ಶಿಕ್ಷಣಕ್ಕಾಗಿ ತುಮಕೂರಿಗೆ ಬರುವ ಹೆಣ್ಣುಮಕ್ಕಳಿಗೆ ಸುಸಜ್ಜಿತವಾದ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಕುಂಚಿಟಿಗರ ಸಂಘದ ಮಹಿಳಾ ಹಾಸೆಲ್ ನಿರ್ಮಾಣಕ್ಕೆ ಸರ್ಕಾರ ಒಂದು ಕೋಟಿ ರೂ. ಮಂಜೂರು ಮಾಡಿದೆ, ಬಾಕಿ ಹಣದ ಕೊರತೆ ಆಗದಂತೆ ವ್ಯವಸ್ಥೆ ಮಾಡೋಣ ಎಂದು ಶಿರಾ ಶಾಸಕ ಟಿ.ಬಿ. ಜಯಚಂದ್ರ ಭರವಸೆ ನಿಡಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಶಿಕ್ಷಣಕ್ಕಾಗಿ ತುಮಕೂರಿಗೆ ಬರುವ ಹೆಣ್ಣುಮಕ್ಕಳಿಗೆ ಸುಸಜ್ಜಿತವಾದ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಕುಂಚಿಟಿಗರ ಸಂಘದ ಮಹಿಳಾ ಹಾಸೆಲ್ ನಿರ್ಮಾಣಕ್ಕೆ ಸರ್ಕಾರ ಒಂದು ಕೋಟಿ ರೂ. ಮಂಜೂರು ಮಾಡಿದೆ, ಬಾಕಿ ಹಣದ ಕೊರತೆ ಆಗದಂತೆ ವ್ಯವಸ್ಥೆ ಮಾಡೋಣ ಎಂದು ಶಿರಾ ಶಾಸಕ ಟಿ.ಬಿ. ಜಯಚಂದ್ರ ಭರವಸೆ ನಿಡಿದರು.
ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದಿಂದ ನಗರದ ಬಟವಾಡಿಯ ಮಹಾಲಕ್ಷ್ಮಿ ನಗರದಲ್ಲಿ ಭಾನುವಾರ ಸುಮಾರು 3 ಕೋಟಿ ರೂ. ಅಂದಾಜು ವೆಚ್ಚದ ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇಂತಹ ಕಾರ್ಯಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ನನ್ನ ಅವರ ನಡುವೆ 40 ವರ್ಷಗಳ ರಾಜಕೀಯ ಒಡನಾಟವಿದೆ. ಅವರಿಂದ ಹೆಚ್ಚಿನ ನೆರವು ಪಡೆಯೋಣ, ಅವರು ನಮ್ಮ ಜೊತೆ ಇರುತ್ತಾರೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕುಂಚಿಟಿಗರ ಸಂಘದ ಬಾಲಕರ ಹಾಸೆಲ್‌ನಲ್ಲಿ 450 ವಿದ್ಯಾರ್ಥಿಗಳಿದ್ದಾರೆ. ಮಹಿಳಾ ಹಾಸ್ಟೆಲ್‌ನಲ್ಲಿ 250 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಲು ಸಾಧ್ಯವಾಗಿದೆ. ಬೇಡಿಕೆ ಹೆಚ್ಚಿರುವುದನ್ನು ಮನಗಂಡ ಸಂಘದ ಪದಾಧಿಕಾರಿಗಳು ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಕಾಳಜಿಯಿಂದ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಟಿ.ಬಿ. ಜಯಚಂದ್ರ ಅವರು ಕಳಂಕರಹಿತ ರಾಜಕಾರಣಿ. ಜನಪರ ಕೆಲಸಗಾರರು, ಹಿಡಿದ ಕೆಲಸವನ್ನು ಬದ್ಧತೆಯಿಂದ ಮಾಡುವವರು. ಇವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಬಹಳಷ್ಟು ಅನುಕೂಲವಾಗುತ್ತದೆ. ಇಂತಹ ಅನುಭವಿಗಳು ಸಚಿವಸಂಪುಟದಲ್ಲಿ ಇರಬೇಕು ಎಂದು ಹೇಳಿದರು.
ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ. ಶ್ರೀಧರ್, ಮಾಜಿ ಅಧ್ಯಕ್ಷ ಆರ್. ದೊಡ್ಡಲಿಂಗಪ್ಪ, ನಿವೃತ್ತ ಅಧಿಕಾರಿ ಡಾ. ಭೂವನಹಳ್ಳಿ ನಾಗರಾಜ್, ವಕೀಲರೂ ಆದ ಕೆಂಪೇಗೌಡ ಸೌಹಾರ್ದ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಶಿವರಾಮು, ಸಂಘದ ಉಪಾಧ್ಯಕ್ಷೆ ಸುನಂದ ಪಿ. ಕುಮಾರ್, ಕಾರ್ಯದರ್ಶಿ ಬಿ.ವಿ. ಶಿವರಾಜು, ಜಂಟಿ ಕಾರ್ಯದರ್ಶಿ ಸಿ. ಬಸವರಾಜು, ಖಜಾಂಚಿ ಎಲ್. ದೇವರಾಜು, ನಿರ್ದೇಶಕರಾದ ಅಶೋಕ್ ಕಾರ್ಪೇನಹಳ್ಳಿ, ಬಿ.ಎಸ್. ಜಗದೀಶ್‌ಗೌಡ, ಎಸ್.ಕೆ. ನಾಗರಾಜು, ಈರನಾಗಪ್ಪ, ಬಿ.ಆರ್. ಲಕ್ಷ್ಮಿಕಾಂತ್, ಕೆ.ಪಿ. ದಿನೇಶ್, ಟಿ. ರಾಮಯ್ಯ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.