ್ಯಕರ್ತರು, ಆಸ್ಪತ್ರೆ ಒಳ ಹಾಗೂ ಹೊರ ರೋಗಿಗಳಿಗೆ ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಅವರ ನೇತೃತ್ವದಲ್ಲಿ ಆಸ್ಪತ್ರೆ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿ ಸರಳವಾಗಿ ಆಚರಣೆ ಮಾಡಲಾಗಿದೆ ಎಂದರು.

ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಸಿ.ಎಸ್.ಪುಟ್ಟರಾಜು ಅವರು ಜಿಪಂ ಸದಸ್ಯರಾಗಿ, ಮೂರು ಬಾರಿ ಶಾಸಕರಾಗಿ, ಸಂಸದ, ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಪಡಿಸುವ ಮೂಲಕ ಅಪಾರ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಅಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಸಿ.ಎಸ್.ಪುಟ್ಟರಾಜು ಅವರು ಮಾಡದ ಅಭಿವೃದ್ಧಿ ಕೆಲಸಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ರಾಜ್ಯದಲ್ಲಿ ಹೆಸರು ಗಳಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಿಲಿ ಎಂದು ಹಾರೈಸಿದರು.

ಪುರಸಭೆ ಮಾಜಿ ಅಧ್ಯಕ್ಷ ಆರ್.ಸೋಮಶೇಖರ್ ಮಾತನಾಡಿ, ನಮ್ಮ ನಾಯಕ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಗಿತ್ತು, ಆದರೆ, ಬರಗಾಲದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸುತ್ತಿದ್ದೇವೆ. ಎಂದರು.

ಸಿ.ಎಸ್.ಪುಟ್ಟರಾಜು ಅವರು ಶಾಸಕ, ಸಚಿವರಾಗಿ ಕೆಲಸ ಮಾಡುತ್ತಿದ್ದಾಗ ಸಣ್ಣಹಳ್ಳಿಯಂತಿದ್ದ ಪಾಂಡವಪುರ ಪಟ್ಟಣವನ್ನು ನಗರವನ್ನಾಗಿ ಅಭಿವೃದ್ಧಿಪಡಿಸಿದರು. ಮೈಸೂರು ನಗರ ಸರಿಸಮವಾಗಿ ನಿರ್ಮಿಸಬೇಕೆಂದು ಕನಸ್ಸು ಕಂಡಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿ ರಾಜ್ಯಮೆಚ್ಚುವ ಹಲವಾರು ಅಭಿವೃದ್ಧಿ ಕೆಲಸಮಾಡಲೆಂದು ಹಾರೈಸಿದರು.

ಮುಖಂಡ ಎಂ.ಗಿರೀಶ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಅಭಿವೃದ್ದಿ ಕೆಲಸ ಮಾಡುವುದರಿಂದ ಎತ್ತಿದ್ದ ಕೈ. ಅವರು ಸಣ್ಣ ನೀರಾವರಿ ಸಚಿವರಾದ ವೇಳೆ ನಾವೆಲ್ಲ ಸಾಕಷ್ಟು ವಿರೋಧ ವ್ಯಕ್ತಪಡಿಸಿದೆವು, ಆದರೆ, ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಹಲವು ನೀರಾವರಿ ಯೋಜನೆ ಮಾಡುವ ಮೂಲಕ ಖಾತೆ ಗೌರವ ಹೆಚ್ಚಿಸಿದರು. ಮುಂದೆ ಬಂದ ಸರಕಾರದಲ್ಲಿ ಸಣ್ಣ ನೀರಾವರಿ ಖಾತೆ ನಮಗೆ ಬೇಕೆಂದು ಪಟ್ಟು ಹಿಡಿಯುವಷ್ಟರ ಮಟ್ಟದಲ್ಲಿ ಖಾತೆಯ ಘನತೆ ಹೆಚ್ಚಿಸಿದರು. ಹಾಗಾಗಿ ಮುಂದಿನ ದಿನಗಳಲ್ಲಿ ಸಿ.ಎಸ್.ಪುಟ್ಟರಾಜು ಅವರು ಮತ್ತೊಮ್ಮೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲೆಂದು ಹಾರೈಸಿದರು.

