ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ಏರ್ಪಡಿಸಲಾಗಿದ್ದ ಏಕ ಶಿಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ 10ನೇ ವರ್ಷದ ಏಕಶಿಲೋತ್ಸವ ಕನ್ನಡದ ಉತ್ಸವವಾಗಿ ಇಂದು ಕರ್ನಾಟಕದಾದ್ಯಂತ ಇನ್ನು ಹೆಚ್ಚಿನ ಕನ್ನಡ ಅಭಿಮಾನಿಗಳು ಹಾಗೂ ಚಾರಣಿಗರು ಆಗಮಿಸಲು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ ನಮ್ಮ ಮಧುಗಿರಿಯ ಖ್ಯಾತಿಯೂ ಸಹ ದುಪ್ಪಟ್ಟಾಗಲಿದೆ. ಜ್ಯೋತಿರಾಜ್ ಅವರು ಈಗಾಗಲೇ ಎಲ್ಲಾ ದೇಶಗಳಲ್ಲೂ ತಮ್ಮ ಸಾಧನೆಯನ್ನು ತೋರಿರುವುದು ನಮ್ಮ ಕರುನಾಡಿನ ಮಗನಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಅವರಿಗೆ ದೇವರು ಉತ್ತಮ ಆರೋಗ್ಯ, ಆಯಸ್ಸು ಕೊಟ್ಟು ಶಕ್ತಿ ಶಾಲಿಯಾಗಿ ಮತ್ತಷ್ಟು ಸಾಧನೆ ಮಾಡುವ ಶಕ್ತಿ ದಯಪಾಲಿಸಲಿ ಎಂದು ಶುಭ ಹಾರೈಸಿದರು.
ಚಿತ್ರದುರ್ಗದ ಪ್ರಸಿದ್ಧ ಜ್ಯೋತಿರಾಜ್ ಆಲಿಯಾಸ್ ಕೋತಿ ರಾಜ್ ಕಾರ್ಯಕ್ರಮದ ಪ್ರಧಾನ ಪಾತ್ರ ವಹಿಸಿ ಚಾರಣಿಗರಿಗೆ ಉತ್ಸಾಹ ತುಂಬಿ, ಏಕಶಿಲಾ ಬೆಟ್ಟದ ಮೇಲೆ ಧ್ವಜಾರೋಹಣ ಮಾಡಿದ್ದು ಜನರನ್ನು ಆಕರ್ಷಿಸಿತು.ಈ ವೇಳೆ ರಕ್ತದಾನಿ ಸರ್ಕಾರಿ ಶಿಕ್ಷಕರ ಬಳಗದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಏಕಶಿಲೋತ್ಸವ ಪ್ರತಿ ವರ್ಷವೂ ಒಂದೊಂದು ಹೊಸತನ ಮೈಗೂಡಿಸಿಕೊಂಡು ಇತಿಹಾಸ ನಿರ್ಮಿಸುತ್ತಿರುವುದು ಸಂತಸದ ವಿಷಯ. ಅದೇ ರೀತಿ ಈ ಬಾರಿ ಕೋತಿರಾಜ್ ಅವರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ಖುಷಿ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್, ಕರುನಾಡ ವಿಜಯ ಸೇನೆ ಅಧ್ಯಕ್ಷ ತಿಮ್ಮರಾಜು, ಕರ್ನಾಟಕ ಪ್ರಜಾಪರವೇದಿಕೆ ರಾಜ್ಯ ಉಪಾಧ್ಯಕ್ಷ ರಂಗನಾಥ್, ಮದುಗಿರಿಯ ಮಾಜಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಟಿವಿವಿ ಕಾಲೇಜ್ ವೆಂಕಟೇಶ್, ಗೀತಾ ನಾಗರಾಜು, ಲತಾ ಪ್ರದೀಪ್, ಡಾಕ್ಟರ್ ಜಯರಾಮ್, ನಂದೀಶ್, ಪ್ರಗತಿ ಕಿರಣ್ ಹಾಗೂ ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.