ಮಾಜಿ ಶಾಸಕ ನಡಹಳ್ಳಿ ಕ್ಷಮೆಯಾಚಿಸಬೇಕು

KannadaprabhaNewsNetwork | Published : Jan 31, 2024 2:18 AM

ಸಾರಾಂಶ

ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ ಏನು? ಅವರಿಗ್ಯಾಕೆ ಪೌರ ಸನ್ಮಾನ ಮಾಡುವುದು ಎಂದು ವ್ಯಂಗವಾಡಿದ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ಕೂಡಲೇ ಅವರ ಹಿಂಪಡೆಯುವ ಮೂಲಕ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ನ್ಯಾಯವಾದಿ ವೈ.ಎಚ್.ವಿಜಯಕರ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ ಏನು? ಅವರಿಗ್ಯಾಕೆ ಪೌರ ಸನ್ಮಾನ ಮಾಡುವುದು ಎಂದು ವ್ಯಂಗವಾಡಿದ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ಕೂಡಲೇ ಅವರ ಹಿಂಪಡೆಯುವ ಮೂಲಕ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ನ್ಯಾಯವಾದಿ ವೈ.ಎಚ್.ವಿಜಯಕರ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ೨೦೧೩ ರಿಂದ ೧೮ರವೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಉತ್ತಮ ಜನಪರ ಆಡಳಿತ ನೀಡಿದ್ದು ಇಡೀ ರಾಜ್ಯದ ಜನರೇ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೇ ಮತಕ್ಷೇತ್ರದಲ್ಲಿನ ನಾಗರಬೆಟ್ಟ ಏತ ನಿರಾವರಿ, ಪೀರಾಪೂರ ಏತ ನಿರಾವರಿ ಯೋಜನೆಗೆ ಚಾಲನೆ ನೀಡುವ ಮೂಲಕ ಅನೇಕ ಅಭಿವೃದ್ಧಿ ಪೂರಕ ಯೋಜನೆಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿ ಈ ಭಾಗದ ರೈತರ ಭವಣೆಯನ್ನು ನೀಗಿಸಿದ ರೈತರ, ಬಡವರ,ಶೋಷಿತ ವರ್ಗದವರ, ಅಲ್ಪ ಸಂಖ್ಯಾತರು ಸೇರಿದಂತೆ ಮಹಿಳೆಯರ ಧ್ವನಿಯಾಗಿನಿಂತ ಜಾತ್ಯಾತೀತ ನಾಯಕರು ಎಂದರು.

ಸಿದ್ದರಾಮಯ್ಯನವರು ಅವರೊಬ್ಬ ಹಿಂದುಳಿದ ಸಮಾಜದವರಿದ್ದಾರೆ ಎನ್ನುವ ಕಾರಣಕ್ಕೆ ಒಬ್ಬ ರಾಜ್ಯದ ಮುಖ್ಯಮಂತ್ರಿಗಳು ಅಂತಹವರಿಗೆ ಇಡೀ ತಾಲೂಕಿನ ಎಲ್ಲ ವರ್ಗದ ಜನರು ಅತ್ಯಂತ ಗೌರವದಿಂದ ಪೌರ ಸನ್ಮಾನ ಮಾಡಲು ತೀರ್ಮಾನಿಸಿದರೇ ಅವರ ಸಾಧನೆ ಏನು. ಅವರಿಗ್ಯಾಕೆ ಪೌರ ಸನ್ಮಾನ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿರುವುದು ಸರಿಯಾದುದಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರ ಘನತೆ, ಅವರ ಸಾಧನೆ ಏನು ಎಂಬುವುದನ್ನು ಜನರೇ ಹೇಳುತ್ತಾರೆ. ಮುಖ್ಯಮಂತ್ರಿಗಳು ಎಂದರೇ ರಾಜ್ಯದ ದೊರೆ. ಅವರು ನಮ್ಮ ಮತಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದರೆ ಸಂತಸ ಪಡಬೇಕು. ರಾಜಕೀಯವಾಗಿ ವಿರೋಧಗಳು ಟೀಕೆಗಳು ಇರಲಿ, ಅಭಿವೃದ್ಧಿ ಪರವಾದ ವಾದಗಳು ಆರೋಗ್ಯಕರವಾಗಿರಲಿ. ಅದು ಸಾಮಾನ್ಯದ ಸಂಗತಿ ಎಂದು ತಿಳಿಸಿದರು.ಬಾಯಿಚಪಲಕ್ಕೆ ಮತ್ತು ಸಿದ್ದರಾಮಯ್ಯನವರ ಹೆಸರು ಹೇಳಿದರೇ ಮಾಧ್ಯಮಗಳಲ್ಲಿ ನನ್ನನ್ನು ಬಿಂಬಿಸಿ ಉಚಿತವಾಗಿ ಪ್ರಚಾರ ಪಡೆದುಕೊಳ್ಳುವ ಉದ್ದೇಶದಿಂದ ಅವರ ಸಾಧನೆ ಏನು? ಅವರಿಗ್ಯಾಕೆ ಪೌರ ಸನ್ಮಾನ ಎಂದು ಕೇಳುತ್ತಿರುವುದು ನಿಮ್ಮ ಘನತೆ ತಕ್ಕದ್ದಲ್ಲ. ಇದರಲ್ಲಿಯೇ ತಮ್ಮ ಕೀಳು ಭಾವನೆಯ ಸಂಸ್ಕೃತಿ ಎಂತಹದ್ದು ಎಂಬುವುದು ತೋರಿಸಿಕೊಡುತ್ತದೆ.

-ವೈ.ಎಚ್.ವಿಜಯಕರ, ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ನ್ಯಾಯವಾದಿ.

Share this article