ಶರಣಮಠದಲ್ಲಿ ಸಭಾಗೃಹ ನಿರ್ಮಾಣಕ್ಕೆ ಅಡಿಗಲ್ಲು

KannadaprabhaNewsNetwork |  
Published : Feb 15, 2025, 12:30 AM IST
ಚಿತ್ರ ಶೀರ್ಷಿಕೆ - ಅಡಿಗಲ್ಲುಆಳಂದ: ಸ್ಥಳೀಯ ಶರಣನಗರದ ಸದ್ಗುರು ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಮಂಟಪದಲ್ಲಿ ಸಭಾಗೃಹ ನಿರ್ಮಾಣಕ್ಕೆ ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರು ಭೂಮಿ ಪೂಜೆ ನೆರವೇರಿಸಿದರು. ಸೂರ್ಯಕಾಂತ ತಟ್ಟಿ ಶರಣು ಸ್ವಾಮಿ ಮತ್ತು ಸಮಾಜ ಬಾಂಧವರಿದ್ದರು.  | Kannada Prabha

ಸಾರಾಂಶ

Foundation, stone, laid, construction auditorium, Sharanamath

ಆಳಂದ: ಶರಣನಗರದ ರೇವಣಸಿದ್ದ ಶಿವಶರಣಸ್ವಾಮಿಗಳ ಮಂಟಪದಲ್ಲಿ ಭಕ್ತರ ಧನಸಹಾಯದಿಂದ 25ಲಕ್ಷ ವೆಚ್ಚದ ಸಭಾಮಂಟಪ ನಿರ್ಮಾಣ ಕಾರ್ಯಕ್ಕೆ ಪೀಠಾಧಿಪತಿ ಶ್ರೀ ಚೆನ್ನಬಸವ ಪಟ್ಟದೇವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ರೇವಣಸಿದ್ಧ ಶಿವಶರಣಸ್ವಾಮಿ ಲಿಂ. 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆ ಈ ಪವಿತ್ರ ಕಾರ್ಯದ ಸವಿನೆನಪಿಗೆ ಸಭಾಮಂಟಪ ಶ್ರೀಘ್ರವೇ ನಿರ್ಮಾಣಗೊಳ್ಳುತ್ತಿದ್ದು, ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಪಟ್ಟದೇವರು ಹೇಳಿದರು.

ಶರಣಮಂಟಪದ ಕಮಿಟಿಯ ಅಧ್ಯಕ್ಷ ಸೂರ್ಯಕಾಂತ್ ತಟ್ಟಿ ಮಾತನಾಡಿದರು.ಸಿದ್ಧರೂಢ ಕಂಟೆ, ಭೀಮಣ್ಣಪ್ಪ ಸ್ವಾಮಿ ಶಟ್ಟಗುಂಡೆ, ಶ್ರೀಶೈಲ ಉಳ್ಳೆ, ರಾಜಶೇಖರ ಜನವೇರಿ, ರಾಜಶೇಖರ ವಮ್ಮಣೆ, ಉಮೇಶ ಹಿಪ್ಪರಗಿ, ಚಂದ್ರಕಾಂತ ಫುಲಾರೆ, ಪರಮೇಶ್ವರ ತಟ್ಟಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು, ಹಟಗಾರ ಸಮಾಜದ ಕಮಿಟಿಯ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