ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿ, ಅವರ ಆದರ್ಶ, ಸಾಧನೆ, ಮತ್ತು ದೇಶಸೇವೆ ಬಗ್ಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಅವರ ಸಾಧನೆಯ ನುಡಿನಮನ ಸಲ್ಲಿಸಿದ ನಿವೃತ್ತ ಪ್ರಾಂಶುಪಾಲ ನಾಗೇಗೌಡ ಮಾತನಾಡಿ, ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ಸುಧಾರಣೆ, ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಲು ಅವರ ಪ್ರಾಮುಖ್ಯ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.ನಿವೃತ್ತ ಪ್ರಾಂಶುಪಾಲ ಕಾಡ್ನೂರು ಶಿವೇಗೌಡ ಮಾತನಾಡಿ, ಮೌನ ಕಾಂತಿಯಾಗಿ ಕಾರ್ಯನಿರ್ವಹಿಸಿದ ಡಾ. ಮನಮೋಹನ್ ಸಿಂಗ್ ದೇಶದ ಆರ್ಥಿಕತೆಯಲ್ಲಿ ಹೊಸ ದಿಕ್ಕು ತೋರಿದ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರ ಆರ್ಥಿಕತೆಯ ದಿಗ್ವಿಜಯಕ್ಕೆ ನೀಡಿದ ಶ್ರಮ ಮಾತ್ರವಲ್ಲ, ಬಡವರಿಗೆ ತಲುಪುವಂತೆ ಮಾಡಿದ ಸುಧಾರಣೆ ಮಾದರಿಯಾಗಿದೆ. ಇಂತಹ ನಾಯಕನಿಂದ ಸಮಾಜದ ಋಣ ತೀರಿಸಲು ಆಡಳಿತ ನಡೆಸುವವರು, ನಾವು, ಯುವ ಪೀಳಿಗೆ ಪ್ರೇರಣೆ ಪಡೆಯಬೇಕು ಎಂದರು.
ಹಲಗನಹಳ್ಳಿ ಕಾಲೇಜು ಪ್ರಾಂಶುಪಾಲ ಡಿ.ಎ. ದಿನೇಶ್, ಗಾವಡಗೆರೆ ಕಾಲೇಜಿನ ಜನಾರ್ಧನ, ಕಾರ್ಯ ಕಾಲೇಜಿನ ನಾಗರಾಜ್, ಹಿರಿಯ ಉಪನ್ಯಾಸಕರಾದ ಸಿ.ಜೆ. ರೇವಣ್ಣ, ಲೋಕೇಶ್ ಹೆಬ್ಬಾಳು, ಗೋಪಾಲ್ ಇಲವಾಲ ಮತ್ತು ವೆಂಕಟೇಶ್ ಅವರು ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ ಹಾಗೂ ಸೇವೆಯನ್ನು ಸ್ಮರಿಸಿದರು.