ಕನ್ನಡಪ್ರಭ ವಾರ್ತೆ ಆಲೂರು
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಟ್ಟಣದ ಬಿಲಿವಿರ‍್ಸ್ ಚರ್ಚಿನಲ್ಲಿ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಅಗಲಿಕೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರದಲ್ಲಿ ಜನಿಸಿ ಬಾಲ್ಯದಲ್ಲಿಯೇ ಕಡುಕಷ್ಟದಲ್ಲಿ ಬೆಳೆದು, ಉನ್ನತ ವ್ಯಾಸಂಗಗೈದು ಮೈಸೂರಿಗೆ ತೆರಳಿ ನೆಲೆನಿಂತು ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿ ವಿಭಾಗದಲ್ಲಿ ಉತ್ತಮೋತ್ತಮ ಕೃತಿಗಳನ್ನು ನೀಡುವುದರ ಮುಖೇನ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಇವರ ‘ನಾಯಿ ನೆರಳು’, ‘ವಂಶವೃಕ್ಷ’, ‘ಮತದಾನ’, ‘ತಬ್ಬಲಿಯು ನೀನಾದೆ ಮಗನೆ’ ನಾಲ್ಕು ಕಾದಂಬರಿಗಳು ಸಿನೆಮಾ ಆಗಿ ಮನಗೆದ್ದಿವೆ. ‘ದಾಟು’, ‘ಗೃಹಭಂಗ’ ದಾರವಾಹಿಗಳಾಗಿ ಖ್ಯಾತಿ ಪಡೆದರೆ, ‘ಪರ್ವ’ ನಾಟಕವಾಗಿ ಮನೆಸೂರೆಗೊಂಡಿದೆ. ಭಾರತೀಯ ಬಹುತೇಕ ಇತರೆ ಭಾಷೆಗಳಿಗೆ ಇವರ ಕಾದಂಬರಿಗಳು ತರ್ಜುಮೆಗೊಂಡು ಅಸಂಖ್ಯಾತ ಓದುಗರನ್ನು ತಲುಪಿದ್ದಾರೆ. ಭೈರಪ್ಪನವರ ಅಗಲಿಕೆ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಕತ್ತಲು ಕವಿದಂತಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಶಿಕ್ಷಕ ಕೆ.ಎಲ್.ವೆಂಕಟರಂಗಯ್ಯ ಮಾತನಾಡಿ, ನಾವು ಚಿಕ್ಕ ವಯಸ್ಸಿನಿಂದಲೇ ಭೈರಪ್ಪನವರ ಕಾದಂಬರಿಗಳನ್ನು ಓದಿಕೊಂಡು, ಅವರ ಧಾರವಾಹಿಗಳನ್ನು ವೀಕ್ಷಿಸಿಕೊಂಡು ಬೆಳೆದವರು. ಮುಂದಿನ ಹತ್ತಾರು ತಲೆಮಾರು ಬಂದರೂ ಇಂತಹ ಅದ್ಭುತವಾದ ಕಾದಂಬರಿಕಾರನನ್ನು ಕಾಣಲು ಸಾಧ್ಯವಿಲ್ಲವೇನೋ. ಗ್ರಾಮೀಣ ಬದುಕನ್ನು ತಮ್ಮ ಕಾದಂಬರಿಗಳಲ್ಲಿ ನೈಜವಾಗಿ ಚಿತ್ರಿಸುತ್ತಿದ್ದರು. ಅವರ ಬರವಣಿಗೆ ಶೈಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ ಎಂದರು.ಗ್ರಂಥಾಲಯ ಸಹಾಯಕರಾದ ಟಿ.ಕೆ.ನಾಗರಾಜ್ ಮಾತನಾಡಿ, ವಾರನ್ನದಲ್ಲಿ ಬೆಳೆದ ಭೈರಪ್ಪನವರಿಗೆ ಗ್ರಾಮೀಣ ಹಾಗೂ ಕಡುಬಡತನದ ಬದುಕಿನ ಸ್ಪರ್ಶವಿತ್ತು. ಬೆಂದು ಬಸವಳಿದು ಉನ್ನತ ಹಂತಕ್ಕೆ ತಲುಪಿದ್ದರಿಂದಲೇ ಅವರ ಕಾದಂಬರಿಗಳಲ್ಲಿ ತಳ ಸಮುದಾಯದ ತಲ್ಲಣಗಳನ್ನು ಹೃದ್ಯವಾಗಿ ಚಿತ್ರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾಗಮ್ಮ, ಸವಿತಾ, ಲೋಹಿಯಾ, ಅರ್ಚನಾ, ನಾಗೇಶ್, ಚಿರಂತ್ ಸೇರಿ ಹಲವರು ಉಪಸ್ಥಿತರಿದ್ದರು.