ಕನ್ನಡಪ್ರಭ ವಾರ್ತೆ ಮಡಿಕೇರಿಹನಿಟ್ರ್ಯಾಪ್ ಬಲೆಗೆ ಬಿದ್ದು ನಿವೃತ್ತ ಯೋಧ ಸಂದೇಶ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟಿನಲ್ಲಿ ನಮೂದಿಸಿದ ವ್ಯಕ್ತಿಗಳಾದ ಪ್ರಕರಣದ ಕೇಂದ್ರ ಬಿಂದು ಜೀವಿತಾ ಎಂಬ ಮಹಿಳೆ ಮೇಲೆ ಎಫ್‌ಐಆರ್ ಸಂಖ್ಯೆ 112 /23 ಅನ್ವಯ ಮೊಕದ್ದಮೆ ದಾಖಲು ಮಾಡಿಕೊಳ್ಳಲಾಗಿತ್ತು.ಡೆತ್ ನೋಟ್‌ನಲ್ಲಿ ನಮೂದಿಸಲಾದ ಇತರ ನಾಲ್ವರಾದ ಜೀವಿತಾಳ ತಂಗಿ, ಅವಳ ತಾಯಿ, ಇಬ್ಬನಿ ಸ್ಪ್ರಿಂಗ್ ರೆಸಾರ್ಟ್ ಮಾಲೀಕ ಸತ್ಯ, ಪೊಲೀಸ್ ಸತೀಶ್ ಹಾಗೂ ಇತರರನ್ನು ಸೇರ್ಪಡೆಗೊಳಿಸಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 306, 384, ರೆಡ್ ವಿತ್ 34 IPC ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳು ಇದೀಗ ತಲೆಮರಿಸಿಕೊಂಡಿದ್ದು, ಪೊಲೀಸರು ಪ್ರತ್ಯೇಕ ತಂಡವನ್ನು ರಚಿಸಿ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.