- ಮುಂದಿನ ಪೀಳಿಗೆಗೆ ಸೌಲಭ್ಯ ದೊರೆಯಲು ಸಮೀಕ್ಷೆ ಸಹಕಾರಿ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಬಿದರಕೆರೆ ಗ್ರಾಮದ ನಿವಾಸದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು, ಗಣತಿದಾರ ಶಿಕ್ಷಕ ನಾಗರಾಜ ಅವರಿಗೆ ಮಾಹಿತಿ ನೀಡಲಾಯಿತು.ಎಚ್.ಪಿ.ರಾಜೇಶ್ ಮಾತನಾಡಿ ತಾಲೂಕಿನಾದ್ಯಂತ ಹಿಂದುಳಿದ, ಎಸ್ಸಿ-ಎಸ್ಟಿ, ಲಿಂಗಾಯಿತ ಸೇರಿದಂತೆ ಎಲ್ಲ ಸಮುದಾಯಗಳು ಆಯಾ ಜಾತಿ, ಉಪಜಾತಿಗಳನ್ನು ಕಲಂನಲ್ಲಿ ನಿರ್ದಿಷ್ಟವಾಗಿ, ಸ್ಪಷ್ಟವಾಗಿ ನಮೂದಿಸಬೇಕು. ಜಾತಿ ಸಮೀಕ್ಷೆಗೆ ಆಗಮಿಸುವ ಗಣತಿದಾರರಿಗೆ ಅಗತ್ಯ ದಾಖಲೆಗಳೊಂದಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.
ಮುಂದಿನ ಪೀಳಿಗೆಗೆ ಸರ್ಕಾರಿ ಸೌಲಭ್ಯಗಳಿಗಾಗಿ ಈ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಪರಿಶೀಲನಾ ಜಾತಿ ಸಮೀಕ್ಷೆ ಪೂರಕವಾಗಲಿದೆ. ಪ್ರತಿಯೊಂದು ಜಾತಿ ಮುಖಂಡರು, ವಿದ್ಯಾವಂತ ಯುವಕರು ತಮ್ಮ ತಮ್ಮ ಜಾತಿಯ ಅನಕ್ಷರಸ್ಥ ಕುಟುಂಬಗಳಿಗೆ ಜಾತಿಗಣತಿ ಮಾಹಿತಿ ಕುರಿತು ಜಾಗೃತಿ ಮೂಡಿಸಬೇಕು. ಜಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ನಾಯಕ ಸಮುದಾಯದವರು ಸಂಕೇತ C-38/2 ನಡಿ ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ನಾಯಕ ಎಂದು ಬರೆಸಬೇಕು ಎಂದರು.ಗಣತಿದಾರರ ಆ್ಯಪ್‌ನಲ್ಲಿ ಸಮೀಕ್ಷೆ ಮಾಹಿತಿ ಅಪ್ ಲೋಡ್ ಆಗಿ ಗಣತಿ ಯಶಸ್ವಿಯಾಯಿತು. ವರದಿಯ ದೃಢೀಕರಣ ಪ್ರಮಾಣಪತ್ರವನ್ನು ಸಹ ವಿತರಿಸಲಾಯಿತು.
- - --29ಜೆಜಿಎಲ್1:
ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ನಿವಾಸದಲ್ಲಿ ಸೋಮವಾರ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಸಮೀಕ್ಷೆಯ ಗಣತಿದಾರ ಶಿಕ್ಷಕ ನಾಗರಾಜ ಅವರಿಗೆ ಅಗತ್ಯ ಮಾಹಿತಿ ಒದಗಿಸಿದರು.