ಹಿರೇಬೆಟ್ಟು ಮಹಾಲಿಂಗೇಶ್ವರ ದೇವಳ ಜೀರ್ಣೋದ್ಧಾರ ಶಿಲಾನ್ಯಾಸ

KannadaprabhaNewsNetwork |  
Published : Jun 26, 2026, 03:00 AM IST
ಹಿರೇಬೆಟ್ಟು ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರಕ್ಕೆ ನ್ಯಾ. ಪುರುಷೋತ್ತಮ್ ಶಿಲಾನ್ಯಾಸ  | Kannada Prabha

ಸಾರಾಂಶ

ಹಿರೇಬೆಟ್ಟು ಭಟ್ರಕೋಡಿಯ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾಮಯ ಗರ್ಭಗೃಹದ ನೂತನ ಶಿಲೆಗಳಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಮ್.ಪುರುಷೋತ್ತಮ್ ಬುಧವಾರ ಚಾಲನೆ ನೀಡಿದರು.

ಹಿರಿಯಡ್ಕ: ಹಿರೇಬೆಟ್ಟು ಭಟ್ರಕೋಡಿಯ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶಿಲಾಮಯ ಗರ್ಭಗೃಹದ ನೂತನ ಶಿಲೆಗಳಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿಜೆಎಂ ಎಮ್.ಪುರುಷೋತ್ತಮ್ ಬುಧವಾರ ಚಾಲನೆ ನೀಡಿದರು.

ಶ್ರೀ ಕ್ಷೇತ್ರದ ತಂತ್ರಿ ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ಮಂಗಳೂರು ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಶಿಲಾನ್ಯಾಸದ ಶಿಲೆಗಳಿಗೆ ಅರಶಿನ, ಕುಂಕುಮ, ಹಾಲು, ಹೂಗಳನ್ನು ಸಮರ್ಪಿಸಿ, ಆರತಿಯನ್ನು ಬೆಳಗುವುದರ ಮೂಲಕ ಶುಭ ಕಾರ್ಯ ಆರಂಭಿಸಲಾಯಿತು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್, ಪ್ರಮುಖರಾದ ಸೀತಾರಾಮ್ ಭಟ್, ಜಯಪ್ರಕಾಶ್ ನಾಯಕ್, ಶಂಕರ ನಾಯಕ್, ಚಂದ್ರಶೇಖರ ನಾಯಕ್, ಸುಂದರ ಮೂಲ್ಯ, ನಾರಾಯಣ ಪೂಜಾರಿ, ಚಂದ್ರಯ್ಯ ಆಚಾರ್ಯ, ಪುರಂದರ ಆಚಾರ್ಯ, ರಮೇಶ್ ನಾಯಕ್, ಗುರುನಂದನ್ ನಾಯಕ್, ಗುರುದಾಸ್ ಭಂಡಾರಿ, ಸುಧೀರ್ ಶೆಟ್ಟಿ, ಶ್ಯಾಮ್ ನಾಯ್ಕ್, ಸುರೇಶ್ ನಾಯ್ಕ್, ಶೈಲೇಶ್ ಪೂಜಾರಿ, ಗುರುರಾಜ್ ಆಚಾರ್ಯ, ಶಶೀಂದ್ರ ಪೂಜಾರಿ, ದಿನೇಶ್ ಪ್ರಭು, ಡಾ.ಕೃಷ್ಣ ಮೂರ್ತಿ, ಕೇಶವ್ ಭಂಡಾರಿ, ಗೋಪಾಲ್ ನಾಯಕ್, ಕೇಶವ್ ನಾಯಕ್, ನಂದಕುಮಾರ್, ಮಹದೇವ್ ಭಟ್, ಮುರುಳೀಧರ್ ಲಾಗ್ವಂಕರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬಿಎಚ್‌ಐಎಂ ಘಟಕ ಉದ್ಘಾಟನೆ
ಕುಶಾಲನಗರ: ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಪ್ರಗತಿ ಪರಿಶೀಲನೆ