ಇದೇ ವೇಳೆ ಆಸ್ಪತ್ರೆ ಪೌರಕಾರ್ಮಿಕ ಮಹಿಳಾ ಸಿಬ್ಬಂದಿಗೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಅವರು ತಮ್ಮ ಚಿಕ್ಕಪ್ಪ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹೆಸರಿನಲ್ಲಿ ಗೌರವಧನ, ಹಣ್ಣುಹಂಪಲು ವಿತರಿಸಿದರು. ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ಮುಖಂಡರಾದ ಚಿಕ್ಕಾಡೆ ಸಿ.ಜಿ.ಪ್ರಸನ್ನಕುಮಾರ್, ಸಾಮಿಲ್ ಚೇತನ್ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ವಡ್ಡರಹಳ್ಳಿ ನಿಂಗೇಗೌಡ, ಆದರ್ಶ, ಅರಳಕುಪ್ಪೆ ಮಹದೇವು, ಎಚ್ ಎಸ್ ವಿ ಸ್ವಾಮೀಗೌಡ, ಅಲ್ಪಳ್ಳಿ ಗೋವಿಂದಯ್ಯ, ಮಾಣಿಕ್ಯನಹಳ್ಳಿ ಅಶೋಕ್, ಅಶ್ವಥ್ ಕುಮಾರೇಗೌಡ, ರಾಮಕೃಷ್ಣೇಗೌಡ, ಬೊಮ್ಮರಾಜು, ಎಂ.ಎಸ್.ಜಗದೀಶ್, ಗಡ್ಡ ರಮೇಶ್, ಚಲುವೇಗೌಡ, ಅರವಿಂದ್, ಉಮೇಶ್, ರಾಮಚಂದ್ರು, ಟೌನ್ ಚಂದ್ರು, ಗುರು, ಶಶಿ, ಪ್ರಶಾಂತ್, ಜ್ಯೋತಿಲಕ್ಷ್ಮಿ, ಅರ್ಚನ, ಸುನೀತ, ಗೀತ ಅರುಮುಗನ್ ಸೇರಿದಂತೆ ಪುರಸಭೆ ಮಾಜಿ ಸದಸ್ಯರು, ಮುಖಂಡರು ಹಾಜರಿದ್ದರು.

ದೇಗುಲಗಳಲ್ಲ ವಿಶೇಷ ಪೂಜೆ:

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಅಭಿಮಾನಿಗಳು ಗ್ರಾಮದ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ನಾಯಕರ ಹುಟ್ಟುಹಬ್ಬಕ್ಕೆ ಶುಭಕೋರಿದರು.

ಬಳಿಕ ದೇವಸ್ಥಾನದ ಮುಂಭಾಗ ಅಭಿಮಾನಿಗಳು ಸಾಂಕೇತಿಕವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ವಿತರಣೆ:

ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಹಾಗನಹಳ್ಳಿಯಲ್ಲಿ ಅಮ್ಮನ ಆಸರೆ ವೃದ್ಧಾಶ್ರಮದಲ್ಲಿ ಪಾಂಡವ ಸಿ.ಎಸ್.ಪಿ ಯುವ ಬಳಗದಿಂದ ವೃದ್ಧಾಶ್ರಮದಲ್ಲಿ ಎಲ್ಲಾ ವೃದ್ದರಿಗೆ ಹಣ್ಣುಹಂಪಲು ವಿತರಿಸಿ ನೆಚ್ಚಿನ ನಾಯಕನಿಗೆ ಶುಭಕೋರಿದರು. ಈ ವೇಳೆ ಬಳಗದ ಪದಾಧಿಕಾರಿಗಳಾದ ಕಾಮನಾಯಕನಹಳ್ಳಿ ರಾಮಚಂದ್ರು, ಮೇಲುಕೋಟೆ ಬಸವರಾಜು, ಕೆರೆತೊಣ್ಣೂರು ರಮೇಶ್, ದೇವೇಗೌಡನಕೊಪ್ಪಲು ಅರವಿಂದ್, ದೀಪುಬೆಟ್ಟಹಳ್ಳಿ, ಕಣಿವೆಕೊಪ್ಪಲು ರವಿ, ಅರಳಕುಪ್ಪೆ ಚಿದಾನಂದ್, ರವಿ, ನಿರಂಜನ್, ಕೃಷ್ಣಮೂರ್ತಿ, ರವಿಕಾಳೇಗೌಡನಕೊಪ್ಪಲು, ಮಹದೇವು, ಅಭಿ, ಬಕೋಡಿ,ಲೋಕೇಶ, ದೇವೇಗೌಡ, ಪುಟ್ಟರಾಜು, ಚೇತನ್, ರಾಜೇಶ್ ಪಾಂಡವಪುರ, ಸುನಿಲ್ ಸೇರಿದಂತೆ ಹಲವರು ಹಾಜರಿದ್ದರು.

