ಸಶಕ್ತ ವಿಕಸಿತ, ವಿಕಸಿತ ಭಾರತ ನಿರ್ಮಾಣಕ್ಕೆ ಅಡಿಪಾಯ:ಈರಣ್ಣ ಕಡಾಡಿ

KannadaprabhaNewsNetwork |  
Published : Jul 24, 2024, 12:19 AM IST
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ | Kannada Prabha

ಸಾರಾಂಶ

ಮೂಡಲಗಿ: ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ, ಸದೃಢ, ಸಶಕ್ತ ವಿಕಸಿತ, ವಿಕಸಿತ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರದ ಬಜೆಟ್ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸ್ವಾಗತಿಸಿದ್ದಾರೆ.

ಮೂಡಲಗಿ: ರೈತರು, ಯುವಕರಿಗೆ, ಮಹಿಳೆಯರಿಗೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸಲು, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ, ಸದೃಢ, ಸಶಕ್ತ ವಿಕಸಿತ, ವಿಕಸಿತ ಭಾರತ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರದ ಬಜೆಟ್ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸ್ವಾಗತಿಸಿದ್ದಾರೆ.

ಬಜೆಟ್‌ ಮುಂದಿನ 5 ವರ್ಷಗಳ ದಿಕ್ಸೂಚಿ ಬಜೆಟ್ ಆಗಿದ್ದು, 2047 ರಲ್ಲಿ ವಿಕಸಿತ ಭಾರತದ ಕನಸನ್ನು ನನಸಾಗಿಸುವ ಅಡಿಪಾಯ ಹಾಕುತ್ತದೆ.ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜಾನ, ಹಾಗೂ ಮೂಲ ಸೌಕರ್ಯ, ಗ್ರಾಮೀಣ ಅಭಿವೃದ್ದಿಗೆ ಪೂರಕವಾಗಿದೆ.

ರೈತರ ಮೇಲೆ ಹೆಚ್ಚಿನ ಗಮನ ಹರಿಸಿರುವ ಮೋದಿ ಸರ್ಕಾರ ಕೃಷಿ ಮತ್ತು ಕೃಷಿ ಸಂಬಂಧಿಸಿರುವ ವಲಯಕ್ಕೆ ₹1.52 ಲಕ್ಷ ಕೋಟಿ ಅನುದಾನ ನೀಡಿದೆ. ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್‌, ಸಾವಯವ ಕೃಷಿ, ಹಳ್ಳಿಗಳ ಅಭಿವೃದ್ಧಿಗೆ ಒತ್ತು, ಡಿಜಿಟಲ್ ಭೂ ಆಧಾರ್ ಯೋಜನೆ ಘೋಷಣೆ, ಗ್ರಾಮೀಣ ಭಾಗದಲ್ಲಿ ಭೂ ಸುಧಾರಣೆಗೆ ಹೆಜ್ಜೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣ, .ಗ್ರಾಮೀಣ ಅಭಿವೃದ್ಧಿಗೆ ₹ 2.66 ಲಕ್ಷ ಕೋಟಿ ನೀಡಿರುವುದು ಗಮನಾರ್ಹ.

ಎಸ್‌ಸಿ, ಎಸ್‌ಟಿ ಕುಶಲ ಕರ್ಮಿಗಳಿಗೆ ವಿಶೇಷ ಆದ್ಯತೆ, ಮುದ್ರಾ ಯೋಜನೆಗೆ ₹10 ಲಕ್ಷದಿಂದ ₹20 ಲಕ್ಷವರೆಗೆ ಸಾಲ ಹೆಚ್ಚಳ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ₹10 ಲಕ್ಷವರೆಗೆ ಸಾಲ ಸೌಲಭ್ಯ,ಪ್ರ ತಿ ವರ್ಷ 1 ಕೋಟಿ ವಿದ್ಯಾರ್ಥಿಗಳಿಗೆ ನೇರ ಸಾಲ ಸೌಲಭ್ಯ, ಪಿಎಂ ಸೂರ್ಯ ಘರ್ ಯೋಜನೆಯಡಿ 1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಒಂದು ಕೋಟಿ ಯುವಕರಿಗೆ 500 ದೊಡ್ಡ ಕಂಪನಿಗಳಲ್ಲಿ ಇಂಟರ್ನ್‌ಶಿಫ್, ಯುವಕರಿಗೆ 12 ತಿಂಗಳು ತರಬೇತಿ ಜೊತೆಗೆ ತಿಂಗಳಿಗೆ ₹5 ಸಾವಿರ ವೇತನ ನೀಡುವುದು, ಟಿಡಿಎಸ್ ಕಡಿಮೆಗೊಳಿಸಿರುವುದು ಸೇರಿದಂತೆ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೊಂಡಾಡಿದಾರೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