ಸ್ಪೀಕರ್ ಖಾದರ ಹೇಳಿಕೆಗೆ ಮಾಜಿ ಸ್ಪೀಕರ್ ಕೋಳಿವಾಡ ಆಕ್ಷೇಪ

KannadaprabhaNewsNetwork | Published : Mar 28, 2025 12:35 AM

ಸಾರಾಂಶ

ನನ್ನ ಅವಧಿಯಲ್ಲಿ ಇಂತಹ ಗಂಭೀರವಾದ ಅಶಿಸ್ತಿನ ನಡವಳಿಕೆಗಳು ಸಂಭವಿಸಿಲ್ಲ. ಸಂಭವಿಸತಕ್ಕ ನಡವಳಿಕೆಗಳಿಗೆ ನಾನು ಎಂದೂ ಅವಕಾಶ ಕೊಟ್ಟಿರಲಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದರು.

ರಾಣಿಬೆನ್ನೂರು: ಬಿಜೆಪಿ ಶಾಸಕರ ಅಮಾನತು ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ ಹಿಂದಿನ ಸ್ಪೀಕರ್‌ಗಳಿಗೆ ಧೈರ್ಯವಿರಲಿಲ್ಲ ಎಂಬ ಹೇಳಿಕೆಗೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಬಹಳಷ್ಟು ನುರಿತ ಹಾಗೂ ಅನುಭವಸ್ಥ ರಾಜಕಾರಣಿಗಳು ಸಭಾಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಎಲ್ಲ ಹಿಂದಿನ ಸಭಾಧ್ಯಕ್ಷರನ್ನು ಸಾರಾಸಗಟಾಗಿ ಅಧೈರ್ಯಿಗಳು ಎನ್ನುವುದು ಎಷ್ಟು ಸೂಕ್ತ? ಸಭಾಧ್ಯಕ್ಷರಾಗಿ ನಿಯಮಾನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಧೈರ್ಯವಿದೆ ಅಂದ ಮಾತ್ರಕ್ಕೆ ಇಷ್ಟಬಂದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯೇ? ಶಾಸಕರ ಮೇಲೆ ಕ್ರಮ ಕೈಗೊಳ್ಳುವುದು ವಿಧಾನಸಭಾ ಅಧ್ಯಕ್ಷರ ಧೈರ್ಯದ ಮೇಲೆ ಅವಲಂಬಿತವಾಗಿರುವುದಿಲ್ಲ. ಕ್ರಮ ಕೈಗೊಳ್ಳುವುದು ಆ ಸಂದರ್ಭದಲ್ಲಿ ನಡೆಯುವ ಅಶಿಸ್ತಿನ ಗಾಂಭೀರ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.

ನನ್ನ ಅವಧಿಯಲ್ಲಿ ಇಂತಹ ಗಂಭೀರವಾದ ಅಶಿಸ್ತಿನ ನಡವಳಿಕೆಗಳು ಸಂಭವಿಸಿಲ್ಲ. ಸಂಭವಿಸತಕ್ಕ ನಡವಳಿಕೆಗಳಿಗೆ ನಾನು ಎಂದೂ ಅವಕಾಶ ಕೊಟ್ಟಿರಲಿಲ್ಲ. ವಿಧಾನಸಭಾ ಅಧ್ಯಕ್ಷರಾದವರು ವಿರೋಧ ಪಕ್ಷದವರಿಗೆ ಅವರ ಅಭಿಪ್ರಾಯವನ್ನು ಹೇಳಲು ಹೆಚ್ಚು ಅವಕಾಶಗಳನ್ನು ಕೊಡುವುದು ಸೂಕ್ತ. ವಿರೋಧ ಪಕ್ಷದವರಿಗೆ ಅವರದೇ ಆದ ಹೇಳಿಕೆಗಳು ಇರುತ್ತದೆ. ಸರ್ಕಾರಕ್ಕೆ ತನ್ನದೇ ಆದ ಹಾದಿ ಇರುತ್ತದೆ ಎಂದು ತಿಳಿಸಿದ್ದಾರೆ.ಜ್ಞಾನ, ಅನ್ನದಾಸೋಹ ಶ್ರೇಷ್ಠ ಕಾರ್ಯ

ಶಿಗ್ಗಾಂವಿ: ಜ್ಞಾನ ದಾಸೋಹದೊಂದಿಗೆ ಅನ್ನದಾಸೋಹ ಮಾಡುವ ಕಾರ್ಯ ಶ್ರೇಷ್ಠ. ಹೀಗಾಗಿ ಮಠಮಂದಿರಗಳು ಪರಂಪರಾಗತವಾಗಿ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿವೆ. ಗುರುವಿನ ಸೇವೆ ಸಮಾಜದ ಬೆಳವಣಿಗೆ ಕಾರಣವಾಗುತ್ತವೆ ಎಂದು ಸದಾಶಿವಪೇಟೆ ಶರಣಬಸವೇಶ್ವರ ದಾಸೋಹಮಠದ ಶಿವದೇವ ಶರಣ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸದಾಶಿವಪೇಟೆ ಶರಣಬಸವೇಶ್ವರ ದಾಸೋಹಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಣ್ಯದ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಬೆಳವಣಿಗೆಗೆ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ. ಅದರಿಂದ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಗುರುವಿನ ಸೇವೆ ಮಾಡುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು ಎಂದರು.

ಮಹಾದೇವಿ ಯಲ್ಲಪ್ಪ ಮರಿಸಿದ್ದಣ್ಣವರ, ಗಿರೀಶ ಕೊಟ್ಟಣ್ಣವರ, ಜ್ಯೋತಿ ಸದಾನಂದ ಕೊಟ್ರಣ್ಣವರ, ಕಾಶವ್ವ ಷಣ್ಮುಖಪ್ಪ ನರಗುಂದ, ನೇತ್ರಾವತಿ ಮಡಿವಾಳಪ್ಪ ನರಗುಂದ, ಗದಿಗೆಪ್ಪ ಶಿವಪ್ಪ ಪ್ಯಾಟಿ, ಶಿವಬಸಯ್ಯ ಹೊಸಮಠ, ಶಿದ್ದಲಿಗಂಗಯ್ಯ ಹೊಸಮಠ, ಧನುಜಾ ಪ್ಯಾಟಿ, ಸಂಗಯ್ಯ ಹೊಸಮಠ, ಗಂಗಯ್ಯ ಹೊಸಮಠ, ಬಸವಣೆಪ್ಪ ಕಿವುಡನವರ, ಶಿವಯೋಗೆಪ್ಪ ಕಿವುಡನವರ, ಚನ್ನಬಸಪ್ಪ ಗುಳೇದಕೇರಿ ಇದ್ದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕುಮಾರ ಶಾಸ್ತ್ರಿ ಹಿರೇಮಠ, ಬಾದಾಮಿ ರಮೇಶ ಗವಾಯಿ, ಫಕ್ಕೀರಪ್ಪ ವಡವಿ, ನರಸಲಗಿ ಚನ್ನಬಸವ, ಕುಮಾರ ಹೂಗಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Share this article