ತಾಲೂಕಿನಾದ್ಯಂತ ಫ್ಲೆಕ್ಸ್, ಕಟೌಟ್ ಜೋರು:

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಪ್ಲೇಕ್ಸ್, ಕಟೌಟ್ ಹಾಕುವ ಮೂಲಕ ಶುಭಕೋರಿದರು. ಪಟ್ಟಣದ ಐದುದೀಪದ ವೃತ್ತ, ಮಂಡ್ಯ ಸರ್ಕಲ್, ಸಿ.ಎಸ್.ಪುಟ್ಟರಾಜು ಮನೆ ಸೇರಿದಂತೆ ಬೀದಿಬೀದಿಗಳಲ್ಲೂ ಪ್ಲೆಕ್ಸ್, ಬ್ಯಾನರ್ ಹಾಕಿ ಶುಭಕೋರಿದರೆ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಆಯಾ ಮುಖಂಡರು ಪ್ಲೆಕ್ಸ್, ಬ್ಯಾನರ್ ಹಾಕುವ ಮೂಲಕ ಅಭಿಮಾನ ಮೆರೆದರು.

ಸಿ.ಎಸ್.ಪುಟ್ಟರಾಜು ಆಧುನಿಕ ಭಗೀರಥ: ಎನ್.ಬಸವರಾಜು

ಕನ್ನಡಪ್ರಭ ವಾರ್ತೆ ಮಂಡ್ಯತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದ, ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಧುನಿಕ ಭಗೀರಥರಾಗಿದ್ದಾರೆ ಎಂದು ಭುವನ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಂಡಿಬೆಟ್ಹಳ್ಳಿ ಎನ್.ಬಸವರಾಜು ಬಣ್ಣಿಸಿದರು.

ತಮ್ಮ ಮೆಚ್ಚಿನ ನಾಯಕ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ಮಿಮ್ಸ್ ಆಸ್ಪತ್ರೆ ಹೆರಿಗೆ ವಾರ್ಡ್ ನಲ್ಲಿ ಗರ್ಭಿಣಿಯರು, ಸ್ತ್ರೀಯರಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.ಜಿಪಂ ಸದಸ್ಯರಾಗಿ, ಪಾಂಡವಪುರ ಕ್ಷೇತ್ರದ ಶಾಸಕರಾಗಿ, ನಂತರ ಮೇಲುಕೋಟೆ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾಗಿ ಸಣ್ಣ ನೀರಾವರಿ ಸಚಿವರಾಗಿ ಜನರಿಗೆ ಕುಡಿಯುವನೀರು, ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಆಧುನಿಕ ಭಗೀರಥರಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಧಿಕಾರ ಇರಲಿ, ಇಲ್ಲದಿರಲಿ ಸದಾ ಕ್ಷೇತ್ರದ ಜನರೊಂದಿಗೆ ಇದ್ದು ಕೆಲಸ ಮಾಡುವ ಸಿ.ಎಸ್.ಪುಟ್ಟರಾಜು ಅವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕೆರೆಕಟ್ಟೆಗಳನ್ನು ತುಂಬಿಸಿ, ರೈತರ ಸಮಸ್ಯೆಗಳನ್ನು ನಿವಾರಿಸಲು ಮತ್ತೊಮ್ಮೆ ರಾಜ್ಯದ ಸಚಿವರಾಗಿ ಜನ ಸೇವೆ ಮಾಡಲಿ ಎಂದು ಹಾರೈಸಿದರು.ಈ ವೇಳೆ ಭುವನ ವಿಶ್ವಕರ್ಮ ಸಮಾಜದ ಕೆ.ಸಿ ಶ್ರೀನಿವಾಸ್, ಮಹೇಶ್, ಈರಣ್ಣ, ಜಯಕುಮಾರ್, ಸಿದ್ದರಾಜು ಇದ್ದರು.

ಅನ್ನ ದಾಸೋಹ ಆಯೋಜನೆ:ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ನಗರದ ಮಿಮ್ಸ್ ಆಸ್ಪತ್ರೆ ಬಳಿಯ ಮಮತೆಯ ಮಡಿಲು ವತಿಯಿಂದ ನಡೆಯುವ ಸ್ತ್ರೀರೋಗ ಪ್ರಸೂತಿ ವಿಭಾಗದ ರೋಗಿಗಳು, ಸಂಬಂಧಿಕರಿಗೆ ಅನ್ನದಾಸೋಹ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಉತ್ತರ’ ಗೊಂದಲ ಕೆಪಿಎಸ್ಸಿ ಅಕ್ರಮ ಬೆಳಕಿಗೆ ಮೂಲ!
ಬ್ಯಾಂಕಾಕ್‌ ಪ್ರವಾಸಿಗರಿಂದ ₹1.73 ಕೋಟಿ ಡ್ರಗ್ಸ್‌ ಜಪ್ತಿ