ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೋತ್ಸವ ಆಚರಣೆ

KannadaprabhaNewsNetwork | Published : May 22, 2024 12:48 AM

ಸಾರಾಂಶ

ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಆಧುನಿಕ ಭಾರತ ನಿರ್ಮಾಣದ ರೂವಾರಿ, ಮಾಜಿ ಪ್ರಧಾನಿ, ಭಾರತರತ್ನ ದಿ. ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು.

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಆಧುನಿಕ ಭಾರತ ನಿರ್ಮಾಣದ ರೂವಾರಿ, ಮಾಜಿ ಪ್ರಧಾನಿ, ಭಾರತರತ್ನ ದಿ. ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೋತ್ಸವ ಆಚರಿಸಲಾಯಿತು.

ದಿ. ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ ಮಾತನಾಡಿ, ರಾಜೀವ್ ಗಾಂಧಿ ದೇಶ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗಿ ಮಾಹಿತಿ, ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ವಿಶ್ವಮಟ್ಟದಲ್ಲಿ ಭಾರತ ತಂತ್ರಜ್ಞಾನದಲ್ಲಿ ವೇಗವಾಗಿ ಬೆಳೆಯಬೇಕೆನ್ನುವ ದೂರದೃಷ್ಟಿ ಅವರಲ್ಲಿತ್ತು. ಅದರ ಪರಿಣಾಮವಾಗಿ ಇಂದು ಎಲ್ಲರ ಕೈಯಲ್ಲಿಯೂ ಮೊಬೈಲ್, ಕಂಪ್ಯೂಟರ್‌ಗಳು ಇರುವಂತಾಗಿದೆ. ಮತದಾನದ ಹಕ್ಕನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಇಳಿಸಿ, ಯುವಕರೂ ಹಕ್ಕು ಚಲಾಯಿಸುವಂತೆ ಮಾಡಿದ್ದಾರೆ. ದಿ. ರಾಜೀವ್ ಗಾಂಧಿ ಅವರ ಸಾಧನೆಗಳನ್ನು ಇಂದಿಗೂ ದೇಶದ ಜನ ಮರೆತಿಲ್ಲ ಎಂದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜಣ್ಣ ನೀಲಗುಂದ, ಪುರಸಭೆ ಸದಸ್ಯೆ ಶಂಶಿಯಾ ಬಾಳೂರ, ಜಿಪಂ ಮಾಜಿ ಸದಸ್ಯರಾದ ಭರಮಣ್ಣ ಶಿವೂರ, ಕೊಟ್ರಪ್ಪ ಕುದರಿಸಿದ್ದನವರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಿವು ಭದ್ರಾವತಿ, ಶಿವು ತಳವಾರ, ಮುಖಂಡರಾದ ಭರಮಣ್ಣ ಶಿವೂರ, ಈರಣ್ಣ ಬೈಲವಾಳ, ಪುಟ್ಟಪ್ಪ ನರೇಗಲ್, ಮೆಹಬೂಬಅಲಿ ಬ್ಯಾಡಗಿ, ವಸಂತ ವೆಂಕಟಾಪೂರ, ಉಮೇಶ ದೊಡ್ಡಮನಿ, ಬಸನಗೌಡ ಪಾಟೀಲ, ರಾಮಚಂದ್ರ ಕಲ್ಲೇರ, ರಾಜೂ ಗಾಡಿಯವರ, ಅಶೋಕ ಹಲಸೂರ, ಉಮೇಶ ಮಾಳಗಿ, ವಿನಾಯಕ ಬಂಕನಾಳ, ನಾಗರಾಜ ಗಾಜಿಪೂರ, ಯಲ್ಲಪ್ಪ ಕಲ್ಲೇರ, ರಾಮಣ್ಣ ಬುಡ್ಡನವರ, ಸತ್ತಾರಸಾಬ ಅರಳೇಶ್ವರ, ಮಕ್ಬೂಲ್‌ಅಹ್ಮದ್ ರುಸ್ತುಂಖಾನವರ, ಅಲ್ತಾಹಿರ್ ಕಛವಿ, ಬಸವರಾಜ ಹುರುಳಿಕುಪ್ಪಿ, ಬಸವಣ್ಣೆಪ್ಪ ವಾಲಿಕಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article