ಕನ್ನಡಪ್ರಭ ವಾರ್ತೆ ಹುಕ್ಕೇರಿ ಕಳೆದು ಹೋದ ಮತ್ತು ಕದ್ದ ಮೊಬೈಲ್ ಫೋನ್ ಪತ್ತೆ ಹಚ್ಚಿರುವ ಹುಕ್ಕೇರಿ ಪೊಲೀಸರು, ಅವುಗಳನ್ನು ಮಾಲೀಕರಿಗೆ ಸಿಪಿಐ ಮಹಾಂತೇಶ ಬಸ್ಸಾಪುರ ಹಸ್ತಾಂತರಿಸಿದರು. ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಸುಮಾರು ₹ 3.50 ಲಕ್ಷ ಬೆಲೆ ಬಾಳುವ 10 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಕಳೆದು ಹೋದ ಮತ್ತು ಕದ್ದ ಮೊಬೈಲ್ ಫೋನ್ ಪತ್ತೆ ಹಚ್ಚಿರುವ ಹುಕ್ಕೇರಿ ಪೊಲೀಸರು, ಅವುಗಳನ್ನು ಮಾಲೀಕರಿಗೆ ಸಿಪಿಐ ಮಹಾಂತೇಶ ಬಸ್ಸಾಪುರ ಹಸ್ತಾಂತರಿಸಿದರು. ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಸುಮಾರು ₹ 3.50 ಲಕ್ಷ ಬೆಲೆ ಬಾಳುವ 10 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿತರಣೆ ಮಾಡಲಾಯಿತು.
ಕಳ್ಳತನವಾದ ಮೊಬೈಲಗಳನ್ನು ಸಿಇಐಆರ್ ವ್ಯವಸ್ಥೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ ಹುಕ್ಕೇರಿ ಪೊಲೀಸರು, ಸಿಪಿಐ ಕಚೇರಿಯಲ್ಲಿ ಶುಕ್ರವಾರ ಮಾಲೀಕರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ವೇಳೆ ಸಿಪಿಐ ಮಹಾಂತೇಶ ಬಸ್ಸಾಪೂರ ಮಾತನಾಡಿ, ಕಳೆದ ಮತ್ತು ಕದ್ದ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಸಿಇಐಆರ್ ವ್ಯವಸ್ಥೆ ಸಹಕಾರಿಯಾಗಿದ್ದು, ಈ ತಂತ್ರಜ್ಞಾನ ಫೋನ್ ಕಳ್ಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.