ಕನ್ನಡಪ್ರಭ ವಾರ್ತೆ ಅಮೀನಗಡಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಥಮಿಕ ಹಂತವೇ ಬುನಾದಿ, ಪಾಲಕರು ಹಾಗೂ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವಂತೆ ಅಮೀನಗಡದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಚೇರ್‌ಮನ್, ವೈದ್ಯ ಡಾ.ಎಂ.ವಿ.ಹಾದಿಮನಿ ಹೇಳಿದರು.
ಈ ವೇಳೆ ಮಕ್ಕಳಿಗೆ ಆರತಿ ಬೆಳಗಿ, ಪುಷ್ಪಗುಚ್ಚ ನೀಡಿ ಬರಮಾಡಿಕೊಳ್ಳಲಾಯಿತು. ಅಧ್ಯಕ್ಷತೆಯನ್ನು ಆರ್.ಬಿ.ರೂಡಗಿ ವಹಿಸಿದ್ದರು. ಶಿಕ್ಷಕರಾದ ಎಸ್.ಎಂ.ರಜಪೂತ್, ಎಂ.ಎಚ್.ಗೌಡರ, ಎಸ್.ಬಿ.ಅಂಗಡಿ,ಗುರುಮಾತೆಯರಾದ ಎಂ.ಎಂ.ಕಲಕಂಬ, ಶ್ವೇತಾ ರಾಂಪುರ, ಎ.ಎಂ.ಕಲಾದಗಿ, ಎ.ಎಸ್.ನಿಡಗುಂದಿ, ಯರಿಗೇರಿ, ಜೋಶಿ, ಸುಮಿತ್ರಾ ಕಂಬಾಳಿಮಠ, ಬಡಿಗೇರ ಮುಂತಾದವರು ಭಾಗವಹಿಸಿದ್ದರು.